ಕರ್ನಾಟಕ

karnataka

ETV Bharat / bharat

'ದೆಹಲಿ ಗಾಳಿ ತೀವ್ರ ಕಳಪೆಯಾದರೂ ಕ್ರಮ ವಹಿಸಿಲ್ಲವೇಕೆ?': ಆಪ್​ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ತರಾಟೆ - SUPREME COURT

ದೆಹಲಿಯಲ್ಲಿ ವಾಯುಗುಣಮಟ್ಟ ಕಳಪೆಯಾಗಿದ್ದರೂ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡದ ದೆಹಲಿ ಸರ್ಕಾರವನ್ನು ಸುಪ್ರೀಂಕೋರ್ಟ್​ ತರಾಟೆಗೆ ತೆಗೆದುಕೊಂಡಿತು.

ದೆಹಲಿ ಗಾಳಿ ತೀವ್ರ ಕಳಪೆ
ದೆಹಲಿ ಗಾಳಿ ತೀವ್ರ ಕಳಪೆ (ETV Bharat)

By ETV Bharat Karnataka Team

Published : Nov 18, 2024, 3:36 PM IST

ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ತೀವ್ರ ಕಳಪೆಯಾಗಿದೆ. ಭಾರೀ ವಾಹನಗಳ ಸಂಚಾರ ತಡೆಯದ ಆಪ್​ ಸರ್ಕಾರವನ್ನು ಸುಪ್ರೀಂಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ.

ವಾಯುಗುಣಮಟ್ಟ ತಡೆ ಕುರಿತು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಸೋಮವಾರ ವಿಚಾರಣೆ ನಡೆಸಿತು.

ನಿಯಮ ಸಡಿಲ ಮಾಡಿದ್ದೇಕೆ?:ಈ ವೇಳೆ ಸಿಎಂ ಅತಿಶಿ ಅವರ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೀಠವು, ಕೋರ್ಟ್​ ಅನುಮತಿ ಇಲ್ಲದೇ ವಾಯು ಮಾಲಿನ್ಯ ತಡೆಗಟ್ಟುವ ಕ್ರಮಗಳನ್ನು ಸಡಿಲ ಮಾಡಿದ್ದು ಯಾಕೆ?. ಈ ಮೂಲಕ ಅಪಾಯವನ್ನು ಆಹ್ವಾನಿಸುತ್ತೀದ್ದೀರಾ ಎಂದು ಪ್ರಶ್ನಿಸಿತು.

ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಆತಂಕಕಾರಿ ಮಟ್ಟವನ್ನು ಮುಟ್ಟಿದ ನಂತರವೂ ಮಾಲಿನ್ಯ ತಡೆ ಕ್ರಮಗಳನ್ನು ಜಾರಿ ಮಾಡಲು ವಿಳಂಬ ಧೋರಣೆ ಏಕೆ?. ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್‌ನ (GRAP) 4 ನೇ ಹಂತವನ್ನು ಅನುಷ್ಠಾನ ಮಾಡಲು ಸಮಸ್ಯೆಯೇನು ಎಂದು ಪೀಠವು ಕೇಳಿದೆ.

ಭಾರೀ ವಾಹನಗಳ ಪ್ರವೇಶ ನಿಷೇಧ:ಇದಕ್ಕೆ ದೆಹಲಿ ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ, ಇಂದಿನಿಂದಲೇ (ಸೋಮವಾರ) 4ನೇ ಹಂತದ ಕ್ರಮಗಳನ್ನು ಜಾರಿಗೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿಗೆ ಭಾರೀ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ವಾಯು ಗುಣಮಟ್ಟ ಸೂಚ್ಯಂಕ 300 ಅಥವಾ 400 ರ ನಡುವೆ ಇದ್ದಾಗ 4ನೇ ಹಂತವನ್ನು ಜಾರಿ ಮಾಡಬೇಕು. ಆದರೆ, ಎಕ್ಯೂಐ ಮಟ್ಟ ನಿಗದಿತ ಮಟ್ಟ ಮೀರಿದ್ದರೂ ನೀವು ಅನುಷ್ಟಾನ ವಿಳಂಬ ಮಾಡಿ, ಅಪಾಯಕ್ಕೆ ಆಹ್ವಾನ ನೀಡುತ್ತಿದ್ದೀರಿ ಎಂದು ನ್ಯಾಯಪೀಠವು ಚಾಟಿ ಬೀಸಿತು. ದಿನದ ಅಂತ್ಯದಲ್ಲಿ ಈ ಸಮಸ್ಯೆಯನ್ನು ವಿವರವಾಗಲಿ ಆಲಿಸುವುದಾಗಿ ಕೋರ್ಟ್​ ತಿಳಿಸಿತು.

400 ಕ್ಕಿಂತ ಹೆಚ್ಚಾದ ಎಕ್ಯುಐ:ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಸೋಮವಾರ ಬೆಳಗ್ಗೆ 457ಕ್ಕೆ ತಲುಪಿದೆ. ಭಾನುವಾರ ಸಂಜೆ 4 ಗಂಟೆ ವೇಳೆಯೂ ಇಷ್ಟೇ ಪ್ರಮಾಣದಲ್ಲಿತ್ತು. ವಾಯು ಮಾಲಿನ್ಯ ತಡೆ ಕ್ರಮಗಳ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ 2 ದಿನಗಳ ಹಿಂದಷ್ಟೆ ಒಪ್ಪಿತ್ತು. ಇದರ ಬೆನ್ನಲ್ಲೇ, ದೆಹಲಿ ಸರ್ಕಾರ ಸೋಮವಾರ ಬೆಳಗ್ಗೆಯಿಂದಲೇ 4ನೇ ಹಂತದ ಕಟ್ಟುನಿಟ್ಟಾದ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಘೋಷಿಸಿತು.

ಸೋಮವಾರ ಬೆಳಿಗ್ಗೆ 8 ರಿಂದಲೇ ರಾಜಧಾನಿಗೆ ಒಳಬರುವ ಭಾರೀ ವಾಹನಗಳು, ಟ್ರಕ್​ಗಳ ಪ್ರವೇಶವನ್ನು ನಿಷೇಧಿಸಿತು. ನಿರ್ಮಾಣ ಕಾರ್ಯಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿದೆ.

ಇದನ್ನೂ ಓದಿ:ಕಳಪೆಯಲ್ಲಿ ಕಳಪೆ ದೆಹಲಿ ವಾಯು ಗುಣಮಟ್ಟ: ಶಾಲೆಗಳು ಬಂದ್,​ ವಿದ್ಯಾರ್ಥಿಗಳಿಗೆ ಆನ್​ಲೈನ್​ ಕ್ಲಾಸ್​

ABOUT THE AUTHOR

...view details