ಕರ್ನಾಟಕ

karnataka

ETV Bharat / bharat

ಮಣಿಪುರ ಹಿಂಸಾಚಾರ: ಕೇಂದ್ರದಿಂದ ಮತ್ತೆರಡು ಸಿಆರ್​ಪಿಎಫ್​ ಬೆಟಾಲಿಯನ್ ರವಾನೆ - Manipur Violence - MANIPUR VIOLENCE

ಮಣಿಪುರದಲ್ಲಿ ಈಗಾಗಲೇ ಸೇನೆ, ಅಸ್ಸಾಂ ರೈಫಲ್ಸ್​,​ ಸಿಎಪಿಎಫ್,​ ಸಿಆರ್‌ಪಿಎಫ್​ ಹಾಗೂ ಬಿಎಸ್​ಎಫ್​ ಸೇರಿದಂತೆ 60,000 ಸಿಬ್ಬಂದಿ ಭದ್ರತೆಯ ಹೊಣೆ ಹೊತ್ತಿದ್ದಾರೆ.

two-more-crpf-battalions-come-to-manipur-inner-manipur-mp-writes-to-amit-shah
ಸಂಗ್ರಹ ಚಿತ್ರ (ANI)

By PTI

Published : Sep 11, 2024, 10:44 AM IST

Updated : Sep 11, 2024, 11:00 AM IST

ಇಂಫಾಲ: ಮಣಿಪುರದಲ್ಲಿ ವಿದ್ಯಾರ್ಥಿಗಳ ಹೋರಾಟ ಮತ್ತು ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಸುಮಾರು 2,000 ಸಿಬ್ಬಂದಿ ಒಳಗೊಂಡಿರುವ ಎರಡು ಸಿಆರ್​ಪಿಎಫ್​ ತಂಡವನ್ನು ಈಶಾನ್ಯ ರಾಜ್ಯಕ್ಕೆ ಕೇಂದ್ರ ಗೃಹ ಸಚಿವಾಲಯ ಕಳುಹಿಸಿದೆ.

ಈ ಕುರಿತು ಮಾತನಾಡಿರುವ ಹಿರಿಯ ಅಧಿಕಾರಿಗಳು, ತೆಲಂಗಾಣ ಮತ್ತು ಜಾರ್ಖಂಡ್​ನಿಂದ ಎರಡು ಸಿಆರ್​ಪಿಎಫ್​ ತಂಡಗಳನ್ನು ಮಣಿಪುರಕ್ಕೆ ರವಾನಿಸಲಾಗಿದೆ. ಚುರಾಚಂದ್​ಪುರ್​ ಮತ್ತು ಕಾಂಗ್ಪೊಕ್ಪಿ ಪ್ರದೇಶ ಸೇರಿದಂತೆ ಬುಡಕಟ್ಟು ಪ್ರಾಬಲ್ಯದ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಣಿಪುರದಲ್ಲಿ ಈಗಾಗಲೇ ಸೇನೆ, ಅಸ್ಸಾಂ ರೈಫಲ್ಸ್,​ ಸಿಎಪಿಎಫ್,​ ಸಿಆರ್​ಪಿಎಫ್​ ಹಾಗೂ ಬಿಎಸ್​ಎಫ್​ ಸೇರಿದಂತೆ 60,000 ಸಿಬ್ಬಂದಿ ಇದ್ದಾರೆ. ಮೂಲಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯದ ಮತ್ತಿತರ ಪ್ರದೇಶಗಳಲ್ಲಿ ಕರ್ತವ್ಯಕ್ಕಾಗಿ ಎರಡು ಅಸ್ಸಾಂ ರೈಫಲ್​ ಬೆಟಾಲಿಯನ್​ ಅನ್ನು ಹಿಂಪಡೆಯಲಾಗಿದೆ. ಅಸ್ಸಾಂ ರೈಫಲ್​ ಬೆಟಾಲಿಯನ್ ಹಿಂಪಡೆದ ಹಿನ್ನೆಲೆಯಲ್ಲಿ ಸೋಮವಾರ ಕುಕಿ-ಝೋ ಸಮುದಾಯಕ್ಕೆ ಸೇರಿದ ಸಾವಿರಾರು ಬುಡಕಟ್ಟು ಜನಾಂಗದವರು ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಬೀದಿಗಿಳಿದು ಕಾಂಗ್‌ಪೊಕ್ಪಿ ಮತ್ತು ಚುರಾಚಂದ್‌ಪುರದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರೋನ್​ ಮತ್ತು ಕ್ಷಿಪಣಿಯಂತಹ ಶಸ್ತ್ರಾಸ್ತ್ರ ದಾಳಿ ಕುರಿತು ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿರುವ ಮಣಿಪುರ ಪೊಲೀಸರು, ಬಾಂಬ್​ ಮತ್ತು ಡ್ರೋನ್​ ದಾಳಿ ಕುರಿತು ತನಿಖೆ ನಡೆಯುತ್ತಿದೆ. ಇದನ್ನು ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ನೀಡಲಾಗುವುದು. ಈ ಪ್ರಕರಣದಲ್ಲಿ ಅನೇಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಮಾಹಿತಿಗಳ ಬಗ್ಗೆ ಎಚ್ಚರಿಕೆ ನೀಡಿ, ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.

ಅಮಿತ್​ ಶಾಗೆ ಪತ್ರ:ಮಣಿಪುರದಲ್ಲಿ ಭುಗಿಲೇಳುತ್ತಿರುವ ಹಿಂಸಾಚಾರವನ್ನು ಹತ್ತಿಕ್ಕಲು ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿ, ಇನ್ನರ್​ ಮಣಿಪುರ ಕಾಂಗ್ರೆಸ್​ ಸಂಸದ ಎ.ಬಿಮೋಲ್​ ಅಕೋಜಮ್​ ಅವರು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಗೆ ಪತ್ರ ಬರೆದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಇಂದಿನಿಂದ ಐದು ದಿನ ಇಂಟರ್​ನೆಟ್​ ಸೇವೆ ಬಂದ್​​

Last Updated : Sep 11, 2024, 11:00 AM IST

ABOUT THE AUTHOR

...view details