ಕರ್ನಾಟಕ

karnataka

ETV Bharat / bharat

ಇಂದು ವಿಶ್ವ ಸಿಂಹಗಳ ದಿನ: ಏಷ್ಯಾಟಿಕ್ ಲಯನ್ಸ್​​​ ಸಂತತಿಯನ್ನು ಉಳಿಸಿ ಬೆಳೆಸುತ್ತಿದೆ ಭಾರತ - WORLD LION DAY - WORLD LION DAY

ಜಾಗತಿಕವಾಗಿ ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹಗಳ ದಿನವನ್ನು ಆಚರಿಸಲಾಗುತ್ತದೆ. ಸಿಂಹಗಳ ಸಂರಕ್ಷಣೆಗೆ ಈ ದಿನವನ್ನು ಜಾಗೃತಿ ದಿನವನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

CLIMATE CHANGE  HABITAT LOSSE  NDANGERED SPECIES  PUBLIC AWARENESS
ಏಷ್ಯಾಟಿಕ್ ಸಿಂಹಗಳ ಸಂತತಿ ಕಾಪಾಡುತ್ತಿದೆ ಭಾರತ (ETV Bharat)

By ETV Bharat Karnataka Team

Published : Aug 10, 2024, 2:03 PM IST

ಹೈದರಾಬಾದ್: ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವಾದ್ಯಂತ ವರ್ಲ್ಡ್​​ ಲಯನ್ಸ್​​ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಗುರಿ ಎಂದರೆ ಅದು ಸಿಂಹಗಳ ಸಂರಕ್ಷಣೆ ಮತ್ತು ರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಪ್ರಪಂಚದಾದ್ಯಂತ ಈ ಭವ್ಯವಾದ ಪ್ರಾಣಿಗಳು ಎದುರಿಸುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವುದು ಮತ್ತು ಅವುಗಳ ನಿರಂತರ ಅಸ್ತಿತ್ವವನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳನ್ನು ಉತ್ತೇಜಿಸುವುದು ಈ ವಿಶ್ವ ಸಿಂಹ ದಿನದ ಆಚರಣೆ ಗುರಿಗಳಾಗಿವೆ.

ವಿಶ್ವ ಸಿಂಹ ದಿನವು ಸಿಂಹಗಳ ಆವಾಸಸ್ಥಾನದ ನಾಶ, ಹವಾಮಾನ ಬದಲಾವಣೆ ಮತ್ತು ಅಕ್ರಮ ವನ್ಯಜೀವಿ ವ್ಯಾಪಾರದಂತಹ ಅಂಶಗಳಿಂದಾಗಿ ಸಿಂಹಗಳ ಸಂಖ್ಯೆಯು ತೀವ್ರವಾಗಿ ಕುಸಿಯುತ್ತಿದೆ ಮತ್ತು ತ್ವರಿತವಾಗಿ ಅಳಿವಿನಂಚಿನಲ್ಲಿರುವ ಜಾತಿಯ ಸ್ಥಿತಿಯನ್ನು ಸಮೀಪಿಸುತ್ತಿದೆ. ಪ್ರಸ್ತುತ ಜಾಗತಿಕ ಸಿಂಹದ ಸಂಖ್ಯೆಯು 30,000 ಮತ್ತು 100,000 ನಡುವೆ ಇದೆ ಎಂದು ಅಂದಾಜಿಸಲಾಗಿದೆ.

ವಿಶ್ವ ಸಿಂಹಗಳ ದಿನದ ಮಹತ್ವ:ಪ್ರತಿ ವರ್ಷ ಆಗಸ್ಟ್ 10ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಸಿಂಹಗಳು ಎದುರಿಸುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ದಿನವಾಗಿದೆ. ಸಿಂಹಗಳ ವೈಜ್ಞಾನಿಕ ಹೆಸರು ಪ್ಯಾಂಥೆರಾ ಲಿಯೋ. ಅತ್ಯಂತ ಪ್ರಸಿದ್ಧ ಮತ್ತು ಗುರುತಿಸಬಹುದಾದ ಪ್ರಾಣಿ ಜಾತಿಗಳಲ್ಲಿ ಇದು ಒಂದಾಗಿದೆ. ಸಿಂಹವು 'ಕಿಂಗ್ಸ್ ಆಫ್ ದಿ ಜಂಗಲ್' ಎಂಬ ಬಿರುದನ್ನು ಗಳಿಸಿದೆ.

