ತಕ್ಷಕ್ ಹಾವಿನ ದೃಶ್ಯ (ETV Bharat) ಪಾಟ್ನಾ (ಬಿಹಾರ): ಹಾರುವ ಹಾವಿನ ಬಗ್ಗೆ ಆಗಾಗ ಚರ್ಚೆಯಾಗುತ್ತಿರುತ್ತದೆ. ಇತ್ತೀಚೆಗಷ್ಟೇ ಬಿಹಾರದ ಬಗಾಹಾದಲ್ಲಿ ತಕ್ಷಕ್ ಹಾವು ಕಾಣಿಸಿಕೊಂಡಿತ್ತು. ಈ ಹಾವು ತೆವಳುವ ಬದಲು ಹಾರುತ್ತದೆ ಎಂದು ಹೇಳಲಾಗಿದೆ. ಹಾವು ಹಾರಲು ಸಾಧ್ಯವೇ ಎಂದು ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಈ ಕುರಿತು ಈಟಿವಿ ಭಾರತ್ ತಜ್ಞರನ್ನು ಸಂಪರ್ಕಿಸಿದೆ. ಸಂವಾದದಲ್ಲಿ ತಜ್ಞರು ಹಾವಿನ ಗುಣಗಳ ಬಗ್ಗೆಯೂ ತಿಳಿಸಿದರು. ಮಹಾಭಾರತ ಕಾಲದ್ದು ಎನ್ನಲಾದ ಪೌರಾಣಿಕ ಮಹತ್ವ ಕೂಡ ಇದೆ ಎನ್ನುತ್ತಾರೆ ತಜ್ಞರು.
ಹಾರುವ ಹಾವಿನ ಸತ್ಯವೇನು?:ವಾಸ್ತವವಾಗಿ, ನಾವು ಹಾರುವ ಹಾವು ಅಥವಾ ಗ್ಲೈಡಿಂಗ್ ಹಾವಿನ ಬಗ್ಗೆ ಮಾತನಾಡುತ್ತಿದ್ದೇವೆ. ರೆಕ್ಕೆಗಳಿಲ್ಲದ ಹಾರುವ ಹಾವು ಇದೆ ಎಂದು ನಾವು ಇಲ್ಲಿಯವರೆಗೆ ಕೇಳಿದ್ದೇವೆ. ಆದರೆ ತಕ್ಷಕ ಹಾವು ಹಾರುವುದಿಲ್ಲ. ಆದರೆ ಅದು ಗಾಳಿಯಲ್ಲಿ ತೇಲುತ್ತದೆ ಎಂದು ತಜ್ಞರು ಹೇಳುತ್ತಾರೆ. ತಜ್ಞರ ಪ್ರಕಾರ, ಇದು ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಜಿಗಿಯುತ್ತದೆ. ಆದ್ರೆ ಹಾರುವ ಮೂಲಕ ತಲುಪುವುದಿಲ್ಲ. ಅದು ಮೇಲಿನಿಂದ ಕೆಳಕ್ಕೆ ಜಿಗಿಯುತ್ತದೆ ಹೊರತು ಕೆಳಗಿನಿಂದ ಮೇಲಕ್ಕೆ ಅಲ್ಲ ಎಂದು ತಜ್ಞರು ಹೇಳುತ್ತಾರೆ.
ಹಾವಿಗೆ ಇರುವುದಿಲ್ಲ ರೆಕ್ಕೆ, ಆದ್ರೆ ತಕ್ಷಕ್ ಹಾವು ಹಾರುವುದು ಹೇಗೆ ಗೊತ್ತಾ! (ETV Bharat) 'ಹಾವು ಹಾರುವುದಿಲ್ಲ ಈಜುತ್ತದೆ':ಈ ಕುರಿತು ವಿಶೇಷ ಮಾಹಿತಿ ನೀಡಿದ ನ್ಯೂಸ್ ಎನ್ವಿರಾನ್ಮೆಂಟ್ ಮತ್ತು ವೈಲ್ಡ್ ಲೈಫ್ ಸೊಸೈಟಿ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಅಭಿಷೇಕ್, ತಕ್ಷಕ್ ನಾಗ್ ಅನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಇದನ್ನು ಆರ್ನೆಟ್ಸ್ ಫ್ಲೈಯಿಂಗ್ ಸ್ನೇಕ್, ಟಕಾ ನಾಗ್, ಕ್ರೈಸೊಪೆಲಿಯಾ ಅರ್ನೆಟಾ ಅಥವಾ ಗ್ಲೈಡಿಂಗ್ ಸ್ನೇಕ್ ಎಂದು ಕರೆಯಲಾಗುತ್ತದೆ. ಈ ಹಾವು ಹಾರುವುದಿಲ್ಲ. ಆದರೆ ತೇಲುತ್ತದೆ ಎಂದು ಹೇಳಿದರು. ಗ್ಲೈಡ್ ಎಂದರೆ ಗಾಳಿಯಲ್ಲಿ ತೇಲುವುದು ಎಂದರ್ಥ..
