ಕರ್ನಾಟಕ

karnataka

ETV Bharat / bharat

ಉತ್ತರಾಖಂಡ ಯುಸಿಸಿ ಮಸೂದೆ: ಸಹಜೀವನಕ್ಕೆ ಹೆತ್ತವರ ಒಪ್ಪಿಗೆ ಕಡ್ಡಾಯ, ನೋಂದಣಿಯೂ ಅಗತ್ಯ - UCC Bill Uttarakhand

UCC Bill Uttarakhand: ಉತ್ತರಾಖಂಡ ಸರ್ಕಾರ ಮಂಡಿಸಿದ ಯುಸಿಸಿ ಮಸೂದೆಯು ಹತ್ತು ಹಲವು ಮಹತ್ವದ ಅಂಶಗಳನ್ನು ಒಳಗೊಂಡಿವೆ. ಎಲ್ಲ ಧರ್ಮಗಳನ್ನೂ ಒಳಗೊಂಡ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಯುಸಿಸಿ ಮಸೂದೆ
ಯುಸಿಸಿ ಮಸೂದೆ

By ANI

Published : Feb 6, 2024, 4:33 PM IST

Updated : Feb 6, 2024, 8:21 PM IST

ಡೆಹ್ರಾಡೂನ್ (ಉತ್ತರಾಖಂಡ):ಸಹಜೀವನ ಕಡ್ಡಾಯ ನೋಂದಣಿ, ಇದಕ್ಕೆ ಪೋಷಕರ ಒಪ್ಪಿಗೆ, ಬಾಲ್ಯ ವಿವಾಹ ಸಂಪೂರ್ಣ ನಿಷೇಧ, ಏಕರೂಪ ವಿಚ್ಛೇದನ, ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಪಾಲು, ವಿವಾಹವಾಗಿ ವರ್ಷಕ್ಕೆ ವಿಚ್ಛೇದನ ಪಡೆಯಲು ನಕಾರ, ಧಾರ್ಮಿಕ ನಂಬಿಕೆಗಳು, ಆಚರಣೆಗಳ ಅನುಸಾರ ವಿವಾಹಕ್ಕೆ ಅನುಮತಿ. ಇವು ಉತ್ತರಾಖಂಡ ಸರ್ಕಾರ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದ ಬಹುಮಹತ್ವದ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಕೆಲವು ಅಂಶಗಳು.

ಸ್ವಾತಂತ್ರ್ಯಾನಂತರ ದೇಶದಲ್ಲಿಯೇ ಮೊದಲ ಬಾರಿಗೆ ಎಲ್ಲ ಧರ್ಮಗಳಿಗೆ ಅನ್ವಯವಾಗುವಂತೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಉದ್ದೇಶಿಸಿರುವ ಸಿಎಂ ಪುಷ್ಕರ್​ ಸಿಂಗ್​ ಧಾಮಿ ನೇತೃತ್ವದ ಉತ್ತರಾಖಂಡ ಸರ್ಕಾರ ಬಹುಚರ್ಚಿತ, ಮಹತ್ವಪೂರ್ಣ ಯುಸಿಸಿ ಮಸೂದೆಯನ್ನು ಸದನದ ಮುಂದೆ ಇಟ್ಟಿತು.

ಸಂಹಿತೆಯಲ್ಲಿ ಏನೇನಿದೆ?:ಯುಸಿಸಿ ಮಸೂದೆಯು ವಿವಾದ, ವಿಚ್ಛೇದನ, ಉತ್ತರಾಧಿಕಾರ, ಸಹಜೀವನ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಮಹತ್ವದ ಕಾನೂನುಗಳನ್ನು ವಿಸ್ತೃತವಾಗಿ ಒಳಗೊಂಡಿದೆ. ಜನರು ನಂಬುವ ಧಾರ್ಮಿಕ ವಿಧಿವಿಧಾನಗಳಂತೆ ವಿವಾಹವಾಗಬಹುದು. ಮದುವೆಯಾದ ಒಂದೇ ವರ್ಷಕ್ಕೆ ವಿಚ್ಛೇದನ ಪಡೆಯುವಂತಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.

