ಮುಂಬೈ (ಮಹಾರಾಷ್ಟ್ರ):ಟಿ20 ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಕ್ರಿಕೆಟಿಗರನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಇಲ್ಲಿನ ವಿಧಾನ ಭವನದಲ್ಲಿ ಶುಕ್ರವಾರ ಸನ್ಮಾನಿಸಿದರು.
ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಸದಸ್ಯರು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ದಕ್ಷಿಣ ಮುಂಬೈನಲ್ಲಿರುವ ಅವರ ಅಧಿಕೃತ ನಿವಾಸ 'ವರ್ಷ'ದಲ್ಲಿ ಶುಕ್ರವಾರ ಭೇಟಿಯಾದರು. ಮುಖ್ಯಮಂತ್ರಿಗಳು ಆಟಗಾರರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಬ್ಯಾಟರ್ ಸಂಜು ಸ್ಯಾಮ್ಸನ್, ಆರಂಭಿಕ ಯಶಸ್ವಿ ಜೈಸ್ವಾಲ್, ಆಲ್ ರೌಂಡರ್ ಶಿವಂ ದುಬೆ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರನ್ನು ಸಿಎಂ ಸನ್ಮಾನಿಸಿದರು.
ರೋಹಿತ್ ಶರ್ಮಾ, ಸೂರ್ಯಕುಮಾರ್ ಮುಂಬೈ ಮೂಲದವರಾಗಿದ್ದರೆ. ಉತ್ತರ ಪ್ರದೇಶ ಮೂಲಕ ಶಿವಂ ದುಬೆ ಮತ್ತು ಜೈಸ್ವಾಲ್ ಅವರು ಮುಂಬೈನಲ್ಲಿ ನೆಲೆಸಿದ್ದಾರೆ. ಟಿ20 ವಿಶ್ವಕಪ್ ಜೊತೆಗೆ ಭಾರತ ತಂಡವು ಗುರುವಾರ ತವರಿಗೆ ಆಗಮಿಸಿದೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು. ಈ ವೇಳೆ ತಂಡದೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.