ETV Bharat / bharat

ಯಮುನಾ ನದಿ ನೀರು ಕುಡಿದು ಕೇಜ್ರಿವಾಲ್​ 'ವಿಷ' ಆರೋಪಕ್ಕೆ ತಿರುಗೇಟು ನೀಡಿದ ಹರಿಯಾಣ ಸಿಎಂ - HARYANA CM DRINK YAMUNA WATER

ಯಮುನಾ ನದಿ ನೀರಿಗೆ ಬಿಜೆಪಿ ವಿಷ ಹಾಕಿದೆ ಎಂದು ಆರೋಪಿಸಿದ ಅರವಿಂದ್ ಕೇಜ್ರಿವಾಲ್​ ವಿರುದ್ಧ ಬಿಜೆಪಿ ಕಿಡಿಕಾರಿದೆ. ಹರಿಯಾಣ ಸಿಎಂ ಅದೇ ನದಿ ನೀರನ್ನು ಕುಡಿದು ಸವಾಲೆಸೆದರು.

ಯಮುನಾ ನದಿ ನೀರು ಕುಡಿದ ಹರಿಯಾಣ ಸಿಎಂ
ಯಮುನಾ ನದಿ ನೀರು ಕುಡಿದ ಹರಿಯಾಣ ಸಿಎಂ (ANI)
author img

By ANI

Published : Jan 29, 2025, 7:50 PM IST

ನವದೆಹಲಿ : ಯಮುನಾ ನದಿ ನೀರಿಗೆ ಬಿಜೆಪಿ ವಿಷ ಬೆರೆಸುತ್ತಿದೆ ಎಂಬ ದೆಹಲಿಯ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರ ಆರೋಪಕ್ಕೆ ಹರಿಯಾಣ ಸಿಎಂ ನಯಾಬ್​ ಸಿಂಗ್ ಸೈನಿ ಅವರು, ಅದೇ ನದಿ ನೀರನ್ನು ಕುಡಿಯುವ ಮೂಲಕ ತಿರುಗೇಟು ನೀಡಿದರು.

ದೆಹಲಿಯ ಪಲ್ಲಾ ಗ್ರಾಮದ ಯಮುನಾ ನದಿ ದಂಡೆಗೆ ಭೇಟಿ ನೀಡಿದ ಹರಿಯಾಣ ಸಿಎಂ ನದಿ ನೀರು ಸೇವಿಸಿದರು. ಬಳಿಕ ಮಾತನಾಡಿದ ಅವರು, "ಹರಿಯಾಣ ಬಿಜೆಪಿ ಸರ್ಕಾರ ಯಮುನಾ ನೀರಿಗೆ ವಿಷ ಹಾಕುತ್ತಿದೆ ಎಂದು ಅರವಿಂದ್​ ಕೇಜ್ರಿವಾಲ್​ ಆರೋಪಿಸಿದ್ದಾರೆ. ಅದೇ ನೀರನ್ನು ಈಗ ನಾನು ಕುಡಿದಿದ್ದೇನೆ. ನನ್ನ ಜೀವಕ್ಕೆ ಅಪಾಯವಾದಲ್ಲಿ ಕೇಜ್ರಿವಾಲ್​ ಮಾತು ಸತ್ಯವಾಗಲಿದೆ" ಎಂದು ಸವಾಲು ಹಾಕಿದರು.

"ದೆಹಲಿಯ ಮಾಜಿ ಸಿಎಂ ರಾಜಕೀಯ, ಚುನಾವಣಾ ಲಾಭಕ್ಕಾಗಿ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ನಮ್ಮ ಸರ್ಕಾರದ ಮೇಲೆ ಆರೋಪ ಮಾಡಿದ ಕಾರಣ, ನಾನೇ ಇಲ್ಲಿಗೆ ಬಂದು ನೀರು ಸೇವಿಸಿದ್ದೇನೆ. ಸಾಮೂಹಿಕ ನರಮೇಧ ನಡೆಸಲು ಬಿಜೆಪಿ ಸಂಚು ರೂಪಿಸಿದೆ ಎಂದು ಹೇಳಿಕೆ ನೀಡಿದ್ದು ದುರದೃಷ್ಟಕರ" ಎಂದು ಟೀಕಿಸಿದರು.

"ಜಲಸಂಪನ್ಮೂಲ ಪ್ರಾಧಿಕಾರವು ನದಿ ನೀರಿನ ಮಾದರಿಯನ್ನು ಪಡೆದು ಪರೀಕ್ಷಿಸಿದೆ. ಅದರಲ್ಲಿ ಯಾವುದೇ ವಿಷಕಾರಿ ಅಂಶ ಕಂಡುಬಂದಿಲ್ಲ. ಅರವಿಂದ್ ಕೇಜ್ರಿವಾಲ್ ತಮ್ಮ ಜೀವನದುದ್ದಕ್ಕೂ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ" ಎಂದು ಮೂದಲಿಸಿದರು.

ಪ್ರಧಾನಿ ಮೋದಿ ಟೀಕೆ : ಇದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಕೇಜ್ರಿವಾಲ್ ಅವರ ಹೇಳಿಕೆಗಳನ್ನು ಟೀಕಿಸಿದ್ದರು. "ಹರಿಯಾಣ ಸರ್ಕಾರವು ದೆಹಲಿಗೆ ಹರಿಯುವ ಯಮುನಾ ನದಿ ನೀರಿನಲ್ಲಿ ವಿಷ ಬೆರೆಸುತ್ತಿದೆ ಎಂದು ಆಪ್​​ದಾ (ಆಪತ್ತು) ಸರ್ಕಾರ ಆರೋಪಿಸಿದೆ. ಹಿಂದು ಸಂಸ್ಕೃತಿಯಲ್ಲಿ ನಾವು ನದಿಗಳನ್ನು ಪವಿತ್ರ ಎಂದು ಭಾವಿಸುತ್ತೇವೆ. ಕೇಜ್ರಿವಾಲ್​ ಇಂತಹ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ಹರಿಯಾಣಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಅವಮಾನ ಮಾಡಿದ್ದಾರೆ ಎಂದು ಗುಡುಗಿದರು.

ಕುಡಿಯುವ ನೀರು ಒದಗಿಸುವುದು ಮಹತ್ಕಾರ್ಯ ಎಂದು ಪರಿಗಣಿಸುವ ದೇಶ ನಮ್ಮದು. ಕೇವಲ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ನದಿಗೆ ವಿಷ ಹಾಕುವ ಮಾತುಗಳನ್ನಾಡುವ ಜನರಿಗೆ ಜನರಿಗೆ ದೆಹಲಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸವಿದೆ. ದೆಹಲಿ ಲೂಟಿ ಮಾಡಿದವರು ಯಮುನಾ ನದಿಯಲ್ಲಿ ಮುಳುಗುವುದು ಖಂಡಿತ ಎಂದು ಸೋಲಿನ ಭವಿಷ್ಯ ನುಡಿದರು.

ಕೇಜ್ರಿವಾಲ್​ ಹೇಳಿದ್ದೇನು? ಚುನಾವಣಾ ಪ್ರಚಾರದ ವೇಳೆ ಅರವಿಂದ್​ ಕೇಜ್ರಿವಾಲ್​ ಅವರು, ಹರಿಯಾಣ ಸರ್ಕಾರವು ದೆಹಲಿಗೆ ಸರಬರಾಜು ಮಾಡುವ ಯಮುನಾ ನೀರಿಗೆ ವಿಷ ಹಾಕಿದೆ. ದೆಹಲಿಯಲ್ಲಿ ನರಮೇಧ ನಡೆಸಲು ಸಂಚು ರೂಪಿಸಿದೆ. ನದಿ ನೀರನ್ನು ಕುಡಿಯುವ ನೀರಿನೊಂದಿಗೆ ಬೆರೆಸಿದ್ದರೆ, ಅನೇಕ ಜನರು ಸಾಯುತ್ತಿದ್ದರು. ವಿಷವನ್ನು ಪರಿಷ್ಕರಣಾ ಘಟಕಗಳೂ ಪತ್ತೆ ಮಾಡುತ್ತಿಲ್ಲ ಎಂದೆಲ್ಲಾ ಗಂಭೀರ ಆರೋಪ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.

ದೆಹಲಿ ವಿಧಾನಸಭೆಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದೆ. 8 ರಂದು ಫಲಿತಾಂಶ ಪ್ರಕಟವಾಗಲಿದೆ.

ಓದಿ: ದೆಹಲಿ ಚುನಾವಣೆ: ಆಪ್​, ಕಾಂಗ್ರೆಸ್​ ಪರ ಪ್ರಚಾರ ಮಾಡಲ್ಲ ಎಂದ ಉದ್ಧವ್​ ಶಿವಸೇನೆ

ದೆಹಲಿ ಚುನಾವಣೆ: ಮೂರನೇ ಸಂಕಲ್ಪ ಪತ್ರ ಬಿಡುಗಡೆ ಮಾಡಿದ ಬಿಜೆಪಿ, ಭರ್ಜರಿ ಭರವಸೆಗಳ ಘೋಷಣೆ

ದೆಹಲಿ ಚುನಾವಣೆ: ಬಿಜೆಪಿ ಅಭ್ಯರ್ಥಿಗಳಿಗೆ ಶಿಂಧೆ ಬಣದ ಶಿವಸೇನೆ ಬೆಂಬಲ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.