ನವದೆಹಲಿ: ಭಯೋತ್ಪಾದಕರಿಂದ ಅಪಹರಣಕ್ಕೆ ಒಳಗಾದ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಟೆರಿಟೋರಿಯಲ್ ಆರ್ಮಿಯ ಯೋಧರ ಮೃತದೇಹವನ್ನು ಉತ್ರಾಸೂ ಪ್ರದೇಶದ ಸಾಂಗ್ಲಾನ್ ಅರಣ್ಯ ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.
ಈ ಸಂಬಂಧ ಮಾಹಿತಿ ನೀಡಿರುವ ಸೇನೆ, ಗುಪ್ತಚರ ಮಾಹಿತಿಯ ಆಧಾರದ ಮೇಲೆ ಅಕ್ಟೋಬರ್ 8 ರಂದು ಕಜ್ವಾನ್ ಅರಣ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಇತರ ಏಜೆನ್ಸಿಗಳೊಂದಿಗೆ ಭಾರತೀಯ ಸೇನೆಯು ಜಂಟಿ ಪ್ರತಿ ಕಾರ್ಯಾಚರಣೆಗೆ ಮುಂದಾಯಿತು. ಈ ವೇಳೆ ಅರಣ್ಯ ಪ್ರದೇಶದಿಂದ ಇಬ್ಬರು ಟಿಎ ಸೈನಿಕರನ್ನು ಭಯೋತ್ಪಾದಕರು ಅಪಹರಿಸಿದರು. ಈ ಅಪಹರಣ ಸಂದರ್ಭದಲ್ಲಿ ಓರ್ವ ಯೋಧ ತಪ್ಪಿಸಿಕೊಳ್ಳುವಲ್ಲಿ, ಅವರಿಂದ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಅಪಹರಣಕ್ಕೆ ಒಳಗಾಗಿರುವ ಮತ್ತೊಬ್ಬ ಯೋಧನಿಗಾಗಿ ಭದ್ರತಾ ಪಡೆಗಳು ಹುಟುಕಾಟ ಪ್ರಾರಂಭಿಸಿತ್ತು. ಇದೀಗ ಯೋಧ ಶವವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.