ಕರ್ನಾಟಕ

karnataka

ETV Bharat / bharat

ಒಂದೇ ರಾಜ್ಯ, ಒಂದೇ ಶಾಲೆ, ಒಂದೇ ತರಗತಿ: ಶಾಲಾ ಗೆಳೆಯರಿಬ್ಬರಿಗೆ ಭೂಸೇನೆ, ವಾಯುಸೇನೆಯ ಹೊಣೆ - Chiefs Of Indian Army And Air Force - CHIEFS OF INDIAN ARMY AND AIR FORCE

ಭಾರತೀಯ ಸೇನಾಪಡೆಗಳಿಗೆ ಶಾಲಾ ದಿನಗಳ ಸ್ನೇಹಿತರಿಬ್ಬರು ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಇಂದು ಭೂಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿರುವ ಜನರಲ್ ಉಪೇಂದ್ರ ದ್ವಿವೇದಿ ಮತ್ತು ವಾಯುಸೇನೆ ಮುಖ್ಯಸ್ಥರಾದ ಅಡ್ಮಿರಲ್ ದಿನೇಶ್ ತ್ರಿಪಾಠಿ ಇಬ್ಬರು ಶಾಲಾ ಸಹಪಾಠಿಗಳಾಗಿದ್ದಾರೆ.

ಶಾಲಾ ಗೆಳೆಯರಿಬ್ಬರು ಭಾರತೀಯ ಸೇನಾಪಡೆಗಳ ಮುಖ್ಯಸ್ಥರಾಗಿ ನೇಮಕ
ಶಾಲಾ ಗೆಳೆಯರಿಬ್ಬರು ಭಾರತೀಯ ಸೇನಾಪಡೆಗಳ ಮುಖ್ಯಸ್ಥರಾಗಿ ನೇಮಕ (ANI)

By ETV Bharat Karnataka Team

Published : Jul 1, 2024, 10:54 AM IST

Updated : Jul 1, 2024, 2:06 PM IST

ನವದೆಹಲಿ:ಭಾರತೀಯ ಸೇನಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶೇಷ ನೇಮಕಾತಿಗಳು ನಡೆದಿವೆ. ಭೂಸೇನೆ ಮುಖ್ಯಸ್ಥರಾಗಿ (ಜನರಲ್) ಉಪೇಂದ್ರ ದ್ವಿವೇದಿ ಮತ್ತು ವಾಯುಸೇನೆ ಮುಖ್ಯಸ್ಥರಾಗಿ (ಅಡ್ಮಿರಲ್) ದಿನೇಶ್ ತ್ರಿಪಾಠಿ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಇವರಿಬ್ಬರೂ ಶಾಲಾ ಹಂತದಲ್ಲಿ ಸಹಪಾಠಿಗಳೆಂಬುದು ಇಲ್ಲಿ ವಿಶೇಷ.

ಉಪೇಂದ್ರ ದ್ವಿವೇದಿ ಮತ್ತು ದಿನೇಶ್​ ತ್ರಿಪಾಠಿ ಅವರು ಮಧ್ಯಪ್ರದೇಶದ ರೇವಾ ಸೈನಿಕ ಶಾಲೆಯಿಂದ ಬಂದವರು. 1970ರ ದಶಕದಲ್ಲಿ ಒಂದೇ ಶಾಲೆಯ 5ನೇ ತರಗತಿಯಲ್ಲಿ ಇಬ್ಬರೂ ಗೆಳೆಯರಾಗಿದ್ದರು. ಲೆಫ್ಟಿನೆಂಟ್ ಜನರಲ್ ದ್ವಿವೇದಿ ಅವರ ರೋಲ್ ಸಂಖ್ಯೆ 931 ಮತ್ತು ಅಡ್ಮಿರಲ್ ತ್ರಿಪಾಠಿ ಅವರ ರೋಲ್ ಸಂಖ್ಯೆ 938 ಆಗಿದೆ. ಇಬ್ಬರು ಟಾಪ್​ ಅಧಿಕಾರಿಗಳ ರೋಲ್ ಸಂಖ್ಯೆಗಳೂ ಹತ್ತಿರದಲ್ಲಿವೆ. ಶಾಲಾರಂಭದ ದಿನಗಳಿಂದಲೂ ಇಬ್ಬರ ಬಾಂಧವ್ಯ ಗಟ್ಟಿ ಇದೆ. ವೃತ್ತಿಜೀವನ ಆರಂಭಿಸಿದ ಬಳಿಕ ಈರ್ವರು ವಿವಿಧ ಪಡೆಗಳಲ್ಲಿದ್ದರೂ ಉತ್ತಮ ಸಂಪರ್ಕ ಹೊಂದಿದ್ದಾರೆ.

ಉಪೇಂದ್ರ ದ್ವಿವೇದಿ ಮತ್ತು ದಿನೇಶ್ ತ್ರಿಪಾಠಿ ಅವರ ಸ್ನೇಹ ಎರಡೂ ಪಡೆಗಳ ನಡುವಿನ ಕಾರ್ಯವ್ಯಾಪ್ತಿಯನ್ನು ಭೂಸೇನೆ ಮತ್ತು ವಾಯುಸೇನಾ ಪಡೆಗಳನ್ನು ಬಲಪಡಿಸುವಲ್ಲಿ ಬಹಳಷ್ಟು ನೆರವಾಗಲಿದೆ. 50 ವರ್ಷಗಳ ನಂತರವೂ ತಮ್ಮ ಸ್ನೇಹವನ್ನು ಮುಂದುವರಿಸಿಕೊಂಡು ಬಂದ ಇಬ್ಬರು ಅದ್ಭುತ ವಿದ್ಯಾರ್ಥಿಗಳನ್ನು ನೀಡಿ ಅಪರೂಪದ ಗೌರವಕ್ಕೆ ಮಧ್ಯಪ್ರದೇಶದ ರೇವಾ ಸೈನಿಕ ಶಾಲೆ ಒಳಗಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಭರತ್ ಭೂಷಣ್ ಬಾಬು 'ಎಕ್ಸ್'​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ತಿಂಗಳ ಅಂತರದಲ್ಲಿ ಸ್ನೇಹಿತರ ನೇಮಕಾತಿ:ಎರಡು ತಿಂಗಳ ಅಂತರದಲ್ಲಿ ಇಬ್ಬರು ಸಹಪಾಠಿ ಸ್ನೇಹಿತರ ನೇಮಕಾತಿಗಳು ನಡೆದಿವೆ. ದಿನೇಶ್​ ತ್ರಿಪಾಠಿ ಅವರನ್ನು ಮೇ 1ರಂದು ಭಾರತೀಯ ನೌಕಾಪಡೆಯ ಅಡ್ಮಿರಲ್​ ಆಗಿ ನೇಮಿಸಿದ್ದರೆ, ಉಪೇಂದ್ರ ದ್ವಿವೇದಿ ಅವರನ್ನು ಜನರಲ್ ಆಗಿ ಎರಡು ದಿನಗಳ ನೇಮಕ ಮಾಡಲಾಗಿದೆ.

ದ್ವಿವೇದಿ ಅವರು ಉತ್ತರ ಸೇನಾ ಕಮಾಂಡರ್ ಆಗಿ ಸುದೀರ್ಘ ಅಧಿಕಾರಾವಧಿ ನಡೆಸಿದ್ದಾರೆ. ಪೂರ್ವ ಲಡಾಖ್‌ ಗಡಿಯಲ್ಲಿ ನಡೆಯುವ ದೀರ್ಘಾವಧಿ ಮಿಲಿಟರಿ ಕಾರ್ಯಾಚರಣೆಗಳನ್ನು ಸಮರ್ಥವಾಗಿ ನಿಯಂತ್ರಿಸಿದ ಖ್ಯಾತಿ ಹೊಂದಿದ್ದಾರೆ. ಜುಲೈ 1, 1964ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ತಮ್ಮ 20ನೇ ವಯಸ್ಸಿನಲ್ಲಿಯೇ (ಡಿಸೆಂಬರ್ 15, 1984 ರಂದು) ಭಾರತೀಯ ಸೇನೆಗೆ ಸೇರಿದ್ದರು. ಮೊದಲು ಅವರು ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನಲ್ಲಿ ನಿಯೋಜಿತರಾಗಿದ್ದರು.

ಇದನ್ನೂ ಓದಿ:ದೇಶದಲ್ಲಿ ಇಂದಿನಿಂದ ಹೊಸ ಅಪರಾಧ ಕಾನೂನುಗಳು ಜಾರಿಗೆ; ಏನೆಲ್ಲ ಬದಲಾವಣೆ ಗೊತ್ತಾ? - NEW CRIMINAL LAWS

Last Updated : Jul 1, 2024, 2:06 PM IST

ABOUT THE AUTHOR

...view details