ನವದೆಹಲಿ: ಭಾರತದಲ್ಲಿನ ಕನಿಷ್ಠ 37 ಸ್ಟಾರ್ಟ್ಅಪ್ಗಳು ಈ ವಾರ ಸುಮಾರು 310 ದಶಲಕ್ಷ ಡಾಲರ್ ಮೊತ್ತದ ಫಂಡಿಂಗ್ ಪಡೆದುಕೊಂಡಿವೆ. ಇದರಲ್ಲಿ 10 ಬೆಳವಣಿಗೆಯ ಹಂತದ ಫಂಡಿಂಗ್ ಡೀಲ್ಗಳು ಸೇರಿವೆ. ಕಳೆದ ವಾರ 21 ಸ್ಟಾರ್ಟ್ಅಪ್ಗಳು ದೇಶದಲ್ಲಿ ಸುಮಾರು 105 ಮಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿದ್ದವು.
ಈ ವಾರ ಜಿಪಿಎಸ್ ರಿನ್ಯೂವೇಬಲ್ಸ್ ಸೇರಿದಂತೆ 10 ಸ್ಟಾರ್ಟ್ಅಪ್ಗಳು 225.86 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿವೆ. ಜಿಪಿಎಸ್ ರಿನ್ಯೂವೇಬಲ್ಸ್ 50 ಮಿಲಿಯನ್ ಡಾಲರ್ ಸಾಲ ನಿಧಿಯನ್ನು ಪಡೆದುಕೊಂಡಿದೆ ಎಂದು ಎನ್ ಟ್ರಾಕರ್ ವರದಿ ಮಾಡಿದೆ. ಡೀಪ್ ಟೆಕ್ ಸ್ಟಾರ್ಟ್ಅಪ್ ಇಕೋಜೆನ್ ಸಂಪತ್ತು ನಿರ್ವಹಣಾ ಸಂಸ್ಥೆ ನುವೀನ್ ಸೇರಿದಂತೆ ಅಸ್ತಿತ್ವದಲ್ಲಿರುವ ಹೂಡಿಕೆದಾರರಿಂದ ಸಾಲ ಮತ್ತು ಈಕ್ವಿಟಿಯ ರೂಪದಲ್ಲಿ 30 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿದೆ.
ಆನ್ಲೈನ್ ಬಿ 2 ಬಿ ಮಾರ್ಕೆಟ್ ಪ್ಲೇಸ್ ಆಗಿರುವ ಪ್ರೊಕ್ ಮಾರ್ಟ್ ಸರಣಿ ಬಿ ಫಂಡಿಂಗ್ನಲ್ಲಿ, ನಂದನ್ ನಿಲೇಕಣಿ ಮತ್ತು ಸಂಜೀವ್ ಅಗರ್ವಾಲ್ ಅವರ ನೇತೃತ್ವದ ವಿಸಿ ಫಂಡ್ ಫಂಡಮೆಂಟಮ್ ಪಾರ್ಟ್ನರ್ ಶಿಪ್ ಮತ್ತು ಎಡೆಲ್ವೀಸ್ ಡಿಸ್ಕವರಿ ಫಂಡ್ನಿಂದ 30 ಮಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿದೆ. ಬ್ಲೂಮ್ ವೆಂಚರ್ಸ್ ಮತ್ತು ಇತರ ಪ್ರಮುಖ ಹೂಡಿಕೆದಾರರ ನೇತೃತ್ವದ ಗೇಮಿಂಗ್ ಸ್ಟಾರ್ಟ್ಅಪ್ ಲೈಟ್ ಫ್ಯೂರಿ ಗೇಮ್ಸ್ ತನ್ನ ಮೊದಲ ಸುತ್ತಿನಲ್ಲಿ 8.5 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿದೆ.