ಕರ್ನಾಟಕ

karnataka

ETV Bharat / bharat

ಉತ್ತರ ಪ್ರದೇಶ: ವ್ಯಕ್ತಿಯ ಹೊಟ್ಟೆಯಲ್ಲಿ ಸಿಲಿಂಡರ್‌ ಆಕೃತಿಯ ಕಬ್ಬಿಣ ಪತ್ತೆ!

32 ವರ್ಷದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿದ್ದ ಸಿಲಿಂಡರ್‌ ಆಕೃತಿಯ ಉದ್ಧದ ಕಬ್ಬಿಣವನ್ನು ವೈದ್ಯರು ಹೊರತೆಗೆದ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.

Surgeon Removes Iron Cylinder From Man's Stomach In UP's Gorakhpur
ಉತ್ತರ ಪ್ರದೇಶ: ವ್ಯಕ್ತಿಯ ಹೊಟ್ಟೆಯಲ್ಲಿ ಸಿಲಿಂಡರ್‌ ಆಕೃತಿಯ ಕಬ್ಬಿಣ ಪತ್ತೆ!

By ETV Bharat Karnataka Team

Published : Feb 18, 2024, 10:57 PM IST

ಗೋರಖ್‌ಪುರ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ವಿಚಿತ್ರವಾದ ಘಟನೆಯೊಂದು ಬೆಳಕಿಗೆ ಬಂದಿದೆ. 32 ವರ್ಷದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಸಿಲಿಂಡರ್‌ ಆಕೃತಿಯ ಉದ್ದದ ಕಬ್ಬಿಣ ಪತ್ತೆಯಾಗಿದ್ದು, ಭಾನುವಾರ ಅದನ್ನು ಖಾಸಗಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಶಾಹಿ ಗ್ಲೋಬಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಸ್ಪತ್ರೆಯ ವೈದ್ಯರ ಪ್ರಕಾರ, ಈ ವ್ಯಕ್ತಿ ತೀವ್ರ ಹೊಟ್ಟೆನೋವು ಎಂದು ಹೇಳಿಕೊಂಡು ಆಸ್ಪತ್ರೆಗೆ ಬಂದಿದ್ದ. ಆಗ ವೈದ್ಯರು ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದಾಗ ಆತನ ಹೊಟ್ಟೆಯಲ್ಲಿ ಕಬ್ಬಿಣದ ಸಿಲಿಂಡರ್ ಇರುವುದು ಪತ್ತೆಯಾಗಿದೆ. ಬಳಿಕ ಆಸ್ಪತ್ರೆಯ ನಿರ್ದೇಶಕ ಡಾ.ಶಿವಶಂಕರ್ ಶಾಹಿ ನೇತೃತ್ವದಲ್ಲಿ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ ಸಿಲಿಂಡರ್ ಹೊರತೆಗೆಯಲಾಗಿದೆ. ಇದು ಎರಡು ಅಡಿ ಉದ್ದ ಮತ್ತು 8 ಸೆಂಟಿಮೀಟರ್ ಅಗಲವಿದೆ ಎನ್ನಲಾಗಿದೆ.

ಆದರೆ, ರೋಗಿಯ ಗುರುತನ್ನು ಆಸ್ಪತ್ರೆಯವರು ಬಹಿರಂಗಪಡಿಸಿಲ್ಲ. ಬದಲಿಗೆ ಶಸ್ತ್ರಚಿಕಿತ್ಸೆಯ ವಿಡಿಯೋ ಮತ್ತು ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ, ತನ್ನ ಹೊಟ್ಟೆಯೊಳಗೆ ಇಷ್ಟು ಉದ್ದದ ಸಿಲಿಂಡರ್‌ ಆಕೃತಿಯ ಕಬ್ಬಿಣ ಹೇಗೆ ಹೋಯಿತು ಎಂಬುದನ್ನು ರೋಗಿಯು ಸರಿಯಾಗಿ ವಿವರಿಸಿಲ್ಲ. ಸದ್ಯ ರೋಗಿ ಆರೋಗ್ಯವಾಗಿದ್ದು, ಒಂದೆರೆಡು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:4 ತಿಂಗಳಿನಿಂದ ವೃದ್ಧನ ಹೊಟ್ಟೆಯೊಳಗೆ ಸಿಲುಕಿರುವ ಲೋಟ.. ಇಷ್ಟು ದಿನ ವಿಷಯ ಮುಚ್ಚಿಟ್ಟಿದ್ದು ಯಾಕೆ?

ABOUT THE AUTHOR

...view details