ಶಹಜಾನ್ಪುರ, ಉತ್ತರಪ್ರದೇಶ:1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಭಾರತೀಯ ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿದಿದೆ. ಇದೀಗ ಈ ಅವಧಿಯ ಕ್ರಾಂತಿ ವೇಳೆ ಬಳಕೆಯಾಗಿರಬಹುದಾದ ಶಸ್ತ್ರಾಸ್ತ್ರಗಳ ಭಂಡಾರ ಉತ್ತರ ಪ್ರದೇಶದ ಶಹಜಾನ್ಪುರದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತ ಬಾಬುರಾಮ್ ಎಂಬುವರು ತಮ್ಮ ಕೃಷಿ ಭೂಮಿಯಲ್ಲಿ ಉಳುಮೆ ಮಾಡುವಾಗ ಕಬ್ಬಿಣದ ಕತ್ತಿಯ ರೀತಿ ವಸ್ತು ಕಂಡು ಬಂದಿದೆ. ಈ ವೇಳೆ ಕುತೂಹಲಗೊಂಡ ರೈತ ಮಣ್ಣು ಅಗೆದಿದ್ದಾರೆ. ಆಗ ನೆಲದಡಿಯಲ್ಲಿ ಹೂತ್ತಿಟ್ಟ ಭಾರಿ ಪ್ರಮಾಣದ ಶಸಾಸ್ತ್ರಗಳು ಕಂಡು ಬಂದಿವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಧರ್ಮೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಏನೆಲ್ಲಾ ಸಿಕ್ಕಿವೆ?:ಈ ಉತ್ಖನನದಲ್ಲಿ 23 ಕತ್ತಿ, 12 ರೈಫಲ್ ಮತ್ತು ಒಂದು ಈಟಿ ಹಾಗೂ ಬಾಕು ಕಂಡು ಬಂದಿದೆ. ರೈಫಲ್ನ ಬ್ಯಾರೆಲ್ಸ್ ಮತ್ತು ಕಬ್ಬಿಣದ ಭಾಗಗಳು ಮಾತ್ರ ಇದ್ದು, ಇದರ ಉಳಿದ ಮರದ ಭಾಗಗಳು ಗೆದ್ದಲು ಹಿಡಿದು ಹಾಳಾಗಿದೆ. ಈ ಶಸಾಸ್ತ್ರಗಳ ವಿನ್ಯಾಸ ನೋಡಿದಾಗ ರೈಫಲ್ಗಳು ಮ್ಯಾಚ್ಲಾಕ್ ಗನ್ಗಳಾಗಿವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾಹಿತಿ ನೀಡಿದ್ದಾರೆ.
200 ವರ್ಷಗಳ ಹಳೆಯ ಶಸ್ತ್ರಾಸ್ತ್ರಗಳು ಪತ್ತೆ: 1857ರ ಕ್ರಾಂತಿಯಲ್ಲಿ ಬಳಕೆ ಮಾಡಿರುವ ಸಾಧ್ಯತೆ (ETV Bharat) ಈ ಬಗ್ಗೆ ಪುರಾತತ್ವ ಇಲಾಖೆಗೆ ಪತ್ರ:ಸದ್ಯ ಈ ಶಸ್ತ್ರಾಸ್ತ್ರಗಳನ್ನು ನಿಗೊಯಿ ಪೊಲೀಸ್ ಠಾಣೆಯ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇಡಲಾಗಿದ್ದು, ಈ ಸಂಬಂಧ ಭಾರತೀಯ ಪುರಾತತ್ವ ಇಲಾಖೆಗೂ ಪತ್ರ ಬರೆಯಲಾಗಿದೆ ಎಂದರು.
