ಡಾರ್ಜಿಲಿಂಗ್ ( ಪಶ್ಚಿಮ ಬಂಗಾಳ) :ರಾಜ್ಯದ ಖಜಾನೆಯು ಮದ್ಯದಿಂದ ತುಂಬಿ ತುಳುಕುತ್ತಿದೆ. ಈ ವರ್ಷ ಪಶ್ಚಿಮ ಬಂಗಾಳದಾದ್ಯಂತ ಮದ್ಯ ಮಾರಾಟ ಮಾಡುವ ಮೂಲಕ ರಾಜ್ಯ ಸರ್ಕಾರ ದಾಖಲೆಯ ಆದಾಯ ಗಳಿಸಿದೆ. 2022-23ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2023-24ನೇ ಹಣಕಾಸು ವರ್ಷದಲ್ಲಿ ಈ ರಾಜ್ಯವು ಮದ್ಯದಿಂದ 1 ಸಾವಿರ ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದೆ.
ಪುರ್ಬಾ ಮೇದಿನಿಪುರ್, ಪಶ್ಚಿಮ್ ಬುರ್ದ್ವಾನ್, ನಾಡಿಯಾ, ನಾರ್ತ್ 24 ಪರಗಣಗಳು, ಬರಾಕ್‌ಪೋರ್ ಮತ್ತು ಅಲಿಪೋರ್ 1000 ಕೋಟಿ ರೂ.ಗೂ ಹೆಚ್ಚು ಮದ್ಯ ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಿವೆ. 2021-22ನೇ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ 18 ಸಾವಿರ ಕೋಟಿ ರೂ. ಆಗಿದೆ. ಅದರಿಂದ ₹ 11 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ. 2022ರಲ್ಲಿ ರಾಜ್ಯ ಸರ್ಕಾರ ಮಾರಾಟ ಮಾಡಿದ ಮದ್ಯದಲ್ಲಿ 21 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ.
ಮದ್ಯ ಮಾರಾಟದಿಂದ ಸುಮಾರು 15 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ. 2023-24ನೇ ಹಣಕಾಸು ವರ್ಷದಲ್ಲಿ ಈ ವಲಯದ ಆದಾಯ 23 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಅದರಿಂದ 17 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ. ಜಲ್ಪೈಗುರಿಯ ಸಹಾಯಕ ಅಬಕಾರಿ ಅಧಿಕಾರಿ ಸುಜಿತ್ ದಾಸ್ ಮಾತನಾಡಿ, "ಉತ್ತರ ಬಂಗಾಳದಿಂದಲೂ ಮದ್ಯ ಮಾರಾಟ ಜೋರಾಗಿದೆ. ನಾವು ಗುರಿಯನ್ನು ಮೀರಿಸಿದ್ದೇವೆ. ಅಲ್ಲದೆ, ಉತ್ತರ ಬಂಗಾಳದ ಭೂತಾನ್, ಬಾಂಗ್ಲಾದೇಶ, ನೇಪಾಳದಂತಹ ಅಂತಾರಾಷ್ಟ್ರೀಯ ಗಡಿಗಳು ಮತ್ತು ಬಿಹಾರ, ಅಸ್ಸಾಂ, ಸಿಕ್ಕಿಂನಂತಹ ಅಂತರರಾಜ್ಯ ಗಡಿಗಳಿಂದ ನಾವು ಉತ್ತಮ ಹಣವನ್ನು ಗಳಿಸಿದ್ದೇವೆ. ಅಲ್ಲದೇ, ಮದ್ಯದ ಕಳ್ಳಸಾಗಣೆ ತಡೆಯುವ ಮೂಲಕ ನಕಲಿ ಮದ್ಯದ ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದಿದ್ದಾರೆ.
ಅಬಕಾರಿ ಇಲಾಖೆ ಮೂಲಗಳ ಪ್ರಕಾರ, 2023-24ನೇ ಹಣಕಾಸು ವರ್ಷದಲ್ಲಿ 23 ಸಾವಿರ ಕೋಟಿ ರೂ.ಗಳ ಗುರಿಯನ್ನು ನಿಗದಿಪಡಿಸಲಾಗಿತ್ತು. 125 ಕೋಟಿ ಮೌಲ್ಯದ ಮದ್ಯವನ್ನು ಆ ಗುರಿಯನ್ನೂ ಮೀರಿ ಮಾರಾಟ ಮಾಡಲಾಗಿದೆ. ಉತ್ತರ ಬಂಗಾಳದ ಜಲ್ಪೈಗುರಿ ವಿಭಾಗದ ಕೂಚ್ ಬೆಹಾರ್, ಅಲಿಪುರ್ದುವಾರ್, ಕಾಲಿಂಪಾಂಗ್, ಡಾರ್ಜಿಲಿಂಗ್ ಮತ್ತು ಜಲ್ಪೈಗುರಿ ಜಿಲ್ಲೆಗಳು 2,655 ಕೋಟಿ 72 ಲಕ್ಷ ಮೌಲ್ಯದ ಮದ್ಯವನ್ನು ಮಾರಾಟ ಮಾಡಲಾಗಿದೆ.