ಫತೇಪುರ್ (ಉತ್ತರ ಪ್ರದೇಶ):ಫತೇಪುರ್ ಜಿಲ್ಲೆಯ ಡಿಎಂ( ಜಿಲ್ಲಾಧಿಕಾರಿ) ಸಿ.ಇಂದುಮತಿ ದೂರುದಾರರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಸೋಮವಾರ ನಡೆದಿದೆ. ನೀನು ನನ್ನನ್ನು ತಳ್ಳಿ ಮುಂದೆ ಸಾಗುತ್ತಿರುವೆ. ನಾನು ನಿಂತಿದ್ದೇನೆ, ಅದು ಕಾಣಿಸುತ್ತಿಲ್ಲವೇ ನಿಮಗೆ ಎಂದು ಡಿಎಂ ಛೀಮಾರಿ ಹಾಕಿದರು. ಈ ವೇಳೆ ಡಿ.ಎಂ.ಇಂದುಮತಿ ತುಂಬಾ ಕೋಪಗೊಂಡಿದ್ದರು. ಡಿಎಂ ದೂಡಾ ಕಚೇರಿ ಪರಿಶೀಲಿಸುತ್ತಿದ್ದಾಗ, ಈ ವೇಳೆ ದೂರುದಾರರು ಅಲ್ಲಿಗೆ ಬಂದಿದ್ದರು. ಮುಂದೆ ಸಾಗುತ್ತಿದ್ದ ಡಿಎಂ ಅವರನ್ನು ತಳ್ಳಲಾಗಿದೆ. ಈ ವೇಳೆ ಕೋಪಗೊಂಡ ಡಿಎಂ, ದೂರುದಾರನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ತಳ್ಳಿದವನ ವಿರುದ್ಧ ಕಿಡಿಕಾರಿದರ ಜಿಲ್ಲಾಧಿಕಾರಿ: ನಂತರ ಡಿಎಂ ಗರಂ ಆಗಿ, 'ನಿನಗೆ ಹುಚ್ಚು ಹಿಡಿದಿದೆಯೇ? ಒಬ್ಬ ಮಹಿಳೆ ನಿಂತಿದ್ದಾಳೆ ಮತ್ತು ನೀವು ತಳ್ಳುತ್ತಾ ಮುಂದೆ ಹೋಗುತ್ತಿದ್ದೀರಿ. ನೀನು ಯಾರು, ಯಾವ ಉದ್ದೇಶಕ್ಕೆ ಬಂದಿದ್ದೀಯಾ? ಎಂದು ದೂರುದಾರನನ್ನು ಗದರಿಸಿದ್ದಾರೆ. ಡಿಎಂ ಸಿ.ಇಂದುಮತಿ ಅವರ ಈ ವರ್ತನೆ 46 ಸೆಕೆಂಡ್ ವಿಡಿಯೋದಲ್ಲಿ ಕಾಣಬಹುದು.
ಸಬ್ ರಿಜಿಸ್ಟ್ರಾರ್‌ಗೆ ಛೀಮಾರಿ ಹಾಕಿದ ಡಿಸಿ:ಸೋಮವಾರ ಡಿಎಂ ಸಿ.ಇಂದುಮತಿ ಅವರು ದಿಢೀರ್ ದುಡಾ ಕಚೇರಿಗೆ ಆಗಮಿಸಿದ್ದರು. ಅವರ ಜೊತೆ ಎಡಿಎಂ (ಆಡಳಿತ) ಅವ್ನಿಶ್ ತ್ರಿಪಾಠಿ, ಎಡಿಎಂ (ಹಣಕಾಸು) ವಿನಯ್ ಪಾಠಕ್ ಮತ್ತು ಎಸ್‌ಡಿಎಂ ಸದರ್ ಕೂಡ ಇದ್ದರು. ಅಧಿಕಾರಿಗಳು ಮೊದಲು ಸಬ್ ರಿಜಿಸ್ಟ್ರಾರ್ ಹಾಗೂ ದುಡಾ ಕಚೇರಿಗೆ ಭೇಟಿ ನೀಡಿದರು. ಡಿಎಂ ದಿಢೀರ್ ಆಗಮನದಿಂದ ಕಚೇರಿಗಳಲ್ಲಿ ಗೊಂದಲ ಉಂಟಾಯಿತು. ಹಲವರು ಓಡಿ ಹೋಗುತ್ತಿರುವುದು ಕಂಡು ಬಂದಿದೆ. ಡಿಎಂ ಅವರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹಳೆಯ ದಾಖಲೆಗಳನ್ನು ಪರಿಶೀಲಿಸಿದರು. ಆಸ್ತಿ ಮಾರಾಟ ಮತ್ತು ಖರೀದಿ ಮಾಡಲು ಬಂದವರನ್ನು ವಿಚಾರಿಸಿದರು. ಆವರಣದಲ್ಲಿ ಅಶುಚಿತ್ವ ಕಂಡು ಬಂದಿದ್ದಕ್ಕೆ ಸಬ್ ರಿಜಿಸ್ಟ್ರಾರ್‌ಗೆ ಛೀಮಾರಿ ಹಾಕಿದರು.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದೂರುಗಳು ಬಂದಿದ್ದರಿಂದ ಈ ತಪಾಸಣೆ ನಡೆಸಲಾಗಿದೆ ಎಂದು ಎಡಿಎಂ ಅವನೀಶ್ ತ್ರಿಪಾಠಿ ತಿಳಿಸಿದ್ದಾರೆ. ಕೆಲ ಅನುಮಾನಾಸ್ಪದ ವ್ಯಕ್ತಿಗಳು ಪತ್ತೆಯಾಗಿದ್ದು, ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ ಕಚೇರಿಗಳ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಡಿಎಂ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.