ಹೈದರಾಬಾದ್(ತೆಲಂಗಾಣ):ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಪಕ್ಷದ ವಿಧಾನ ಪರಿಷತ್ ಸದಸ್ಯ ದಂಡೆ ವಿಠ್ಠಲ್ ಅವರ ಆಯ್ಕೆ 'ಅಸಿಂಧು' ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿದೆ. ಇದೇ ವೇಳೆ 50 ಸಾವಿರ ದಂಡವನ್ನೂ ವಿಧಿಸಿದೆ.
ದಂಡೆ ವಿಠ್ಠಲ್ 2022ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಮುಖಂಡ ಪಟ್ಟಿರೆಡ್ಡಿ ರಾಜೇಶ್ವರ್ ರೆಡ್ಡಿ ತದನಂತರ ನಾಮಪತ್ರ ಹಿಂಪಡೆದಿದ್ದರು. ಇದಾದ ಬಳಿಕ ಅವರು ದಂಡೆ ವಿಠ್ಠಲ್ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮನ್ನು ನಾಮನಿರ್ದೇಶನ ಮಾಡಿದ ಕಿಶನ್ ಸಿಂಗಾರಿ ಅವರು ತಮ್ಮ ಜನನ ಪ್ರಮಾಣ ಪತ್ರವನ್ನು ನಕಲಿಸಿ ನಾಮಪತ್ರ ಹಿಂಪಡೆದ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ರಾಜೇಶ್ವರ್ ರೆಡ್ಡಿ ಪರ ವಕೀಲರು ವಾದಿಸಿದ್ದರು. ರಾಜೇಶ್ವರ್ ರೆಡ್ಡಿ ಅವರ ಅರ್ಜಿಯ ಮೇಲಿನ ಸಹಿ ಮತ್ತು ನಾಮಪತ್ರ ಹಿಂಪಡೆದ ದಾಖಲೆಗಳ ಮೇಲಿನ ಸಹಿಯನ್ನು ಹೈಕೋರ್ಟ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಇದರ ವರದಿ ಬಂದ ಬಳಿಕ ಕೋರ್ಟ್ ತೀರ್ಪು ನೀಡಿದೆ.