"ಹಾವು ತನ್ನ ದೇಹವನ್ನು ಎಸ್ ಆಕಾರದಲ್ಲಿ ತಿರಿಗುಸತ್ತದೆ ಮತ್ತು ಸ್ಪ್ರಿಂಗ್‌ನಂತೆ ಜಿಗಿಯುತ್ತದೆ. ಇದರಲ್ಲಿ ಗುರುತ್ವಾಕರ್ಷಣೆಯ ಬಲವು ಪಾತ್ರವನ್ನು ವಹಿಸುತ್ತದೆ. ಈ ಹಾವು ಕೆಳಗಿನಿಂದ ಮೇಲಕ್ಕೆ ಹಾರುವುದನ್ನು ನೋಡಲಾಗುವುದಿಲ್ಲ. ಆದ್ರೆ ಇವು ಬಹಳ ದೂರದವರೆಗೂ ಜಿಗಿಯುತ್ತವೆ. ಹೀಗಾಗಿ ಈ ಹಾವುಗಳು ಸಾಮಾನ್ಯವಾಗಿ 12 ರಿಂದ 15 ಅಡಿ ಎತ್ತರದ ಮರಗಳ ಮೇಲೆ ವಾಸಿಸುತ್ತವೆ ಎಂದು ಅಭಿಷೇಕ್ ಹೇಳಿದರು.
'ತಕ್ಷಕ್ ಹಾವು ಹಾರುವುದಿಲ್ಲ':ವಾಲ್ಮೀಕಿ ವಸುಧಾ ಮುಖ್ಯಾಧಿಕಾರಿ ಹಾಗೂ ಮಾಜಿ ರೇಂಜರ್ ದಿವಂಗತ ಬಿ.ಡಿ. ಸಿನ್ಹಾ ಅವರ ಪುತ್ರ ವಿಡಿ ಸಂಜು ಮಾತನಾಡಿ, ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರತಿದಿನ ವಿವಿಧ ರೀತಿಯ ಹಾವುಗಳು ಹೊರಬರುತ್ತವೆ. ಅವರು ತಮ್ಮ ಅನುಭವವದ ಕುರಿತು ಮಾತನಾಡಿದರು. ವಾಲ್ಮೀಕಿ ಅರಣ್ಯ ಪ್ರದೇಶದಲ್ಲಿ ನಾನು ನನ್ನ ಬಾಲ್ಯವನ್ನು ಕಳೆದಿದ್ದೇನೆ. ಹಾಗಾಗಿ ಕಾಡುಪ್ರಾಣಿಗಳ ಗುಣಲಕ್ಷಣಗಳ ಬಗ್ಗೆ ನಾನು ನನ್ನ ತಂದೆಯಿಂದ ಸಾಕಷ್ಟು ಮಾಹಿತಿ ಪಡೆಯುತ್ತಿದ್ದೆ. ಆಗ ಈ ಹಾವಿನ ಬಗ್ಗೆ ನಮ್ಮ ತಂದೆ ನನಗೆ ವಿಶೇಷ ಮಾಹಿತಿ ನೀಡಿದ್ದರು. ತಕ್ಷಕ್ ಹಾವು ಹಾರುವುದಿಲ್ಲ ಎಂದು ಅವರು ಖಚಿತಪಡಿಸಿದ್ದರು.
ಹಾವಿಗೆ ಇರುವುದಿಲ್ಲ ರೆಕ್ಕೆ, ಆದ್ರೆ ತಕ್ಷಕ್ ಹಾವು ಹಾರುವುದು ಹೇಗೆ ಗೊತ್ತಾ! (ETV Bharat) "ಇದು ಸಾಮಾನ್ಯವಾಗಿ 3 ರಿಂದ 4 ಅಡಿ ಎತ್ತರದ ತೆಳ್ಳಗಿನ ಹಾವು. ಎತ್ತರದ ಮರಗಳ ಮೇಲೆ ವಾಸಿಸುತ್ತದೆ. ಇದು ಮರದ ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಜಿಗಿಯುತ್ತದೆ. ಇದಕ್ಕಾಗಿ ಅದು ತನ್ನ ದೇಹವನ್ನು ವಿಶೇಷ ಆಕಾರಕ್ಕೆ ಬದಲಾಯಿಸುತ್ತದೆ. ಮೇಲಿನಿಂದ ಕೆಳಕ್ಕೆ ಮಾತ್ರ ಜಿಗಿಯುತ್ತದೆ ಎಂದು ವನ್ಯಜೀವಿ ತಜ್ಞ ವಿ.ಡಿ. ಸಂಜು ತಮ್ಮ ಅಭಿಪ್ರಾಯವನ್ನು ಈಟಿವಿ ಭಾರತ್ದೊಂದಿಗೆ ಹಂಚಿಕೊಂಡಿದ್ದಾರೆ.
