ಕರ್ನಾಟಕ

karnataka

ETV Bharat / bharat

ನಾವು ಎನ್​​ಡಿಎ ಜತೆಗೆ ಇದ್ದೇವೆ, ಇಂದಿನ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ: ಚಂದ್ರಬಾಬು ನಾಯ್ಡು - Chandrababu Naidu statement - CHANDRABABU NAIDU STATEMENT

''ರಾಜಕೀಯದಲ್ಲಿ ಯಾರೂ ಶಾಶ್ವತರಲ್ಲ. ದೇಶ, ಪ್ರಜಾಪ್ರಭುತ್ವ ಮತ್ತು ರಾಜಕೀಯ ಪಕ್ಷಗಳು ಶಾಶ್ವತ. ರಾಜಕೀಯ ಪಕ್ಷಗಳು ಸರಿಯಾಗಿ ಕೆಲಸ ಮಾಡಿದರೆ ಜನ ಮತ್ತೆ ಬೆಂಬಲಿಸುತ್ತಾರೆ'' ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದರು. ಈ ನಡುವೆ ಇಂದಿನ ಎನ್​ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ಜೆಡಿಯು ವರಿಷ್ಠ ಹಾಗೂ ಬಿಹಾರ ಸಿಎಂ ನಿತೀಶ್​ ಕುಮಾರ್​ ದೆಹಲಿಗೆ ತೆರಳಿದ್ದಾರೆ.

CHANDRABABU NAIDU  TDP  NDA  Lok Sabha Election Result 2024
ಚಂದ್ರಬಾಬು ನಾಯ್ಡು (ETV Bharat)

By ETV Bharat Karnataka Team

Published : Jun 5, 2024, 11:32 AM IST

Updated : Jun 5, 2024, 12:15 PM IST

ಅಮರಾವತಿ, ಆಂಧ್ರಪ್ರದೇಶ:''ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಅಭೂತಪೂರ್ವ ಗೆಲುವಿಗಾಗಿ ರಾಜ್ಯದ ಜನತೆಗೆ ತಲೆಬಾಗುತ್ತೇನೆ'' ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಇದೇ ವೇಳೆ ನಾವು ಎನ್​ಡಿಎ ಜತೆಗೆ ಇದ್ದೇವೆ. ಇಂದು ಪ್ರಧಾನಿ ಕರೆದಿರುವ ಎನ್​ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚಂದ್ರಬಾಬು ನಾಯ್ಡು ಅವರು ಉಂಡವಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ''ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಐದು ವರ್ಷಗಳ ಕಾಲ ಈ ರೀತಿಯ ಸರ್ಕಾರವನ್ನು ನೋಡಿರಲಿಲ್ಲ'' ಎಂದರು.

''ಜಗನ​ಮೋಹನ್ ರೆಡ್ಡಿ ಆಡಳಿತದಲ್ಲಿ ಎಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗಳು ಹೇಗೆ ನಲುಗಿವೆ ಎಂಬುದನ್ನು ನಾವು ನೋಡಿದ್ದೇವೆ. ಎಲ್ಲವನ್ನೂ ಅರಿತುಕೊಂಡು ಜನ ನಮಗೆ ಗೆಲವು ನೀಡಿದ್ದಾರೆ. ರಾಜ್ಯವನ್ನು ಎತ್ತಿ ಹಿಡಿಯುವುದೇ ನಮ್ಮ ಧ್ಯೇಯ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ನಾವು ಮುನ್ನಡೆದಿದ್ದೇವೆ. ರಾಜಕೀಯದಲ್ಲಿ ಯಾರೂ ಶಾಶ್ವತರಲ್ಲ. ರಾಷ್ಟ್ರ, ಪ್ರಜಾಪ್ರಭುತ್ವ ಮತ್ತು ಪಕ್ಷಗಳು ಶಾಶ್ವತ. ಪಕ್ಷಗಳೂ ಸರಿಯಾಗಿ ಕಾರ್ಯ ನಿರ್ವಹಿಸಿದರೆ ಜನ ಮತ್ತೆ ಬೆಂಬಲಿಸುತ್ತಾರೆ. ಈ ರೀತಿಯ ಐತಿಹಾಸಿಕ ಚುನಾವಣೆಯನ್ನು ನಾನು ನೋಡಿಲ್ಲ'' ಎಂದರು.

ಅಮೆರಿಕದ ವ್ಯಕ್ತಿಯೂ ಬಂದು ನಮ್ಮೊಂದಿಗೆ ಉತ್ಸಾಹದಿಂದ ಕೆಲಸ ಮಾಡಿದ್ದಾರೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಕೆಲಸಕ್ಕೆ ಹೋದವರೂ ಬಂದು ಮತ ಹಾಕಿ ಗೆಲ್ಲಿಸಿದ್ದಾರೆ. ಟಿಡಿಪಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಚುನಾವಣೆ ಇದು. 1983ರಲ್ಲಿ ಎನ್‌ಟಿಆರ್ ತಮ್ಮ ಪಕ್ಷವನ್ನು ಸ್ಥಾಪಿಸಿದಾಗ 200 ಸ್ಥಾನಗಳನ್ನು ಗೆದ್ದರು. ಅದಾದ ನಂತರ ಫಲಿತಾಂಶಗಳು ಅನಿರೀಕ್ಷಿತವಾಗಿದ್ದವು. ಮೈತ್ರಿಕೂಟಕ್ಕೆ ಶೇ.55.38ರಷ್ಟು ಮತಗಳು ಲಭಿಸಿವೆ. 45.60 ರಷ್ಟು ಟಿಡಿಪಿ ಮತ್ತು 39.37 ರಷ್ಟು ವೈಎಸ್​ಆರ್​ ಕಾಂಗ್ರೆಸ್​ ಪಾಲಾಗಿದೆ'' ಎಂದು ಚಂದ್ರಬಾಬು ನಾಯ್ಡು ಹೇಳಿದರು.

ದೆಹಲಿಯತ್ತ ನಿತೀಶ್​ ಕುಮಾರ್:ಇಂದು ಸಂಜೆ ನಡೆಯಲಿರುವ ಎನ್​ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ಬಿಹಾರ್ ಸಿಎಂ ನಿತೀಶ್ ಕುಮಾರ್​ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಇಂಡಿ ಕೂಟದಿಂದ ಡೆಪ್ಯೂಟಿ ಪಿಎಂ ಆಫರ್​ ನೀಡಲಾಗಿದೆ ಎಂಬ ಊಹಾಪೋಹದ ನಡುವೆ ನಿತೀಶ್​ ಕುಮಾರ್, ಎನ್​ಡಿಎ ಸಭೆಯಲ್ಲಿ ಭಾಗವಹಿಸುವುದಕ್ಕೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದಿನ ಎನ್​ಡಿಎ ಸಭೆ ಬಳಿಕ ಸರ್ಕಾರ ರಚನೆ ಬಗ್ಗೆ ಸ್ಪಷ್ಟತೆ ಲಭ್ಯವಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ:ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊನೆಯ ಸಚಿವ ಸಂಪುಟ ಸಭೆ - Union Cabinet Last Meeting

Last Updated : Jun 5, 2024, 12:15 PM IST

ABOUT THE AUTHOR

...view details