ಸಿಂಹಗಳನ್ನು ಪೂಜಿಸಲಾಗುತ್ತದೆ. ಸಿಂಹದ ಶಕ್ತಿಯುತ ಘರ್ಜನೆ ಸುಮಾರು ಐದು ಮೈಲುಗಳಷ್ಟು ದೂರದವರೆಗೂ ಕೇಳಿಸುತ್ತದೆ. 'ದಿ ಲಯನ್ ಕಿಂಗ್'ನ ಸಿಂಬಾದಂತಹ ಜನಪ್ರಿಯ ಪಾತ್ರಗಳಿಂದಾಗಿ ಸಿಂಹಗಳು ಜನರಿಗೆ, ವಿಶೇಷವಾಗಿ ಮಕ್ಕಳಿಗೆ ಇಷ್ಟವಾಗುತ್ತವೆ ಮತ್ತು ಜನಪ್ರಿಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಅವುಗಳ ಐತಿಹಾಸಿಕ ಸಮೃದ್ಧಿಯ ಹೊರತಾಗಿಯೂ ಬೇಟೆಯ-ಸಂಬಂಧಿತ ಚಟುವಟಿಕೆಗಳಿಂದ ಕಳೆದ ಶತಮಾನದಲ್ಲಿ ಸಿಂಹಗಳ ಸಂಖ್ಯೆಯು ತೀವ್ರವಾಗಿ ಕುಸಿಯಲು ಕಾರಣವಾಗಿವೆ.

ವಿಶ್ವ ಸಿಂಹಗಳ ದಿನದ ಇತಿಹಾಸ:ಚಲನಚಿತ್ರ ನಿರ್ಮಾಪಕರು ಮತ್ತು ಪರಿಸರವಾದಿಗಳಾದ ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ ಸಿಂಹಗಳನ್ನು ರಕ್ಷಿಸುವ ಗುರಿಯೊಂದಿಗೆ 2009 ರಲ್ಲಿ ಬಿಗ್ ಕ್ಯಾಟ್ ಇನಿಶಿಯೇಟಿವ್ (ಬಿಸಿಐ) ಅನ್ನು ಸ್ಥಾಪಿಸಿದರು. ಈ ಕಾಡು ಬೆಕ್ಕುಗಳ ಮೇಲೆ ಬೇಟೆಯಾಡುವುದು ಸಾಮಾನ್ಯವಾಗುತ್ತಿದೆ. ಅಸ್ತಿತ್ವದಲ್ಲಿರುವ ಸಿಂಹ ಜಾತಿಗಳನ್ನು ಉಳಿಸುವ ಪ್ರಯತ್ನದಲ್ಲಿ, ನ್ಯಾಷನಲ್ ಜಿಯಾಗ್ರಫಿಕ್ ಮತ್ತು ಬಿಗ್ ಕ್ಯಾಟ್ ಇನಿಶಿಯೇಟಿವ್ (ಬಿಸಿಐ) ಅನ್ನು ಸ್ಥಾಪಿಸಲಾಯಿತು. ಮೊದಲ ಸಿಂಹ ದಿನವನ್ನು 2013 ರಲ್ಲಿ ಆಚರಿಸಲಾಯಿತು. ಅನಂತರ ವಿಶ್ವ ಸಿಂಹ ದಿನ ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಲಾಯಿತು.

ಸಿಂಹಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳು..

