ಬೆಂಗಳೂರು/ ಹೈದರಾಬಾದ್: ಆಭರಣ ಪ್ರಿಯರಿಗೆ ಶುಭ ಸುದ್ದಿ, ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಸೋಮವಾರ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.79,975 ರಷ್ಟಿದ್ದರೆ, ಬುಧವಾರ ರೂ.1,110ರಷ್ಟು ಇಳಿಕೆಯಾಗಿ ರೂ.78,865ಕ್ಕೆ ತಲುಪಿದೆ. ಸೋಮವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ 91,556 ರೂ.ಗಳಾಗಿದ್ದರೆ, ಬುಧವಾರ ಅದು 201 ರೂ.ಕಡಿಮೆ ಆಗಿ 91,355 ರೂ.ಗೆ ವಹಿವಾಟು ನಡೆಸಿತು.
ಬೆಂಗಳೂರು:ಇನ್ನು 24 ಕ್ಯಾರೆಟ್ನ 10 ಗ್ರಾಂ ಬಂಗಾರಕ್ಕೆ 160 ಕಡಿಮೆ ಆಗಿ 77840 ರೂ ಗೆ ವಹಿವಾಟು ನಡೆಸುತ್ತಿದೆ.
ಗ್ರಾಂ | ಇಂದಿನ ಬೆಲೆ | ನಿನ್ನೆಯ ಬೆಲೆ | ಬದಲಾವಣೆ ದರ |
---|---|---|---|
1 | ₹7,784 | ₹7,800 | - ₹16 |
8 | ₹62,272 | ₹62,400 | - ₹128 |
10 | ₹77,840 | ₹78,000 | - ₹160 |
100 | ₹7,78,400 | ₹7,80,000 | - ₹1,600 |
ಬೆಂಗಳೂರಿನಲ್ಲಿ 10 ಗ್ರಾಂ ಆಭರಣ ಚಿನ್ನಕ್ಕೆ (22ಕ್ಯಾರೆಟ್) ಬಂಗಾರಕ್ಕೆ 150 ರೂ ಕಡಿಮೆ ಆಗಿ 71350 ರೂ ದಲ್ಲಿ ವಹಿವಾಟು ನಡೆಸುತ್ತಿದೆ.
1 (22 ಕ್ಯಾರೆಟ್) | ₹7,135 | ₹7,150 | - ₹15 |
8 ಗ್ರಾಂ | ₹57,080 | ₹57,200 | - ₹120 |
10 ಗ್ರಾಂ | ₹71,350 | ₹71,500 | - ₹150 |
100 ಗ್ರಾಂ | ₹7,13,500 | ₹7,15,000 | - ₹1,500 |
ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ:24 ಕ್ಯಾರೆಟ್ನ ಹತ್ತು ಗ್ರಾಂ ಚಿನ್ನದ ಬೆಲೆ ರೂ.78,865 ಆಗಿದೆ. ಪ್ರತಿ ಕೆಜಿ ಬೆಳ್ಳಿಯ ಇಂದಿನ ಬೆಲೆ 91,355 ರೂ.