ಕರ್ನಾಟಕ

karnataka

ಸಿಡಿಲು ಅಬ್ಬರಿಸುವಾಗ ಸ್ಮಾರ್ಟ್​ಫೋನ್​ ಬಳಕೆ ಬೇಡ; ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!.. ಏಕೆಂದರೆ? - Mobile Phone During Thunderstorm

By ETV Bharat Karnataka Team

Published : May 17, 2024, 5:32 PM IST

Mobile Phone During Thunderstorm: ಗುಡುಗು ಮತ್ತು ಮಿಂಚಿನ ಸಮಯದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮಾತನಾಡುವುದನ್ನು ನೀವು ಕೇವಲವಾಗಿ ತೆಗೆದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತಾ ತಿಳಿದುಕೊಳ್ಳಿ. ಏಕಂತೀರಾ.. ಇಲ್ಲಿದೆ ಸಂಪೂರ್ಣ ಮಾಹಿತಿ..

SMARTPHONE DURING THUNDERSTORM  HOW TO PROTECT MOBILE  MOBILE USE TIPS IN RAIN
ಸಿಡಿಲು ಅಬ್ಬರಿಸುವಾಗ ಸ್ಮಾರ್ಟ್​ಫೋನ್​ ಬಳಕೆ ಬೇಡ ಎನ್ನುತ್ತಾರೆ ತಜ್ಞರು (ಕೃಪೆ: ETV Bharat (ಸಂಗ್ರಹ ಚಿತ್ರ))

ಹೈದರಾಬಾದ್: ಈಗ ದೇಶದಲ್ಲಿ ಮಳೆಗಾಲ ಆರಂಭವಾಗಿದೆ. ವಾತಾವರಣವೂ ಹಿತಕರವಾಗಿದೆ. ಜೋರು ಮಳೆ, ಪಕೋಡ ತಿನ್ನುತ್ತಾ ಸಖತ್​ ಮಜಾ ಮಾಡಬಹುದು. ಆದರೆ, ಈ ಮಳೆಗಾಲದಲ್ಲಿ ಭಾರಿ ಸಿಡಿಲು ಬಿದ್ದಾಗ ಒಂದು ಕ್ಷಣ ಎದೆ ಝಲ್​ ಎನ್ನುತ್ತೆ.. ಅಷ್ಟೇ ಅಲ್ಲ ಒಂದೊಂದು ಸಮಯದಲ್ಲಿ ಈ ಸಿಡಿಲು ಪ್ರಾಣಕ್ಕೆ ಹಾನಿಯನ್ನುಂಟು ಮಾಡುತ್ತವೆ. ಅದರಲ್ಲೂ ನಮ್ಮ ಸ್ಮಾರ್ಟ್​ಫೋನ್​ನಿಂದ ಇನ್ನೂ ಹೆಚ್ಚು ಅಪಾಯಕಾರಿ ಎಂದು ಸಾಬೀತು ಆಗಿದೆ.

ಹೌದು! ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಕೈಗೂ ಸ್ಮಾರ್ಟ್‌ಫೋನ್‌ಗಳು ಬಹಳ ಮುಖ್ಯವಾಗಿವೆ. ಆದರೆ, ಮಳೆ ಮತ್ತು ಮಿಂಚಿನ ಸಮಯದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಅದು ಮಾರಣಾಂತಿಕವಾಗಬಹುದು. ಇದರಿಂದ ಅಪಾಯವೂ ಹೆಚ್ಚುತ್ತದೆ. ಬಯಲು ಮತ್ತು ಹೊಲಗಳಲ್ಲಿ ಹೆಚ್ಚಾಗಿ ಮಿಂಚುಗಳು ಬೀಳುತ್ತವೆ. ಒಂದೊಂದು ಸಾರಿ ಕೆಲಸ ಮಾಡುವ ರೈತರು ಇಂತಹ ಸಂದರ್ಭದಲ್ಲಿ ಅಪಾಯದಲ್ಲಿ ಸಿಲುಕಿಕೊಳ್ಳುತ್ತಾರೆ.