  • ಬಹುತೇಕ ಸಿಂಹಗಳು ಆಫ್ರಿಕಾದಲ್ಲಿ ವಾಸಿಸುತ್ತವೆ. ಆಫ್ರಿಕನ್ ಸಿಂಹಗಳ ನಂತರ ಏಷ್ಯಾಟಿಕ್ ಸಿಂಹಗಳು ಹೆಚ್ಚು ಸಂಖ್ಯೆಯಲ್ಲಿವೆ.
  • ಗಂಡು ಸಿಂಹಗಳು 190 ಕೆಜಿ ವರೆಗೆ ತೂಗುತ್ತವೆ. ಹೆಣ್ಣು ಸಿಂಹಗಳು 116 ಕೆಜಿ ವರೆಗೆ ತೂಗುತ್ತವೆ. ಸಿಂಹಗಳು ಶಕ್ತಿಶಾಲಿ ಆದರೆ ಸೋಮಾರಿತನ ಹೆಚ್ಚು..
  • ಸಿಂಹಗಳು ಬಲವಾದ ಸ್ನಾಯುಗಳನ್ನು ಹೊಂದಿರುತ್ತವೆ. ಸಿಂಹದ ಪಂಜದಿಂದ ತಪ್ಪಿಸಿಕೊಳ್ಳುವುದು ಕಷ್ಟ. ಸಿಂಹಗಳು ಒಂದೇ ಬಾರಿಗೆ 40 ಕೆಜಿ ಮಾಂಸವನ್ನು ತಿನ್ನಬಹುದು..
  • ಸಿಂಹ ಒಂದು ಸಂಘ ಜೀವಿ. ಅದರ ಗುಂಪುಗಳನ್ನು ಪ್ರೈಡ್​ ಎಂದು ಕರೆಯಲಾಗುತ್ತದೆ. ಇದರ ಒಂದು ಗುಂಪಿನಲ್ಲಿ ಸುಮಾರು 10 ರಿಂದ 15 ಸಿಂಹಗಳು ಇರುತ್ತವೆ. ಆದರೆ ಇದು 2 ರಿಂದ 40 ಸಿಂಹಗಳ ಗುಂಪಾಗಿ ಬದಲಾಗಬಹುದು.
  • ಅನೇಕ ಹೆಣ್ಣು ಸಿಂಹಗಳು ಗುಂಪುಗಳಲ್ಲಿ ಜನ್ಮ ನೀಡುತ್ತವೆ, ಆದ್ದರಿಂದ ಮರಿಗಳು ಇತರ ಹೆಣ್ಣು ಸಿಂಹಗಳಿಂದಲೂ ಪಾಲನೆ ಆಗುತ್ತವೆ.
  • ಹೆಣ್ಣು ಸಿಂಹಗಳು ಸಾಮಾನ್ಯವಾಗಿ ತಮ್ಮ ಮರಿಗಳನ್ನು ಒಟ್ಟಿಗೆ ಸಾಕುತ್ತವೆ. ಸಿಂಹದ ಮರಿಗಳು ಗುಂಪಿನಲ್ಲಿ ಹಾಲುಣಿಸುವ ಯಾವುದೇ ತಾಯಿ ಸಿಂಹಗಳಿಂದ ಆಹಾರ ಪಡೆಯುತ್ತವೆ. ಪರಸ್ಪರರ ಮರಿಗಳನ್ನು ಗಮನಿಸುವುದು ತಾಯಿ ಸಿಂಹಗಳಿಗೆ ಎರಡನೆಯ ಸ್ವಭಾವವಾಗಿದೆ.
  • ಕಾಡಿನಲ್ಲಿ, ಸಿಂಹಗಳು 8 ರಿಂದ 10 ವರ್ಷಗಳವರೆಗೆ ಬದುಕಬಲ್ಲವು.
  • ಸಿಂಹಗಳು ಸಾಮಾನ್ಯವಾಗಿ ತಮ್ಮ ಪ್ರದೇಶವನ್ನು ಗುರುತಿಸಲು ಮತ್ತು ಒಳನುಗ್ಗುವವರಿಗೆ ಎಚ್ಚರಿಕೆ ನೀಡುವ ಮಾರ್ಗವಾಗಿ ಒಟ್ಟಿಗೆ ಘರ್ಜಿಸುತ್ತವೆ. ಘರ್ಜನೆಯು ಸಾಮಾನ್ಯವಾಗಿ ಸುಮಾರು 40 ಸೆಕೆಂಡುಗಳವರೆಗೆ ಇರುತ್ತದೆ.
  • ಸಿಂಹಗಳು ತಮ್ಮ ನೀರನ್ನು ಸಸ್ಯಗಳಿಂದ ಪಡೆಯಬಹುದು..
  • ಸಿಂಹಗಳು ದಿನಕ್ಕೆ ಕನಿಷ್ಠ 20 ಗಂಟೆಗಳ ಕಾಲ ನಿದ್ರಿಸುತ್ತವೆ..

