ಕರ್ನಾಟಕ

karnataka

ETV Bharat / bharat

ಉದಯಪುರದಿಂದ ಅಯೋಧ್ಯೆಗೆ ಯುವಕರ ಸೈಕಲ್ ಯಾತ್ರೆ : ನಾಲ್ಕು ದಿನಗಳಲ್ಲಿ 1,100 ಕಿ.ಮೀ ಪ್ರಯಾಣ - ಅಯೋಧ್ಯೆ

ಇಂದು ಬೆಳಗ್ಗೆ ಉದಯಪುರದಿಂದ ಯುವಕರು ಪ್ರಯಾಣ ಪ್ರಾರಂಭಿಸಿದ್ದು, ಫೆಬ್ರವರಿ 22ಕ್ಕೆ ಅಯೋಧ್ಯೆಗೆ ತಲುಪಿ ಶ್ರೀರಾಮನ ದರ್ಶನ ಪಡೆಯಲಿದ್ದಾರೆ.

youth-cycle-trip-from-udaipur-to-ayodhya-1100-km-travel-in-four-days
ಉದಯಪುರದಿಂದ ಅಯೋಧ್ಯೆಗೆ ಸೈಕಲ್​ನಲ್ಲಿ ಹೊರಟಿರುವ ಯುವಕರು: ನಾಲ್ಕು ದಿನಗಳಲ್ಲಿ 1,100 ಕಿ.ಮೀ ಪ್ರಯಾಣ

By ETV Bharat Karnataka Team

Published : Feb 17, 2024, 2:32 PM IST

ಉದಯಪುರ(ರಾಜಸ್ಥಾನ): ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲದ ಪ್ರತಿಷ್ಠಾಪನೆ ಆದಾಗಿನಿಂದ ಲಕ್ಷಾಂತರ ಭಕ್ತರು ರಾಮನ ದರ್ಶನಕ್ಕೆ ತೆರಳುತ್ತಿದ್ದಾರೆ. ಭಗವಂತನ ದರ್ಶನಕ್ಕೆ ಭಕ್ತರು ಬೇರೆ ಬೇರೆ ರೀತಿಯಲ್ಲಿ ಅಯೋಧ್ಯೆಗೆ ತಲುಪುತ್ತಿದ್ದಾರೆ. ಉದಯಪುರದ ಇಬ್ಬರು ಯುವಕರು ರಾಮನ ದರ್ಶನ ಪಡೆಯಲು ಸೈಕಲ್‌ನಲ್ಲಿ ಅಯೋಧ್ಯೆಗೆ ಪ್ರಯಾಣ ಪ್ರಾರಂಭಿಸಿದ್ದಾರೆ.

4 ದಿನಗಳಲ್ಲಿ ಸುಮಾರು 1100 ಕಿ.ಮೀ ಪ್ರಯಾಣ: ರಾಮನ ಭಕ್ತರಾದ ಉದಯಪುರದ ಜಿತೇಂದ್ರ ಪಟೇಲ್ ಮತ್ತು ರಿಷಬ್ ಜೈನ್ ಅಯೋಧ್ಯೆಯ ರಾಮಲಾಲನ ದರ್ಶನಕ್ಕಾಗಿ ಅಯೋಧ್ಯೆಗೆ ಸೈಕಲ್ ಯಾತ್ರೆ ಮಾಡಿದ್ದಾರೆ. ಶನಿವಾರ ಬೆಳಗ್ಗೆ 5.15ಕ್ಕೆ ಫತೇ ಶಾಲೆಯ ಫತೇಹ್ ಬಾಲಾಜಿ ದೇವಸ್ಥಾನದಲ್ಲಿ ಬಾಲಾಜಿಯ ದರ್ಶನ ಪಡೆದು ನಂತರ ಇಬ್ಬರೂ ಪ್ರಯಾಣಕ್ಕೆ ನಾಂದಿ ಹಾಡಿದ್ದಾರೆ. ಉದಯಪುರ ಮೇವಾರಿ ರನ್ನರ್ಸ್ ಸೈಕ್ಲಿಂಗ್ ಕ್ಲಬ್ ಸೇರಿದಂತೆ ಸೈಕ್ಲಿಂಗ್ ಪ್ರೇಮಿಗಳು ಸ್ಥಳದಲ್ಲಿ ಹಾಜರಿದ್ದು, ಯುವಕರಿಬ್ಬರನ್ನು ಪ್ರೋತ್ಸಾಹಿಸಿದರು.

