ಕರ್ನಾಟಕ

karnataka

ETV Bharat / bharat

ನಿರ್ಮಲಾ ಬಜೆಟ್: ಪ್ರಮುಖ ಘೋಷಣೆಗಳು ಯಾವುವು ಗೊತ್ತಾ? - Budget Key Announcements - BUDGET KEY ANNOUNCEMENTS

ಕೇಂದ್ರ ಬಜೆಟ್‌ನ ಪ್ರಮುಖ ಘೋಷಣೆಗಳು ಯಾವುವು?. ಕೇವಲ ಎರಡು ನಿಮಿಷದಲ್ಲಿ ಓದಿ ಮುಗಿಸಬಲ್ಲ ಮುಖ್ಯಾಂಶಗಳು ಇಲ್ಲಿವೆ.

BIG ANNOUNCEMENTS PROJECT  NIRMALA SITHARAMAN BUDGET
ಕೇಂದ್ರ ಬಜೆಟ್‌ 2024 (ETV Bharat)

By ETV Bharat Karnataka Team

Published : Jul 23, 2024, 2:31 PM IST

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರ ಆಕಾಂಕ್ಷೆಗಳು ಮತ್ತು ಭಾರತದ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡಿರುವುದು ಕಂಡುಬಂದಿದೆ. 9 ಆದ್ಯತೆಗಳ ಆಧಾರದ ಮೇಲೆ ಬಜೆಟ್ ಸಿದ್ಧಪಡಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಉತ್ಪಾದಕತೆ, ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ ಕ್ಷೇತ್ರ, ಸಂಶೋಧನೆ-ಆವಿಷ್ಕಾರ, ಉತ್ಪಾದನೆ-ಸೇವೆಗಳು ಮತ್ತು ಮುಂದಿನ ಪೀಳಿಗೆಯ ಸುಧಾರಣೆಗಳಿಗೆ ಆದ್ಯತೆ ನೀಡಲಾಗಿದೆ.

ಕೇಂದ್ರ ಬಜೆಟ್‌ನ ಪ್ರಮುಖ ಘೋಷಣೆಗಳಿವು:

  • ಸ್ಟ್ಯಾಂಡರ್ಡ್ ಡಿಡಕ್ಷನ್ ರೂ.50 ಸಾವಿರದಿಂದ ರೂ.75 ಸಾವಿರಕ್ಕೆ ಏರಿಕೆಯಾಗಿದೆ. ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್‌ಗಳಲ್ಲಿ ಬದಲಾವಣೆ. ರೂ.3 ಲಕ್ಷದವರೆಗೆ ತೆರಿಗೆ ಇಲ್ಲ.
  • ಮೊಬೈಲ್ ಫೋನ್‌ಗಳು, ಮೊಬೈಲ್ ಪಿಸಿಡಿಎ ಮತ್ತು ಮೊಬೈಲ್ ಚಾರ್ಜರ್‌ಗಳ ಮೇಲೆ ವಿಧಿಸುವ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 15 ಕ್ಕೆ ಇಳಿಸಲಾಗಿದೆ. ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು ಶೇಕಡಾ 6ಕ್ಕೆ ಇಳಿಸಲಾಗಿದೆ. 6.4 ಶೇಕಡಾ ಕುಗ್ಗಿದ ಪ್ಲಾಟಿನಂ ಸುಂಕ
  • ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 3 ಕೋಟಿ ಹೆಚ್ಚುವರಿ ಮನೆಗಳ ನಿರ್ಮಾಣ. ನಗರ ವಸತಿಗಾಗಿ ಐದು ವರ್ಷಗಳಲ್ಲಿ 2.2 ಲಕ್ಷ ಕೋಟಿ ರೂ. ಘೋಷಣೆ
  • ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಾಡಿಗೆ ಮನೆಗಳ ನಿರ್ಮಾಣ. ಪಿಪಿಪಿ ಪದ್ಧತಿಯಲ್ಲಿ ವಸತಿ ನಿಲಯ ಶೈಲಿಯ ಮನೆಗಳ ನಿರ್ಮಾಣ.
  • ಮುದ್ರಾ ಸಾಲ ರೂ.10 ಲಕ್ಷದಿಂದ ರೂ.20 ಲಕ್ಷಕ್ಕೆ ಏರಿಕೆಯಾಗಿದೆ. ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ಮೀಸಲು
  • ದೇಶಾದ್ಯಂತ ಒಂದು ಕೋಟಿ ರೈತರನ್ನು ಪ್ರಕೃತಿ ಕೃಷಿಗೆ ಕರೆತರುವ ಯೋಜನೆ. 5 ರಾಜ್ಯಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು. ಕೃಷಿ ಮತ್ತು ಅದರ ಸಂಬಂಧಿತ ವಲಯಗಳ ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ. ಘೋಷಣೆ
  • ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ. ಟಾಪ್ 500 ಕಂಪನಿಗಳಲ್ಲಿ ಇಂಟರ್ನ್‌ಶಿಪ್.
  • ದೇಶೀಯ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿಗಳಿಗೆ ರೂ.10 ಲಕ್ಷದವರೆಗಿನ ಶಿಕ್ಷಣ ಸಾಲಗಳು
  • ಮೂಲಸೌಕರ್ಯ ಅಭಿವೃದ್ಧಿಗೆ ರೂ.11.11 ಲಕ್ಷ ಕೋಟಿ ಹಂಚಿಕೆ. ಇದು ಜಿಡಿಪಿಯ 3.4 ಪ್ರತಿಶತಕ್ಕೆ ಸಮಾನ
  • ಮಹಿಳೆಯರು ಮತ್ತು ಬಾಲಕಿಯರಿಗಾಗಿ 3 ಲಕ್ಷ ಕೋಟಿ ಯೋಜನೆಗಳು. ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗೆ 1.48 ಲಕ್ಷ ಕೋಟಿ ರೂ. ಘೋಷಣೆ
  • ಆಯ್ದ ನಗರಗಳಲ್ಲಿ ಬೀದಿ ಆಹಾರ ಕೇಂದ್ರಗಳ ಸ್ಥಾಪನೆ. ರಾಜ್ಯದ ಮೂಲಸೌಕರ್ಯ ಯೋಜನೆಗಳಿಗೆ 1.5 ಲಕ್ಷ ಕೋಟಿ ದೀರ್ಘಾವಧಿ ಬಡ್ಡಿ ರಹಿತ ಸಾಲ.
  • ಹೊಸ ನೇಮಕಾತಿಗೆ ಮೂರು ಪ್ರೋತ್ಸಾಹಕಗಳು. ಪ್ರಥಮ ಬಾರಿಗೆ ಸಂಘಟಿತ ವಲಯಕ್ಕೆ ಪ್ರವೇಶಿಸುವ ನೌಕರರಿಗೆ ಒಂದು ತಿಂಗಳ ವೇತನವನ್ನು ಮೂರು ಕಂತುಗಳಲ್ಲಿ ಗರಿಷ್ಠ 15 ಸಾವಿರ ರೂ. ನೀಡಲಾಗುವುದು. ಗರಿಷ್ಠ ರೂ. ಒಂದು ಲಕ್ಷಕ್ಕಿಂತ ಕಡಿಮೆ ವೇತನ ಇರುವವರು ಅರ್ಹರು. ಇದರಿಂದ ಲಕ್ಷಾಂತರ ಯುವಕರಿಗೆ ಅನುಕೂಲವಾಗಲಿದೆ.
  • ಕ್ಯಾಪಿಟಲ್ ಗೇನ್ಸ್ ಕಾಯಿದೆಯ ಸರಳೀಕರಣ. ದೀರ್ಘಾವಧಿಯ ಲಾಭಗಳ ಮೇಲೆ 12.5% ​​ತೆರಿಗೆ. ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹ. ಏಂಜೆಲ್ ತೆರಿಗೆ ರದ್ದು.

ಇದನ್ನೂ ಓದಿ:ಲೈವ್ ಮೋದಿ 3.0 ಸರ್ಕಾರದ ಮೊದಲ ಬಜೆಟ್‌: ಚಿನ್ನ, ಬೆಳ್ಳಿ, ಮೊಬೈಲ್ ಫೋನ್ ಮೇಲಿನ ಸುಂಕ ಇಳಿಕೆ - Union Budget 2024

ABOUT THE AUTHOR

...view details