ಪ್ರಪಂಚದಾದ್ಯಂತದ ಸಿಂಹದ ವಿಧಗಳು:ಬಾರ್ಬರಿ ಸಿಂಹ, ಪಶ್ಚಿಮ ಆಫ್ರಿಕಾದ ಸಿಂಹ, ನೈಋತ್ಯ ಆಫ್ರಿಕನ್ ಸಿಂಹ, ಮಸಾಯಿ ಸಿಂಹ, ಟ್ರಾನ್ಸ್ವಾಲ್ ಸಿಂಹ, ಇಥಿಯೋಪಿಯನ್ ಸಿಂಹ, ಏಷ್ಯಾಟಿಕ್ ಸಿಂಹ ಎಂದು ವಿಭಾಗಿಸಲಾಗಿದೆ.

ಸಿಂಹಗಳ ವಾಸಸ್ಥಾನ: ಪೂರ್ವ ಆಫ್ರಿಕಾದ ತಾಂಜಾನಿಯಾವು ಪ್ರಪಂಚದಾದ್ಯಂತ ಅತಿ ಹೆಚ್ಚು ಕಾಡು ಸಿಂಹಗಳನ್ನು ಹೊಂದಿದೆ. ಇಲ್ಲಿ ಸರಿಸುಮಾರು 14,500 ಸಿಂಹಗಳಿವೆ. ಸಿಂಹ ಸಂಖ್ಯೆಯನ್ನು ಹೆಚ್ಚು ಹೊಂದಿರುವ ಮತ್ತೊಂದು ದೇಶ ದಕ್ಷಿಣ ಆಫ್ರಿಕಾ. ಅಲ್ಲಿ 3,284 ಸಿಂಹಗಳಿವೆ.

ಬೋಟ್ಸ್ವಾನಾದಲ್ಲಿ ಅಂದಾಜು 3,063 ಕಾಡು ಸಿಂಹಗಳನ್ನು ಕಾಣಬಹುದು. ಆದರೆ, ಕೀನ್ಯಾ ಮತ್ತು ಜಾಂಬಿಯಾಗಳು ತಮ್ಮ ಗಡಿಯೊಳಗೆ ಸುಮಾರು 2,500 ಪ್ರಾಣಿಗಳನ್ನು ಹೊಂದಿವೆ. ಜಿಂಬಾಬ್ವೆ, ಮೊಜಾಂಬಿಕ್, ನಂಬಿಯಾ ಮತ್ತು ಅಂಗೋಲಾ ದೇಶಗಳು ಒಟ್ಟು 4,600 ಸಿಂಹಗಳನ್ನು ಹೊಂದಿವೆ. ಉಗಾಂಡಾ, ಇಥಿಯೋಪಿಯಾ, ಸುಡಾನ್ ಮತ್ತು ಕ್ಯಾಮರೂನ್ ಸೇರಿದಂತೆ ಪ್ರತಿಯೊಂದೂ ದೇಶವು ನೂರಾರು ಸಿಂಹಗಳನ್ನು ಹೊಂದಿವೆ.