ಲಿವ್​​ಇನ್​ಗೆ ಪೋಷಕರ ಒಪ್ಪಿಗೆ ಕಡ್ಡಾಯ:ಪ್ರಸ್ತಾವಿತ ಮಸೂದೆಯಲ್ಲಿ, 21 ವರ್ಷದ ವಯಸ್ಕ ಯುವಕ- ಯುವತಿ ಲಿವ್​ ಇನ್​ ಅಂದರೆ ಸಹಜೀವನ ನಡೆಸಲು ಮುಂದಾದರೆ, ಅದಕ್ಕೆ ಇಬ್ಬರೂ ಕಡೆಯ ಪೋಷಕರ ಅನುಮತಿ ಕಡ್ಡಾಯವಾಗಿದೆ. ಜೊತೆಗೆ ಲಿವ್​​ಇನ್​ ಸಂಬಂಧ ಆರಂಭಿಸಿದ 1 ತಿಂಗಳೊಳಗೆ ಕಾನೂನಿನ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕೂಡ ಕಡ್ಡಾಯ. ಇದು ಇಬ್ಬರಿಗೂ ಕಾನೂನಿನ ರಕ್ಷಣೆ ನೀಡುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಇತ್ತೀಚೆಗೆ ಸಹಜೀವನ ನಡೆಸುತ್ತಿರುವ ಜೋಡಿಗಳ ಕೊಲೆಯಾದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿಯಮ ರೂಪಿಸಲಾಗಿದೆ.

ಬಾಲ್ಯ ವಿವಾಹ ನಿಷೇಧ:ಮಸೂದೆಯಲ್ಲಿ ಬಾಲ್ಯ ವಿವಾಹದ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಎಲ್ಲ ಸಮುದಾಯಗಳಲ್ಲಿ ಹೆಣ್ಣುಮಕ್ಕಳು ವಿವಾಹವಾಗಲು 18 ವರ್ಷ, ಪುರುಷರಿಗೆ 21 ವರ್ಷ ಕಡ್ಡಾಯವಾಗಿರಬೇಕು. ಎಲ್ಲ ಧರ್ಮಗಳಲ್ಲಿ ನಡೆಯುವ ವಿವಾಹಗಳನ್ನು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ನೋಂದಣಿ ಮಾಡದ ವಿವಾಹಗಳು ಅಮಾನ್ಯವಾಗುತ್ತವೆ ಎಂದು ತಿಳಿಸಲಾಗಿದೆ.

ಧಾರ್ಮಿಕ ನಂಬಿಕೆಗಳು, ಆಚರಣೆಗಳು, ಸಾಂಪ್ರದಾಯಿಕ ವಿಧಿಗಳು ಮತ್ತು ಸಮಾರಂಭಗಳಿಗೆ ಅನುಸಾರವಾಗಿ ಪುರುಷ ಮತ್ತು ಮಹಿಳೆಯರ ನಡುವೆ ವಿವಾಹವನ್ನು ನಡೆಸಬಹುದಾಗಿದೆ. ಆದರೆ 'ಸಪ್ತಪದತ್', 'ಆಶೀರ್ವಾದ', ನಿಕಾಹ್​, ಹೋಲಿ ಯೂನಿಯನ್​ ಸೇರಿದಂತೆ ಆನಂದ್ ವಿವಾಹ ಕಾಯ್ದೆ 1909, ವಿಶೇಷ ವಿವಾಹ ಕಾಯ್ದೆ- 1954, ಆರ್ಯ ವಿವಾಹ ದೃಢೀಕರಣ ಕಾಯ್ದೆ- 1937 ರ ಅಡಿಯಲ್ಲಿ ಯಾವುದೇ ವಿಶೇಷ ಕಾನೂನಿಗೆ ಒಳಪಡುವುದಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.

