PAN Card Offline Apply: ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಅಥವಾ ಖಾಯಂ ಖಾತೆ ಸಂಖ್ಯೆಯು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದು ಅಗತ್ಯ. ಪ್ಯಾನ್ ಕಾರ್ಡ್ ಹಲವಾರು ಉಪಯೋಗಗಳನ್ನು ಹೊಂದಿದೆ. ಉದ್ಯಮದ ನೋಂದಾವಣೆ, ಹಣಕಾಸು ವಹಿವಾಟುಗಳು, ಬ್ಯಾಂಕ್ ಖಾತೆಯನ್ನು ತೆರೆಯಲು, ಫೋನ್/ಗ್ಯಾಸ್ ಸಂಪರ್ಕ ಪಡೆಯಲು, ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಹೂಡಿಕೆ ಸೇರಿದಂತೆ ಇತ್ಯಾದಿಗಳಿಗೂ ಪ್ಯಾನ್ ಕಾರ್ಡ್‌ನ್ನು ಬಳಸಬಹುದು. ಈ ಪ್ಯಾನ್ ಕಾರ್ಡ್ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎಂಬುದು ನಾವು ಈಗಾಗಲೇ ತಳಿಸುವ ಪ್ರಯತ್ನ ಮಾಡಿದ್ದಾವೆ. ಈಗ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ, ಆನ್ಲೈನ್ ಮತ್ತು ಆಫ್‌ಲೈನ್ ಶುಲ್ಕ ಎಷ್ಟು ಎಂಬುದು ತಿಳಿಯೋಣಾ ಬನ್ನಿ..
PAN ಕಾರ್ಡ್‌ಗಾಗಿ ಆಫ್‌ಲೈನ್ ಅರ್ಜಿಯನ್ನು ಸಹ ಸಲ್ಲಿಸಬಹುದು (PAN Card Offline Apply). ಮೊದಲು ಅರ್ಜಿದಾರರು ಹತ್ತಿರದ TIN NSDL ಕೇಂದ್ರಕ್ಕೆ ಭೇಟಿ ನೀಡಬೇಕು. ಆಗ ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ಆಫ್‌ಲೈನ್ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹಂತ-1: ನೀವು ಮೊದಲು ಆನ್ಲೈನ್ಲ್ಲಿ https://www.protean-tinpan.com/downloads/pan/download/Form_49A.PDF ಈ ವಿಳಾಸಕ್ಕೆ ಭೇಟಿ ನೀಡಿ ಫಾರ್ಮ್ 49A ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಹಂತ-2: ಫಾರ್ಮ್ 49A ಫಾರ್ಮ್ ಅನ್ನು ಪ್ರಿಂಟ್ ತೆಗೆದುಕೊಂಡು ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ. ಬಳಿಕ ಫಾರ್ಮ್‌ನಲ್ಲಿ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಲಗತ್ತಿಸಿಬೇಕು.
ಹಂತ-3: 'NSDL - PAN' ಪರವಾಗಿ ಬೇಡಿಕೆ ಡ್ರಾಫ್ಟ್ ರೂಪದಲ್ಲಿ ಶುಲ್ಕವನ್ನು ಪಾವತಿಸಬೇಕು. ಬಳಿಕ ಫಾರ್ಮ್‌ನೊಂದಿಗೆ ಪುರಾವೆಗಳ ಸ್ವಯಂ-ದೃಢೀಕರಿಸಿದ ಫೋಟೋಕಾಪಿಗಳನ್ನು ಅಂದ್ರೆ ಝಿರಾಕ್ಸ್ ಕಾಪಿಗಳನ್ನು ಲಗತ್ತಿಸಬೇಕು.
ಹಂತ-4: ಅರ್ಜಿ ನಮೂನೆಯನ್ನು ಒಳಗೊಂಡಿರುವ ಲಕೋಟೆಯ ಮೇಲೆ 'APPLICATION FOR PAN-N-Acknowledgement Number' ಎಂದು ನಮೂದಿಸಿ ಮತ್ತು ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಬೇಕು.
ಹಂತ-5: Income Tax PAN Services Unit, NSDL e-Governance Infrastructure Limited, 5th Floor, Mantri Sterling, Plot No. 341, Survey No. 997/8, Model Colony, Deep Near Bangla Chowk, Pune-411016 |
ಹಂತ-6: ಅರ್ಜಿಯ ಯಶಸ್ವಿ ಪ್ರಕ್ರಿಯೆಯ ನಂತರ PAN ಅನ್ನು ರಚಿಸಲಾಗುತ್ತದೆ ಮತ್ತು ಅರ್ಜಿದಾರರ ವಸತಿ ವಿಳಾಸಕ್ಕೆ ಕಳುಹಿಸಲಾಗುತ್ತದೆ.
ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಶುಲ್ಕ: ಆನ್ಲೈನ್ ಅಥವಾ ಆಫ್‌ಲೈನ್ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಭಾರತೀಯ ವಿಳಾಸಕ್ಕೆ ಪ್ಯಾನ್ ಅರ್ಜಿ ಶುಲ್ಕ 107 ರೂ. ಮತ್ತು ಸಾಗರೋತ್ತರ ವಿಳಾಸಕ್ಕೆ PAN ಶುಲ್ಕ ರೂ.1017-(ಜೊತೆಗೆ GST). ಶುಲ್ಕವನ್ನು 'ಎನ್‌ಎಸ್‌ಡಿಎಲ್-ಪ್ಯಾನ್', ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ರಚಿಸಲಾದ ಬೇಡಿಕೆ ಡ್ರಾಫ್ಟ್ ಮೂಲಕ ಪಾವತಿಸಲಾಗುತ್ತದೆ.