ಹಾರುವ ಹಾವುಗಳ ರಹಸ್ಯವೇನು?: ಜರ್ನಲ್ ಆಫ್ ಎಕ್ಸ್‌ಪೆರಿಮೆಂಟಲ್ ಬಯಾಲಜಿ ಪ್ರಕಾರ, ಹಾವು ಹಾರುವ ಜೀವಿಯಲ್ಲ, ಅದು ಹಾರಲು ಸಾಧ್ಯವಿಲ್ಲ. ಆದರೆ, ವರದಿಯ ಪ್ರಕಾರ, ಹಾವು ತೇಲುತ್ತಿರುವಾಗ ಹಾವಿನ ದೇಹದಲ್ಲಿ ಬದಲಾವಣೆ ಕಂಡುಬರುತ್ತದೆ. ಅಂದರೆ, ಹಾವು ವಾಯುಬಲ ವೈಜ್ಞಾನಿಕ ಶಕ್ತಿಯನ್ನು ಉತ್ಪಾದಿಸುತ್ತದೆ. ಹೀಗಾಗಿ ಹಾವು ತನ್ನ ದೈಹಿಕ ಬದಲಾವಣೆಗಳಿಂದಾಗಿ ಅದು ಹಾರಾಟದಲ್ಲಿ ಯಶಸ್ವಿಯಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಾವಿನ ರಾಜ:ಈ ಹಾವು ನೋಡಲು ಸುಂದರವಾಗಿದೆ. ಅದರ ಮೈಮೇಲೆ ಗಂಧದ ಮರದಂತ ಚರ್ಮ ಹೊಂದಿರುತ್ತದೆ. ಈ ಹಾವಿಗೆ ಪೌರಾಣಿಕ ಮಹತ್ವವೂ ಇದೆ. ಈ ಕುರಿತಂತೆ ಅನೇಕ ಕಥೆಗಳು ಜನಪ್ರಿಯವಾಗಿವೆ. ಇದರ ಇತಿಹಾಸ ಮಹಾಭಾರತದ ಕಾಲಕ್ಕೆ ಸಂಬಂಧಿಸಿದೆ. ಅದೇ ಹಾವು ರಾಜ ಪರೀಕ್ಷಿತನಿಗೆ ಕಚ್ಚಿದ್ದರಿಂದ ಆತ ಸಾವನ್ನಪ್ಪಿದನು ಎಂಬ ಪ್ರತೀತಿಯೂ ಇದೆ. ಈ ಹಾವು ಸರ್ಪಗಳ ರಾಜ ಎಂದು ನಂಬಲಾಗಿದೆ ಅಂತಾ ವನ್ಯಜೀವಿ ತಜ್ಞ ವಿ.ಡಿ. ಸಂಜು ವಿವರಿಸಿದರು.
ತಕ್ಷಕ್ ನಾಗ್ ಯಾರು?:ಪುರಾಣದ ಪ್ರಕಾರ ಭೂಲೋಕದಲ್ಲಿ ಎಂಟು ಸರ್ಪಗಳಿದ್ದು, ಅವುಗಳಲ್ಲಿ ತಕ್ಷಕ್ ಎಂಬ ಹಾವು ಇತ್ತು. ತಕ್ಷಕನು ಕಶ್ಯಪನ ಮಗ. ತಕ್ಷಕ್ ರಾಜ ಪರೀಕ್ಷಿತನನ್ನು ಕಚ್ಚಿದವನು. ಈ ಕಾರಣಕ್ಕಾಗಿ, ರಾಜನ ಮಗ ಜನಮೇಜಯನು ತಕ್ಷಕನ ಮೇಲೆ ಕೋಪಗೊಂಡನು. ಅಷ್ಟೇ ಅಲ್ಲ, ರಾಜ ಜನಮೇಜಯನು ಲೋಕದಿಂದ ಹಾವುಗಳನ್ನು ನಾಶಮಾಡಲು ಯಾಗವನ್ನು ಸಹ ಮಾಡಿದನು. ನಂತರ ತಕ್ಷಕನು ಹೆದರಿ ಇಂದ್ರನಲ್ಲಿ ಆಶ್ರಯ ಪಡೆದನು.
