ಜಗಿತ್ಯಾಲ (ತೆಲಂಗಾಣ):ಕೊರೊನಾ ವೈರಸ್ ಲಾಕ್‌ಡೌನ್ ಅನೇಕ ಜನರಿಗೆ ಶಾಪವಾಗಿ ಮಾರ್ಪಟ್ಟಿದ್ದರೆ, ಕೆಲವರಿಗೆ ಅದು ವರದಾನವಾಗಿದೆ. ಜಗಿತ್ಯಾಲ ಜಿಲ್ಲೆಯ ತುಂಗೂರಿನ ಯುವಕನೊಬ್ಬ ಲಾಕ್‌ಡೌನ್ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತನ್ನ ಯಶಸ್ಸಿನ ಹಾದಿಯನ್ನು ನಿರ್ಮಾಣ ಮಾಡಿಕೊಂಡಿದ್ದಾನೆ. ಬೇತಾಪು ಲಕ್ಷ್ಮಿ-ಮಲ್ಲಯ್ಯ ದಂಪತಿಯ ಪುತ್ರ ಸಂಜಯ್ ಕೇವಲ ಎರಡು ವರ್ಷಗಳಲ್ಲಿ ಬರೋಬ್ಬರಿ ಆರು ಸರ್ಕಾರಿ ಉದ್ಯೋಗಗಳನ್ನು ಗಳಿಸುವ ಮೂಲಕ ಭರವಸೆಯ ಜ್ಯೋತಿಯಾಗಿ ಹೊರಹೊಮ್ಮಿದ್ದಾರೆ.
ಇಂದು ಒಂದು ಸರ್ಕಾರ ನೌಕರಿ ಪಡೆಯಲು ಅದೆಷ್ಟೋ ಮಂದಿ ಹರಸಾಹಸ ಪಡುತ್ತಾರೆ. ಆದರೆ, ಈ ಯುವಕ ಸಂಜಯ್ ಒಂದಲ್ಲ ಎರಡಲ್ಲ ಬರೋಬ್ಬರಿ ಆರು ಸರ್ಕಾರಿ ನೌಕರಿ ಗಿಟ್ಟಿಸಿ, ಯುವಕರಿಗೆ ಮಾದರಿಯಾಗಿದ್ದಾನೆ.
ಅನಿಶ್ಚತತೆಗಳ ನಡುವೆ ಆರಂಭವಾಗಿ.. ಈಗ: ಸಂಜಯ್‌ನ ಪ್ರಯಾಣವು ಅನಿಶ್ಚಿತತೆಗಳ ನಡುವೆ ಪ್ರಾರಂಭವಾಯಿತು. ಲಾಕ್‌ಡೌನ್ ವೇಳೆ ಮನೆಗೆ ಹೋಗಿ ಸಮಯವನ್ನು ಕಳೆಯುವ ಬದಲು, ತನ್ನ ಸ್ನೇಹಿತರ ಬೆಂಬಲವನ್ನು ಬಳಸಿಕೊಂಡ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಠಿಣ ತಯಾರಿ ನಡೆಸಿದರು ಸಂಜಯ್. 2022ರಲ್ಲಿ ರೈಲ್ವೇಸ್‌ನ ಗ್ರೂಪ್ D ನಲ್ಲಿ ತನ್ನ ಮೊದಲ ಉದ್ಯೋಗವನ್ನು ಪಡೆದುಕೊಂಡಾಗ ಅವರ ದೃಢಸಂಕಲ್ಪವು ಫಲ ನೀಡಿತು. ಈ ಯಶಸ್ಸಿನಿಂದ ಹಿಂಜರಿಯದ ಸಂಜಯ್ ಮತ್ತಷ್ಟು ಅವಕಾಶಗಳನ್ನು ಪಟ್ಟುಹಿಡಿದು, ಗಮನಾರ್ಹ ಸಾಧನೆಗಳಲ್ಲಿ ಉತ್ತುಂಗಕ್ಕೇರಿದರು. ಅವರು ಕಾನ್‌ಸ್ಟೆಬಲ್ (ಅಬಕಾರಿ), ಟೌನ್ ಪ್ಲಾನಿಂಗ್ ಬಿಲ್ಡಿಂಗ್ ಆಫೀಸರ್, ಗ್ರೂಪ್ -4, ಎಇಇ (ಸಿವಿಲ್), ಮತ್ತು ಎಇ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸ್ಥಾನಗಳನ್ನು ಪಡೆದರು. ಇವೆಲ್ಲವನ್ನೂ 2023 ರಲ್ಲಿ ಟಿಎಸ್‌ಪಿಎಸ್‌ಸಿ ಆಯೋಜಿಸಿತ್ತು.