ಇದಲ್ಲದೇ ಮಿಂಚಿನ ಸಮಯದಲ್ಲಿ ನೀವು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಅದು ಮಾರಣಾಂತಿಕವಾಗಬಹುದು. ಆಕಾಶದಲ್ಲಿ ಗುಡುಗು ಮತ್ತು ಮಿಂಚಿನ ಸಮಯದಲ್ಲಿ ನೀವು ಹೊರಗಡೆ ಸ್ಮಾರ್ಟ್​ಫೋನ್​ ಬಳಸುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಮಾರ್ಟ್‌ಫೋನ್ ಏಕೆ ಬಳಸಬಾರದು ಎಂಬುದನ್ನು ತಿಳಿಯೋದಾದರೆ.

ಮಾಹಿತಿಯ ಪ್ರಕಾರ, ನಾವು ಸ್ಮಾರ್ಟ್​ಫೋನ್​ ಬಳಸಿದಾಗ, ಅಲ್ಟ್ರಾ - ವೈಡ್ ಕಿರಣಗಳು ವೇಗವಾಗಿ ಹೊರಬರುತ್ತವೆ. ಮೊಬೈಲ್​ನಿಂದ ಹೊರಬರುವ ಮಿಂಚನ್ನೂ ತನ್ನತ್ತ ಸೆಳೆಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸಿಡಿಲು ಬಂದಾಗ, ತಕ್ಷಣ ಮೊಬೈಲ್ ಫೋನ್ ಅನ್ನು ಸ್ವಿಚ್ಡ್​​ ಆಫ್ ಮಾಡಬೇಕು ಎಂದು ತಜ್ಞರು ನಂಬುತ್ತಾರೆ. ಮೊಬೈಲ್ ಫೋನ್‌ಗಳ ಜೊತೆಗೆ ಮನೆಯಲ್ಲಿ ಬಳಸುವ ಇತರ ಎಲೆಕ್ಟ್ರಾನಿಕ್ಸ್‌ಗಳನ್ನು ಸಹ ಸ್ವಿಚ್ಡ್​​ ಆಫ್ ಮಾಡಬೇಕು. ಇವುಗಳಲ್ಲಿ ಟಿವಿ, ಫ್ರಿಜ್, ಕೂಲರ್, ಪ್ರೆಸ್, ರೇಡಿಯೋ ಮತ್ತು ಇತರವುಗಳು ಸೇರಿವೆ. ಹೀಗಾಗಿ ನಮ್ಮ ಹಿರಿಯರು ಗುಡುಗು ಮತ್ತು ಸಿಡಿಲಿನ ಸದ್ದು ಕೇಳಿದಾಗ ಮನೆಯಲ್ಲಿ ಫೋನ್​ ಮತ್ತು ಟಿವಿ ಉಪಯೋಗಿಸಬೇಡಿ ಅಂತಾ ಆಗಾಗ ಹೇಳುತ್ತಿರುವುದು ನೀವು ಸ್ಮರಿಸಬಹುದು..

ಇನ್ಮುಂದೆ ಆದರೂ ಹುಷಾರ್​ ಆಗಿರ್ತಿರಲ್ಲವೆ? ಹಿರಿಯರು ಹಾಗೂ ತಜ್ಞರು ಹೇಳುವ ಸಲಹೆಗಳನ್ನು ಪಾಲಿಸಿ, ಜೀವವನ್ನು ಕಾಪಾಡಿಕೊಳ್ಳುವುದು ಉತ್ತಮ. ಒಂದೊಮ್ಮೆ ಇವೆಲ್ಲ ಸಲಹೆಗಳನ್ನು ಮಾತುಗಳನ್ನು ನಿರ್ಲಕ್ಷ್ಯ ಮಾಡಿದರೆ ಜೀವ ಅಪಾಯಕ್ಕೆ ಖಂಡಿತಾ ಸಿಲುಕುತ್ತೀರಿ ಎಂಬುದನ್ನ ಮರೆಯಬೇಡಿ.

ಓದಿ:ಮಾನ್ಸೂನ್‌ಗೂ ಮುನ್ನ ಸಿಡಿಲು ಬಡಿದು 12 ಸಾವು; ಹಲವು ಕಡೆ ಅಪಾರ ಹಾನಿ - LIGHTNING KILLS 12

ABOUT THE AUTHOR

...view details