ತಮ್ಮ ಯಾತ್ರೆಯ ಬಗ್ಗೆ ಜಿತೇಂದ್ರ ಪಟೇಲ್ ಮಾತನಾಡಿ, "ಯಾವುದೇ ಪ್ರಶಸ್ತಿಗಾಗಿ ಈ ಪ್ರಯಾಣವನ್ನು ಕೈಗೊಳ್ಳುತ್ತಿಲ್ಲ. ಬದಲಿಗೆ ರಾಮ್ ಲಲ್ಲಾನ ದರ್ಶನ ಪಡೆಯುವುದೇ ನಮಗೆ ದೊಡ್ಡ ಪ್ರಶಸ್ತಿಯಾಗಿದೆ" ಎಂದು ಹೇಳಿದರು.

ನಮ್ಮ ಉತ್ಸಾಹ ದುಪ್ಪಟ್ಟಾಗಿದೆ;"ಭಕ್ತಿ ಭಾವವಿದೆ, ರಾಮನನ್ನು ನೋಡುವ ಉತ್ಸಾಹ ದುಪ್ಪಟ್ಟಾಗಿದೆ. 500 ವರ್ಷಗಳ ಕಾಯುವಿಕೆ ಮುಗಿದಿದೆ. ಭಕ್ತರಂತೆ ದರ್ಶನಕ್ಕೆ ಹೊರಟಿದ್ದೇವೆ. 1100 ಕಿಲೋಮೀಟರ್‌ ಪ್ರಯಾಣವನ್ನು 4 ದಿನಗಳಲ್ಲಿ ಪೂರ್ಣಗೊಳಿಸುವ ಗುರಿ ನಮ್ಮದಾಗಿದೆ. ಇದಕ್ಕೂ ಮೊದಲು ನನಗೆ ಅನೇಕ ದೊಡ್ಡ ಸ್ಪರ್ಧೆಗಳು ಮತ್ತು ಓಟಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅವೆಲ್ಲಕ್ಕಿಂತ ಇದು ಹೆಚ್ಚು ಉತ್ಸಾಹವಾಗಿದೆ. ಯಾಕೆಂದರೆ ಮೊದಲ ಬಾರಿಗೆ ನಮಗೆ ರಾಮಲಲ್ಲಾನ ದರ್ಶನಕ್ಕೆ ಅವಕಾಶ ಸಿಗುತ್ತಿದೆ" ಎಂದು ರಿಷಬ್ ಜೈನ್ ಹೇಳಿದ್ದಾರೆ.

ಸೈಕಲ್ ಯಾತ್ರೆಯಲ್ಲಿ ಈ ಯುವಕರು ಮೊದಲ ದಿನ ಉದಯಪುರದಿಂದ ಕೋಟಾಗೆ 300 ಕಿ.ಮೀ, ಎರಡನೇ ದಿನ ಕೋಟಾದಿಂದ ಶಿವಪುರಿಗೆ 230 ಕಿ.ಮೀ, ಶಿವಪುರಿಯಿಂದ ಕಾನ್ಪುರಕ್ಕೆ 327 ಕಿ.ಮೀ ಹಾಗೂ ನಾಲ್ಕನೇ ದಿನ ಶ್ರೀರಾಮನನ್ನು ತಲುಪಲು ಕಾನ್ಪುರದಿಂದ ಅಯೋಧ್ಯೆಗೆ 220 ಕಿಲೋಮೀಟರ್ ಸೈಕಲ್ ಸವಾರಿ ಮಾಡುತ್ತಾರೆ. ಫೆಬ್ರವರಿ 22 ರಂದು ಅಯೋಧ್ಯೆಗೆ ತಲುಪಿ ರಾಮನ ದರ್ಶನ ಪಡೆಯಲಿದ್ದಾರೆ.

ಇದನ್ನೂ ಓದಿ:ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್

ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಲಲ್ಲನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದರು. ಆ ಬಳಿಕ ಅಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ನೀಡಿ ಮರ್ಯಾದಾ ಪುರುಷೋತ್ತಮನ ದರ್ಶನ ಪಡೆದು ಪಾವನರಾಗಿದ್ದಾರೆ.

ABOUT THE AUTHOR

...view details