ಚಂಡೀಗಢ: ಪಂಜಾಬ್ನ ಸಿರ್ಹಿಂದ್‌ನ ಮಾಧೋಪುರ ಎಂಬ ಪ್ರದೇಶದಲ್ಲಿ ಗೂಡ್ಸ್ ರೈಲುಗಳು ನಡುವೆ ಭೀಕರ ಅಪಘಾತ ಸಂಭವಿಸಿ, ಇಬ್ಬರು ಲೋಕೋ ಪೈಲಟ್ಗಳ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗಿನ ಜಾವ 3.45ರ ಸುಮಾರಿಗೆ ನಡೆದಿದೆ.
ಈ ಘಟನೆ ಬಗ್ಗೆ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ನಸುಕಿನಜಾವ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎರಡೂ ರೈಲುಗಳ ಚಾಲಕರು ಗಾಯಗೊಂಡಿದ್ದಾರೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಗಾಯಗೊಂಡ ಲೋಕೋ ಪೈಲಟ್ಗಳಿಬ್ಬರು ಉತ್ತರ ಪ್ರದೇಶದವರಾಗಿದ್ದು, ಒಬ್ಬರು ಹಿಮಾಂಶು ಕುಮಾರ್, ಮತ್ತೊಬ್ಬರು ವಿಕಾಸ್ ಎಂದು ತಿಳಿದು ಬಂದಿದೆ. ಇಬ್ಬರನ್ನು ಸ್ಥಳೀಯ ಶ್ರೀ ಫತ್ತೇಘರ್ ಸಾಹಿಬ್ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ. ಘಟನೆಯಿಂದ ಅಂಬಾಲಾ ಮತ್ತು ಲುಧಿಯಾನ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ.