ನವದೆಹಲಿ:ಭಾರತದ ನೆಚ್ಚಿನ ಆನ್ಲೈನ್ ಫ್ಲಾಟ್ಫಾರ್ಮ್ಗಳಲ್ಲಿ ಒಂದು ಅಮೆಜಾನ್. ಈ ಅಮೆಜಾನ್ ಇಂಡಿಯಾ ಮುಂದಿನ ತಿಂಗಳು ಮಾರಾಟ ಶುಲ್ಕ ಪರಿಷ್ಕರಣೆಗೆ ಮುಂದಾಗಿದೆ. ಈ ಹಿನ್ನೆಲೆ ಕೆಲವು ನಿರ್ದಿಷ್ಟ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಲಿದ್ದು, ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಉತ್ಪನ್ನಗಳ ನಿರ್ವಹಣೆಗೆ ಫ್ಲಾಟ್ಫಾರ್ಮ್ ಶುಲ್ಕ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಮಾರಾಟ ಶುಲ್ಕ ಪರಿಷ್ಕರಣೆ ಏಪ್ರಿಲ್ 7ರಿಂದ ನಡೆಯಲಿದೆ. ಈ ಸಂಬಂಧ ಅಮೆಜಾನ್ ಇಂಡಿಯಾ ಹೊರಡಿಸಿದ್ದ ಪ್ರಕಟಣೆಯಲ್ಲಿ, 2023ರ ಮೇ ಅಲ್ಲಿ ಕಡೆಯದಾಗಿ ಮಾರಾಟ ಶುಲ್ಕ ರಚನೆ ಪರಿಷ್ಕರಣೆ ನಡೆಸಲಾಗಿತ್ತು. ಇದೀಗ ಮತ್ತೆ ಈ ಪರಿಷ್ಕರಣೆ ನಡೆಯಲಿರುವುದ ಕೆಲವು ವಸ್ತುಗಳ ದರ ಏರಿಕೆ ಕಾಣಲಿದೆ.
ಈ ಪರಿಷ್ಕರಣೆಯು 18ರಷ್ಟು ಜಿಎಸ್ಟಿಯನ್ನು ಒಳಗೊಂಡಿರುವುದಿಲ್ಲ. ಅಮೆಜಾನ್ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಅಮೆಜಾನ್ ವಿಧಿಸುವ ಶುಲ್ಕ ಇದಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟವಾಗುವ ಪ್ರತಿಯೊಂದು ವಸ್ತುವಿಗೆ ಮಾರಾಟಗಾರರಿಂದ ವಿಧಿಸಲಾಗುವ ಇಂತಹ ಶುಲ್ಕಗಳು ಇ ಕಾಮರ್ಸ್ ಆದಾಯದ ಪ್ರಮುಖ ಮೂಲವಾಗಿದೆ. ಅಮೆಜಾನ್ ಫ್ಲಾಟ್ಫಾರ್ಮ್ನಲ್ಲಿ ಮಾರಾಟ ಮಾಡಲು ವಸ್ತುಗಳಿಗೆ ಉತ್ಪನ್ನಗಳ ಸಂಸ್ಥೆಗಳು ಈ ಶುಲ್ಕವನ್ನು ಪಾವತಿ ಮಾಡಬೇಕು. ಈ ಶುಲ್ಕ ಏರಿಕೆಯು ಅಧಿಕ ಉತ್ಪನ್ನ ದರ ಹೊಂದಿರುವ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದ್ದು, ಇದು ಗ್ರಾಹಕರಿಗೆ ದುಬಾರಿಯಾಗಲಿದೆ.