ಕರ್ನಾಟಕ

karnataka

ETV Bharat / bharat

ದೆಹಲಿ ಚುನಾವಣೆ: ಆಪ್​, ಕಾಂಗ್ರೆಸ್​ ಪರ ಪ್ರಚಾರ ಮಾಡಲ್ಲ ಎಂದ ಉದ್ಧವ್​ ಶಿವಸೇನೆ - DELHI ASSEMBLY POLLS

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿದೆ. ಆಪ್​ಗೆ ಟಿಎಂಸಿ, ಎಸ್​ಪಿ ಬೆಂಬಲ ನೀಡಿದರೆ, ಉದ್ಧವ್​ ಬಣದ ಶಿವಸೇನೆ ತಟಸ್ಥ ಇರುವುದಾಗಿ ಘೋಷಿಸಿದೆ.

ಉದ್ಧವ್​ ಠಾಕ್ರೆ
ಉದ್ಧವ್​ ಠಾಕ್ರೆ (ETV Bharat)

By ETV Bharat Karnataka Team

Published : Jan 28, 2025, 5:34 PM IST

ಮುಂಬೈ (ಮಹಾರಾಷ್ಟ್ರ) :I.N.D.I.A ಕೂಟದ ಸದಸ್ಯ ಪಕ್ಷವಾಗಿರುವ ಶಿವಸೇನೆ (ಉದ್ಧವ್​ ಠಾಕ್ರೆ ಬಣ) ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್​ ಮತ್ತು ಕಾಂಗ್ರೆಸ್​​ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಮಂಗಳವಾರ ಘೋಷಿಸಿದೆ.

ದೆಹಲಿ ವಿಧಾನಸಭೆ ಚುಣಾವಣೆಯಲ್ಲಿ ಆಪ್​ ಅಥವಾ ಕಾಂಗ್ರೆಸ್​ನ ಯಾವ ಪಕ್ಷದ ಪರ ಪ್ರಚಾರ ಮಾಡಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಿವಸೇನೆ ಸಂಸದ ಸಂಜಯ್​ ರಾವುತ್, "ಎರಡೂ ಪಕ್ಷಗಳು ನಮ್ಮ ಮಿತ್ರರೇ. ಚುನಾವಣೆಯಲ್ಲಿ ಯಾವ ಪಕ್ಷದ ಪರವಾಗಿಯೂ ಪ್ರಚಾರ ಮಾಡದೆ, ತಟಸ್ಥ ನಿಲುವು ಅನುಸರಿಸಲಾವುದು" ಎಂದರು.

"ಮಾಜಿ ಸಿಎಂ ಉದ್ಧವ್​ ಠಾಕ್ರೆ ಸೇರಿದಂತೆ ನಮ್ಮ ಪಕ್ಷದ ಯಾವುದೇ ನಾಯಕರು ಯಾರ ಪರವಾಗಿಯೂ ಪ್ರಚಾರಕ್ಕೆ ಹೋಗುತ್ತಿಲ್ಲ. ಈ ವಿಚಾರದಲ್ಲಿ ಪಕ್ಷವು ತಟಸ್ಥವಾಗಿರಲು ಬಯಸಿದ್ದೇವೆ " ಎಂದು ಮಾಹಿತಿ ನೀಡಿದರು.

ಆಪ್​ಗೆ ಟಿಎಂಸಿ, ಎಸ್​ಪಿ ಬೆಂಬಲ:ಫೆಬ್ರವರಿ 5 ರಂದು ನಡೆಯುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಮ್​ ಆದ್ಮಿ ಪಕ್ಷಕ್ಕೆ (ಆಪ್​) ತೃಣಮೂಲ ಕಾಂಗ್ರೆಸ್​ ಮತ್ತು ಸಮಾಜವಾದಿ ಪಕ್ಷವು ಈಗಾಗಲೇ ಬೆಂಬಲ ಘೋಷಿಸಿದೆ. ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಆಪ್​ನ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವುದಾಗಿ ತಿಳಿಸಿವೆ.

ಕಾಂಗ್ರೆಸ್​ಗಿಲ್ಲ ಇಂಡಿಯಾ ಬೆಂ‘ಬಲ'?:ಇನ್ನೂ, ಚುನಾವಣೆಯಲ್ಲಿ ಮಿತ್ರಪಕ್ಷ ಆಪ್​ ಜೊತೆ ಮೈತ್ರಿ ಕೂಡ ಮಾಡಿಕೊಳ್ಳದ ಕಾಂಗ್ರೆಸ್​ ಪ್ರತ್ಯೇಕವಾಗಿ ಪ್ರಬಲ ಸ್ಪರ್ಧೆ ನೀಡುತ್ತಿದೆ. ವಿಪಕ್ಷಗಳ ಇಂಡಿಯಾ ಕೂಟದ ಯಾವುದೇ ಸಹಪಕ್ಷಗಳು ಕೂಡ ಬೆಂಬಲ ನೀಡಿಲ್ಲ. ಆಪ್​ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪ ಮಾಡುತ್ತಿರುವ ಕೈ ನಾಯಕರು, ಚುನಾವಣೆಯಲ್ಲಿ ಕೇಜ್ರಿವಾಲ್ ಸೇರಿದಂತೆ ಆ ಪಕ್ಷದ ನಾಯಕರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಇದರಿಂದ ದೆಹಲಿ ಚುನಾವಣಾ ಕಣದಲ್ಲಿ ಆಪ್​, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಹೋರಾಟ ನಡೆಯುವ ನಿರೀಕ್ಷೆಯಿದೆ.

ಇತ್ತ, ಬಿಜೆಪಿಗೆ ಎನ್​ಡಿಎ ಮಿತ್ರಪಕ್ಷವಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣವು ಬೆಂಬಲ ನೀಡುವುದಾಗಿ ಘೋಷಿಸಿದೆ.

ಇದನ್ನೂ ಓದಿ:ದೆಹಲಿ ಚುನಾವಣೆ: ಬಿಜೆಪಿ ಅಭ್ಯರ್ಥಿಗಳಿಗೆ ಶಿಂಧೆ ಬಣದ ಶಿವಸೇನೆ ಬೆಂಬಲ ಘೋಷಣೆ

ಸ್ವಂತ ಬಲದ ಮೇಲೆ ಗೆಲ್ಲಲಾಗದ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳನ್ನು ಕಡೆಗಣಿಸದಿರಲಿ: ಉದ್ಧವ್ ಶಿವಸೇನಾ

ಕೇಜ್ರಿವಾಲ್​ ದೇಶದ ಮಹಾನ್​ ವಂಚಕ- ಅಜಯ್​ ಮಾಕೆನ್​: ಆಪ್​, ಬಿಜೆಪಿ ವಿರುದ್ಧ ಕಾಂಗ್ರೆಸ್​ ಶ್ವೇತಪತ್ರ

ABOUT THE AUTHOR

...view details