ತಕ್ಷಕನ ಜೀವ ಉಳಿಸಿದ್ದು ಹೀಗೆ: ಯಾಗ ಪ್ರಾರಂಭವಾದಾಗ ಋಷಿಗಳ ಮಂತ್ರಗಳೊಂದಿಗೆ ಇಂದ್ರನು ತಕ್ಷಕನೊಂದಿಗೆ ಬೆಂಕಿಯ ಕಡೆಗೆ ಸೆಳೆಯಲು ಪ್ರಾರಂಭಿಸಿದನು. ಆಗ ಇಂದ್ರ ತಕ್ಷಕನನ್ನು ಬಿಟ್ಟನು. ಅಗ್ನಿಕುಂಡವನ್ನು ತಲುಪಿದ ಕೂಡಲೇ ತಕ್ಷಕನು ರಾಜ ಜನಮೇಜಯನಿಗೆ ಮನವಿ ಮಾಡಿದನು. ಹೀಗೆ ಜನಮೇಜಯನು ತಕ್ಷಕನನ್ನು ಬಿಟ್ಟನು. ಅಂದಿನಿಂದ ಈ ಹಾವುಗಳ ಜಾತಿಗೆ ತಕ್ಷಕ್ ಎಂದು ಹೆಸರಿಸಲಾಯಿತು.
ತಕ್ಷನಿಗೆ ಇಬ್ಬರು ಹಿರಿಯ ಸಹೋದರರು:ಕಥೆಗಳ ಪ್ರಕಾರ, ಶೇಷನಾಗ್ ಹಿರಿಯ, ವಾಸುಕಿ ಮತ್ತು ಶೇಷನಾಗ ಭಗವಾನ್ ವಿಷ್ಣುವನ್ನು ಆಶ್ರಯಿಸಿದಾಗ, ಅವನು ವಾಸುಕಿಯನ್ನು ಪಟ್ಟಾಭಿಷೇಕ ಮಾಡಿ ನಾಗಲೋಕವನ್ನು ಒಪ್ಪಿಸಿದನು. ಹಲವು ವರ್ಷಗಳ ನಂತರ ವಾಸುಕಿಯು ಶಿವನ ಸೇವೆ ಮಾಡಲು ಹೋದನು. ಈ ವೇಳೆ ತಕ್ಷಕ್ನನ್ನು ನಾಗಲೋಕಕ್ಕೆ ರಾಜನನ್ನಾಗಿ ಮಾಡಲಾಯಿತು. ಹೀಗಾಗಿ ಪುರಾಣಗಳ ಪ್ರಕಾರ ತಕ್ಷಕನು ಹಾವುಗಳ ರಾಜ ಎಂದು ನಂಬಲಾಗಿದೆ.
'ತಕ್ಷಕ್ ಎಂಬ ಜಾತಿಯೂ ಇತ್ತು':ತಕ್ಷಕ್ ಎಂಬ ಸಮುದಾಯದ ಜನರು ಭಾರತದಲ್ಲಿಯೂ ವಾಸಿಸುತ್ತಿದ್ದರು ಎಂದು ವಿದ್ವಾಂಸರು ನಂಬುತ್ತಾರೆ. ತಜ್ಞರ ಪ್ರಕಾರ, ಈ ಜನರು ತಮ್ಮನ್ನು ತಕ್ಷಕ್ ನಾಗ್ನ ಮಕ್ಕಳು ಎಂದು ಪರಿಗಣಿಸಿದ್ದಾರೆ. ಈ ಜನರು ಬಹುಶಃ ಶಾಕಾ, ಟಿಬೆಟ್, ಮಂಗೋಲಿಯಾ ಮತ್ತು ಚೀನಾದ ನಿವಾಸಿಗಳಾಗಿರಬಹುದು ಎಂದು ನಂಬಲಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಮಹಾಭಾರತ ಯುದ್ಧದ ನಂತರ, ತಕ್ಷಕನ ಅಧಿಕಾರವು ಹೆಚ್ಚಾಗತೊಡಗಿತು. ಇದರ ನಂತರ, ಅವರು ದೀರ್ಘಾವಧಿಯವರೆಗೆ ವಾಯುವ್ಯ ಭಾರತವನ್ನು ಆಳಿದರು ಎನ್ನಲಾಗ್ತಿದೆ.
ಓದಿ:ಆರ್ಡರ್ ಮಾಡಿದ್ದು ಎಕ್ಸ್ಬಾಕ್ಸ್ ಕಂಟ್ರೋಲರ್, ಅಮೆಜಾನ್ ಬಾಕ್ಸ್‌ನೊಂದಿಗೆ ಬಂತು ಜೀವಂತ ಹಾವು! - Cobra In Amazon Package