ಚಿರಾಲ (ಆಂಧ್ರಪ್ರದೇಶ) :ಬಾಪಟ್ಲಾ ಜಿಲ್ಲೆಯ ಚಿರಾಲದ ಚುಂಡೂರಿ ಸರಸ್ವತಿ ಎನ್ನುವ ಭಕ್ತೆ ಶ್ರೀಶೈಲ ಭ್ರಮರಾಂಬಿಕಾ ದೇವಿಗೆ ಅರ್ಪಣೆಯಾಗಿ ಲಲಿತಾ ಸಹಸ್ರ ನಾಮದಲ್ಲಿನ 108 ಹೆಸರುಗಳನ್ನು ರೇಷ್ಮೆ ಸೀರೆಯಲ್ಲಿ ಕಸೂತಿ ಮಾಡಿದ್ದಾರೆ.
ಶ್ರೀಶೈಲದಲ್ಲಿ ಭ್ರಮರಾಂಬ ಸೇವಾ ಸಮಿತಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಸರಸ್ವತಿ ಅವರು ದೇವಿಗೆ ವಿಶಿಷ್ಟವಾದದ್ದನ್ನು ರಚಿಸಲು ಪ್ರೇರೇಪಣೆಗೊಳ್ಳುತ್ತಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಸೀರೆಯಲ್ಲಿ ಲಲಿತಾ ಸಹಸ್ರ ನಾಮದ 108 ಹೆಸರನ್ನು ಮೊದಲು ಪೆನ್ಸಿಲ್ನಲ್ಲಿ ಬರೆದು, ಕಸೂತಿ ಮಾಡಲು ಸರಸ್ವತಿ ಅವರು ಆರಂಭಿಸುತ್ತಾರೆ.
ಹತ್ತಿರತ್ತಿರ ಒಂದು ವರ್ಷದ ಶ್ರಮ, ಸಮರ್ಪಣೆಯ ಮೂಲಕ ಅವರು ಈಗ ಪೂರ್ಣಗೊಳಿಸಿದ್ದು, ಈ ತಿಂಗಳ ಮಾಘ ಮಾಸದ ಹುಣ್ಣಿಮೆಯ ದಿನದಂದು ಅದನ್ನು ದೇವಿಗೆ ಅರ್ಪಿಸಲು ಯೋಜಿಸಿದ್ದಾರೆ.