ಏಕರೂಪ ವಿಚ್ಛೇದನ:ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಎಲ್ಲ ಧರ್ಮಗಳಿಗೆ ಅನ್ವಯವಾಗುವ ಏಕರೂಪದ ನಿಯಮವನ್ನು ಮಸೂದೆಯಲ್ಲಿ ರೂಪಿಸಿದೆ. ಆಯಾ ಧರ್ಮಗಳ ವಿಶೇಷ ಕಾನೂನಿನಡಿ ವಿಚ್ಛೇದನ ನೀಡುವುದನ್ನು ಪ್ರಸ್ತಾವಿತ ಮಸೂದೆಯು ರದ್ದು ಮಾಡಿದೆ. ಜೊತೆಗೆ, ಸಂಹಿತೆಯು ಎಲ್ಲಾ ಧರ್ಮಗಳ ಮಹಿಳೆಯರಿಗೆ ಅವರ ಪೂರ್ವಜರ ಆಸ್ತಿಯಲ್ಲಿ ಸಮಾನ ಪಾಲು, ಹಕ್ಕುಗಳನ್ನೂ ನೀಡಿದೆ.

ವಿಶೇಷವೆಂದರೆ, ಮದುವೆಯಾದ ಒಂದು ವರ್ಷಕ್ಕೆ ಯಾವುದೇ ಜೋಡಿಯು ವಿಚ್ಛೇದನ ಬಯಸುವಂತಿಲ್ಲ. ಅಂತಹ ಯಾವುದೇ ಅರ್ಜಿಯನ್ನು ಸಲ್ಲಿಸಲು ಅನುಮತಿಸಲಾಗುವುದಿಲ್ಲ ಎಂದು ಮಸೂದೆ ಹೇಳಿದೆ.

ಈ ಸಮುದಾಯಕ್ಕೆ ಕಾಯ್ದೆ ಅನ್ವಯಿಸಲ್ಲ:ಯುಸಿಸಿ ಮಸೂದೆಯು ಸಂವಿಧಾನದ 25, 342, 366 ನೇ ವಿಧಿಯ ಅನುಸಾರ ಬುಡಕಟ್ಟು ಜನಾಂಗ, ಸಾಂಪ್ರದಾಯಿಕ ವ್ಯಕ್ತಿಗಳು ಮತ್ತು ಗುಂಪಿಗೆ ಈ ಕಾನೂನು ಅನ್ವಯಿಸುವುದಿಲ್ಲ. ಸಂವಿಧಾನದ ಭಾಗ 21 ರ ಅಡಿಯಲ್ಲಿ ಅವರ ಹಕ್ಕುಗಳನ್ನು ರಕ್ಷಿಸಲಾಗಿದೆ.

ಸಿಎಂ ಧಾಮಿ ಅವರು ಮಸೂದೆ ಮಂಡಿಸಿ, ಬಿಲ್​ ಅಂಗೀಕರಿಸಿದ ನಂತರ ಉತ್ತರಾಖಂಡವು ಪ್ರಧಾನಿ ನರೇಂದ್ರ ಮೋದಿಯವರ "ಒಂದು ಭಾರತ, ಶ್ರೇಷ್ಠ ಭಾರತ" ದೃಷ್ಟಿಕೋನಕ್ಕೆ ಬಲವಾದ ಆಧಾರಸ್ತಂಭವಾಗಲಿದೆ ಎಂದು ಅಭಿಪ್ರಾಯಪಟ್ಟರು.

ದೇವಭೂಮಿ ಎಂದು ಕರೆಯಲಾಗುವ ಉತ್ತರಾಂಖಡ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾಗುವ ಸನಿಹದಲ್ಲಿದೆ. ನಮ್ಮ ಸರ್ಕಾರ ಸಂಪೂರ್ಣ ಜವಾಬ್ದಾರಿಯಿಂದ ಸಮಾಜದ ಎಲ್ಲ ನಾಗರಿಕರನ್ನು ಏಕದೃಷ್ಟಿಯಲ್ಲಿಟ್ಟುಕೊಂಡು ಏಕರೂಪ ನಾಗರಿಕ ಸಂಹಿತೆಯನ್ನು ತರಲು ಮುಂದಾಗಿದೆ. ಇದು ಭವ್ಯ ಭಾರತ ಕನಸನ್ನು ಸಾಕಾರ ಮಾಡಲಿದೆ ಎಂದರು.

ಇದನ್ನೂ ಓದಿ:ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡಿಸಿದ ಉತ್ತರಾಖಂಡ ಸಿಎಂ ಧಾಮಿ

Last Updated : Feb 6, 2024, 8:21 PM IST

ABOUT THE AUTHOR

...view details