ನವದೆಹಲಿ:ಸುಪ್ರೀಂ ಕೋರ್ಟ್ನ ಯೂಟ್ಯೂಬ್ ಚಾನಲ್ ಅನ್ನು ಶುಕ್ರವಾರ ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದು, ಅದರಲ್ಲಿ ಅಮೆರಿಕ ಮೂಲದ ಕಂಪನಿ ರಿಪ್ಪೆಲ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದ ಕ್ರಿಪ್ಟೊಕರೆನ್ಸಿ ಕುರಿತು ಪ್ರಚಾರ ಮಾಡಲಾಗಿದೆ.
ಯೂಟ್ಯೂಬ್ ಚಾನಲ್ ಹ್ಯಾಕ್ ಆಗಿದ್ದು, ಖಾಲಿ ವಿಡಿಯೋದಲ್ಲಿ 'ಬ್ರಾಡ್ ಗಾರ್ಲಿಂಗ್ಹೌಸ್: ರಿಪ್ಪೆಲ್ ರೆಸ್ಪಾಂಡ್ಸ್ ಟು ದಿ ಎಸ್ಇಸಿಯ 2 ಬಿಲಿಯನ್ ಡಾಲರ್ ದಂಡ! ಎಕ್ಸ್ಆರ್ಪಿ ಪ್ರೈಸ್ ಪ್ರೆಡಿಕ್ಷನ್' ("Brad Garlinghouse: Ripple Responds To The SEC's $2 Billion Fine! XRP PRICE PREDICTION") ಎಂಬ ಶೀರ್ಷಿಕೆ ಕಂಡುಬರುತ್ತಿದೆ.