ಏಷ್ಯಾಟಿಕ್ ಸಿಂಹಗಳ ಸಂಖ್ಯೆಯು ಗುಜರಾತ್‌ನ ಗಿರ್ ಅರಣ್ಯ ಮತ್ತು ವಿಶಾಲವಾದ ಸೌರಾಷ್ಟ್ರ ಸಂರಕ್ಷಿತ ಪ್ರದೇಶದಲ್ಲಿ ಸ್ಥಿರವಾಗಿ ಬೆಳೆಯುತ್ತಿದೆ. 2015 ಮತ್ತು 2020 ರ ನಡುವೆ ಇಲ್ಲಿನ ಸಿಂಹಗಳ ಸಂಖ್ಯೆಯು 523 ರಿಂದ 674 ಕ್ಕೇರಿದೆ.

ಭಾರತದಲ್ಲಿ ಸಿಂಹಗಳು:ಏಷ್ಯಾಟಿಕ್ ಸಿಂಹಗಳ ಉಳಿದಿರುವ ಕೊನೆಯ ನೆಲೆ ಭಾರತವಾಗಿದೆ. ಈ ಸಿಂಹಗಳು ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯದಲ್ಲಿ ಪ್ರತ್ಯೇಕವಾಗಿ ಕಂಡುಬರುತ್ತವೆ. ಇತ್ತೀಚಿನ ಗಣತಿಯ ಪ್ರಕಾರ, ಭಾರತದಲ್ಲಿ ಸಿಂಹಗಳ ಸಂಖ್ಯೆಯು ಸರಿಸುಮಾರು 674 ಇದೆ. ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಂರಕ್ಷಣಾ ಪ್ರಯತ್ನಗಳು ಏಷ್ಯಾಟಿಕ್ ಸಿಂಹಗಳ ಸಂಖ್ಯೆಯನ್ನು ಸ್ಥಿರಗೊಳಿಸಲು ಮತ್ತು ಸ್ವಲ್ಪ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.

ಗುಜರಾತ್ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆಯ ಮೂಲಗಳ ಪ್ರಕಾರ, ಗುಜರಾತ್‌ನ ಗಿರ್ ಅರಣ್ಯವು ಏಷ್ಯಾಟಿಕ್ ಸಿಂಹದ ಏಕೈಕ ನೈಸರ್ಗಿಕ ಆವಾಸಸ್ಥಾನವಾಗಿದೆ. ಸರ್ಕಾರದ ಅಂಕಿ - ಅಂಶಗಳ ಪ್ರಕಾರ, ಗಿರ್‌ನಲ್ಲಿ ಈ ದೊಡ್ಡ ಬೆಕ್ಕುಗಳ ಸಂಖ್ಯೆ 2015 ರಲ್ಲಿ 523 ರಿಂದ 2020 ರಲ್ಲಿ 674 ಕ್ಕೆ ಏರಿದೆ.

ಏಷ್ಯಾಟಿಕ್ ಸಿಂಹ ಸಂರಕ್ಷಣಾ ಯೋಜನೆ: ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ವಿಶ್ವದ ಕೊನೆಯ ಶ್ರೇಣಿಯ ಏಷ್ಯಾಟಿಕ್ ಸಿಂಹ ಮತ್ತು ಅದರ ಸಂಬಂಧಿತ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ಸಂರಕ್ಷಿಸಲು "ಏಷ್ಯಾಟಿಕ್ ಸಿಂಹ ಸಂರಕ್ಷಣಾ ಯೋಜನೆ" ಯನ್ನು ಪ್ರಾರಂಭಿಸಿದೆ.

ಓದಿ:ತಾವರೆಕೊಪ್ಪ ಹುಲಿ-ಸಿಂಹ ಧಾಮದ 'ಆರ್ಯ' ಇನ್ನಿಲ್ಲ

ABOUT THE AUTHOR

...view details