200 ವರ್ಷಗಳ ಹಳೆಯ ಶಸ್ತ್ರಾಸ್ತ್ರಗಳು ಪತ್ತೆ: 1857ರ ಕ್ರಾಂತಿಯಲ್ಲಿ ಬಳಕೆ ಮಾಡಿರುವ ಸಾಧ್ಯತೆ (weapons-possibly-used-during-1857-rebellion-found-in-shahjahanpur-field) ಈ ಶಸ್ತ್ರಾಸ್ತ್ರಗಳ ಬಗ್ಗೆ ಇತಿಹಾಸ ವಿಭಾಗದ ಮುಖ್ಯಸ್ಥರು ಹೇಳುವುದು ಇಷ್ಟು: ಈ ಕುರಿತು ಮಾತನಾಡಿರುವ ಶಹಜಹನ್ಪುರ್ದಲ್ಲಿನ ಸ್ವಾಮಿ ಶುಕ್ದೇವನಂದ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ವಿಕಾಸ್ ಖುರನಾ ಮಾತನಾಡಿ, ಈ ಶಸಾಸ್ತ್ರಗಳು ಮೊಘಲ್ ಆಡಳಿತ ಅವಧಿಯ ರೊಹಿಲ್ಲಾ ಸಂಸ್ಕೃತಿಗೆ ಸೇರಿದವು ಎಂಬಂತೆ ಕಂಡು ಬಂದಿದೆ. ರೊಹಿಲ್ಲಾಗಳು ಅಫ್ಘಾನ್ ಮೂಲದವರಾಗಿದ್ದು, 18ನೇ ಶತಮಾನದಲ್ಲಿ ಭಾರತದಾದ್ಯಂತ ಅವರು ವಸಾಹತು ಕಂಡು ಬಂದಿದೆ. ಮೊಘಲ್ ಸಾಮ್ರಾಜ್ಯದ ಕುಸಿತದ ವೇಳೆ ಗಂಗಾನದಿ ಮುಖಜ ಭೂಮಿಯಲ್ಲಿ ಇವರು ನಿಯಂತ್ರಣ ಸಾಧಿಸಿದ್ದರು ಎಂದು ಅವರು ತಮ್ಮ ವಾದ ಮಂಡಿಸಿದ್ದಾರೆ.
200 ವರ್ಷಗಳ ಹಳೆಯ ಶಸ್ತ್ರಾಸ್ತ್ರಗಳು ಪತ್ತೆ: 1857ರ ಕ್ರಾಂತಿಯಲ್ಲಿ ಬಳಕೆ ಮಾಡಿರುವ ಸಾಧ್ಯತೆ (ETV Bharat) ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಳಕೆ ಮಾಡಿರುವ ಸಾಧ್ಯತೆ:ಈ ಶಸಾಸ್ತ್ರಗಳನ್ನು 1857ರ ಕ್ರಾಂತಿಗಳಲ್ಲಿ ಬಳಕೆ ಮಾಡಿರುವ ಸಾಧ್ಯತೆ ಇದೆ. ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಡಿದ ನಂತರ ದಂಗೆಕೋರರು ಈ ಪ್ರದೇಶದ ಮೂಲಕ ಪಿಲಿಭಿತ್ ಕಾಡುಗಳಿಗೆ ತೆರಳಿರಬಹುದು. ಅನೇಕ ಸೇನೆಗಳು ತಮ್ಮ ಶಸಾಸ್ತ್ರಗಳನ್ನು ಬಚ್ಚಿಡುವುದಿಲ್ಲ. ಕ್ರಾಂತಿಕಾರಿಗಳು ತಮ್ಮ ಶಸಾಸ್ತ್ರಗಳನ್ನು ಈ ಮೈದಾನದಲ್ಲಿ ಹೂತಿಟ್ಟಿರುವ ಸಾಧ್ಯತೆ ಇದೆ. ಮ್ಯಾಚ್ಲಾಕ್ ರೈಫಲ್ಗಳು ಇಂದಿಗೂ ಸಹ ಗನ್ಪೌಡರ್ನಿಂದ ತುಂಬಿದೆ. ಈ ರೀತಿಯ ಗನ್ಗಳನ್ನು ಈ ಪ್ರದೇಶದಲ್ಲಿ ಗಜಹಿ ಗನ್ ಎಂದು ಕರೆಯಲಾಗುವುದು. ಇದನ್ನು ಬ್ರಟಿಷ್ ಆಡಳಿತ ಸಮಯದಲ್ಲಿ ಬಳಕೆ ಮಾಡಲಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತಿರುಪತಿ ಲಡ್ಡು ಕಲಬೆರಕೆ ಆರೋಪದ ಬಗ್ಗೆ ಸಿಬಿಐ ತನಿಖೆ ಕೋರಿದ್ದ ಪಿಐಎಲ್ ವಜಾ