ಬರ್ಧಮಾನ್ (ಪಶ್ಚಿಮ ಬಂಗಾಳ) :ಬರ್ಧಮಾನ್ - ದುರ್ಗಾಪುರ ಲೋಕಸಭಾ ಕ್ಷೇತ್ರದ ಮೊಂಟೇಶ್ವರ್‌ನ ಗ್ರಾಮವೊಂದರಲ್ಲಿ ಬಿಜೆಪಿ ಬೂತ್ ಏಜೆಂಟ್‌ಗೆ ಥಳಿಸಿ ಹೊರಹಾಕಲಾಗಿದೆ ಎಂಬ ಆರೋಪ ಮಾಡಲಾಗಿದೆ. ಸುದ್ದಿ ತಿಳಿದು ಬಿಜೆಪಿ ಅಭ್ಯರ್ಥಿ, ಎಸ್‌ಎನ್‌ಡಿ ಮಾಜಿ ರಾಜ್ಯ ಮುಖ್ಯಸ್ಥ ದಿಲೀಪ್ ಘೋಷ್ ಸ್ಥಳಕ್ಕೆ ಹೋದಾಗ, ಅವರ ಸುತ್ತಲೂ ಸಹ ಪ್ರತಿಭಟನೆಗಳು ನಡೆದಿವೆ. ಈ ವೇಳೆ, ದಿಲೀಪ್ ಘೋಷ್ ಮತ್ತು ಅವರ ಭದ್ರತಾ ಸಿಬ್ಬಂದಿಗೂ ಕಿರುಕುಳ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ದಿಲೀಪ್ ಅವರ ಭದ್ರತಾ ಸಿಬ್ಬಂದಿ ಮತ್ತು ಮಾಧ್ಯಮದ ಕಾರುಗಳನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ.
ಈ ಇಡೀ ಘಟನೆಯಲ್ಲಿ ತೃಣಮೂಲ ವಿರುದ್ಧ ದೂರು ದಾಖಲಾಗಿದ್ದು, ಕೇಂದ್ರ ಪಡೆಗಳು ಮತ್ತು ಪೊಲೀಸರು ಮೊಂಟೇಶ್ವರದ ಗ್ರಾಮವೊಂದರ ಆ ಬೂತ್‌ಗೆ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದರು. ಸದ್ಯ ಅಲ್ಲಿ ಪರಿಸ್ಥಿತಿ ಸ್ತಬ್ಧವಾಗಿದ್ದು, ಸೇನೆಯ ಉಸ್ತುವಾರಿಯಲ್ಲಿ ಮತದಾನ ನಡೆಯುತ್ತಿದೆ. ಎಲ್ಲ ಆರೋಪಗಳು ಸುಳ್ಳು ಎಂದು ತೃಣಮೂಲ ಕಾಂಗ್ರೆಸ್ ಹೇಳಿ ಕೊಂಡಿದೆ.
ಆ ಬೂತ್‌ನಲ್ಲಿ ಬಿಜೆಪಿ ಏಜೆಂಟರನ್ನು ಕೂರಲು ಬಿಡದೇ ತೃಣಮೂಲ ಕಾಂಗ್ರೆಸ್ನ ಕಾರ್ಯಕರ್ತರು ಥಳಿಸಿ ಹೊರಗೆ ಕಳಿಸಿದ್ದಾರೆ ಎಂಬ ಆರೋಪದ ಸುದ್ದಿ ತಿಳಿದ ದಿಲೀಪ್ ಘೋಷ್ ಸ್ಥಳಕ್ಕೆ ಆಗಮಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಅಲ್ಲಿಗೆ ತಲುಪುತ್ತಿದ್ದಂತೆಯೇ ಪರಿಸ್ಥಿತಿ ಬಿಗಡಾಯಿಸಿತು. ತೃಣಮೂಲ ಕಾರ್ಯಕರ್ತರು ದಿಲೀಪ್ ಘೋಷ್ ಸ್ಥಳವನ್ನು ತೊರೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ದಿಲೀಪ್ ಘೋಷ್ ಅವರ ಕಾರಿನ ಮುಂದೆ ಮಲಗಿ ಪ್ರತಿಭಟಿಸಿದರು. ಈ ವೇಳೆ, ಕೆಲವು ತೃಣಮೂಲ ಕಾರ್ಯಕರ್ತರೊಂದಿಗೆ ದಿಲೀಪ್ ವಾಗ್ವಾದ ಮಾಡುತ್ತಿರುವ ಚಿತ್ರಗಳು ಮಾಧ್ಯಮಗಳಲ್ಲಿ ಲಭ್ಯವಾಗಿವೆ.
ಆಂಧ್ರದಲ್ಲೂ ಅಲ್ಲಲ್ಲಿ ಗಲಾಟೆ, ಹಲ್ಲೆ ಆರೋಪ - ದಾಳಿ ಖಂಡಿಸಿದ ಚಂದ್ರಬಾಬು ನಾಯ್ಡು: ಟಿಡಿಪಿ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು ಅವರು ಪುಂಗನೂರು, ಮಾಚೆರ್ಲಾ, ರೈಲ್ವೆ ಕೋಡೂರು, ಮೈದುಕೂರು, ಅಮದಾಲವಲಸ ಮತ್ತು ತಾಡಿಕೊಂಡದಲ್ಲಿ ಎನ್‌ಡಿಎ ಮೈತ್ರಿಕೂಟದ ಏಜೆಂಟ್‌ಗಳ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ.