ಕರ್ನಾಟಕ

karnataka

ETV Bharat / bharat

ಮಳೆಯಿಲ್ಲ- ಹಿಮವಿಲ್ಲ, ಆದರೆ, ಭಯಂಕರ ಚಳಿ; ಜಮ್ಮುವಿನಲ್ಲಿ ಮುಂದುವರೆದ ಕನಿಷ್ಠ ತಾಪಮಾನ - SRINAGAR SHIVERS AT MINUS

ಸದ್ಯ ರಾಜ್ಯದಲ್ಲಿ -6.2 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದ್ದು, ಭಾರೀ ಗಾಳಿಯಿಂದ ಕೂಡಿದ ಥರಗುಟ್ಟುವ ಚಳಿ ಗಾಳಿ ಮುಂದುವರೆದಿದೆ.

srinagar-shivers-at-minus-6-dot-2-degrees-celsius-no-rain-or-snow-in-sight
ಚಳಿಗೆ ಬೆಂಕಿ ಕಾಯಿಸಿಕೊಳ್ಳುತ್ತಿರುವ ಜನರು (ಎಎನ್​ಐ)

By ETV Bharat Karnataka Team

Published : 12 hours ago

ಜಮ್ಮು:ಕಣಿವೆ ರಾಜ್ಯದಲ್ಲಿ ತೀವ್ರ ಚಳಿ ವಾತಾವರಣ ಮುಂದುವರೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಅಥವಾ ಹಿಮವಾಗುತ್ತಿಲ್ಲ. ಬದಲಾಗಿ ಒಣ ಹವೆ ಮುಂದುವರಿದಿದ್ದು, ಗುರುವಾರ ಈ ಋತುಮಾನದ ಅತ್ಯಂತ ಚಳಿ ರಾತ್ರಿಯಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಸದ್ಯ ರಾಜ್ಯದಲ್ಲಿ -6.2 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದ್ದು, ಭಾರೀ ಗಾಳಿಯಿಂದ ಕೂಡಿದ ಥರಗುಟ್ಟುವ ಚಳಿ ಮುಂದುವರೆದಿದೆ. ಕಾಶ್ಮೀರ ಕಣಿವೆ ಸೇರಿದಂತೆ ಲಡಾಖ್​ನಲ್ಲಿ ಕನಿಷ್ಠ ತಾಪಮಾನ ಮುಂದುವರೆದಿದ್ದು, ಇಲ್ಲಿ -24 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ.

ಜೊಜಿಲಾ ಹೊರತಾಗಿ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ -6.2, ಕ್ವಾಜಿಗುಂಡ್​ನಲ್ಲಿ -7.6, ಪಾಲ್ಗಾಮ್​ನಲ್ಲಿ -8.2, ಕುಪ್ವಾರದಲ್ಲಿ -6.5, ಕೊಕೆರ್ನಾಗ್​ನಲ್ಲಿ -5.8, ಸೋನ್ಮರ್ಗ್​​ನಲ್ಲಿ -9, ಬಂಡಿಪೂರದಲ್ಲಿ -7.3, ಬಾರಾಮುಲ್ಲಾದಲ್ಲಿ -5.9, ಬುಡ್ಗಾಮ್​ನಲ್ಲಿ -7.6, ಗಂಡೆರ್ಬಲ್​ನಲ್ಲಿ -6.4, ಪುಲ್ವಾಮಾದಲ್ಲಿ -9.5, ಅನಂತ್​ನಾಗ್​ನಲ್ಲಿ -9.9, ಖುಡ್ವಾನಿಯಲ್ಲಿ -8.5, ಕುಲ್ಗಾಮ್​ನಲ್ಲಿ -6.8, ಶೋಪಿಯಾನ್​ನಲ್ಲಿ -10 ಮತ್ತು ಲರ್ನೊದಲ್ಲಿ -9.1 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ.

ಚಳಿಗಾಲದ ರಾಜಧಾನಿ ಜಮ್ಮುವಿನಲ್ಲಿ -6.9, ಬನಿಹಾಲ್​ನಲ್ಲಿ -3.8, ಬಟೊಟೆ 1, ಕತ್ರಾದಲ್ಲಿ 6, ಭಡೆರ್ವಾದಲ್ಲಿ -1.6, ಕಿಸ್ತ್ವಾರ್​ನಲ್ಲಿ 1, ಪಡ್ಡೆರ್​ನಲ್ಲಿ 8.5, ಪೂಂಜ್​ನಲ್ಲಿ 1.2, ರಜೌರಿಯಲ್ಲಿ 0.3, ಸಾಂಬಾದಲ್ಲಿ 2.1, ಕಥುವಾದಲ್ಲಿ 6.6, ರೆಸಯ್​ನಲ್ಲಿ 2.4, ಉದಮ್ಪುರ್​ನಲ್ಲಿ 1.4 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ.

ಕೇಂದ್ರಾಡಳಿತ ಪ್ರದೇಶ ಲಡಾಖ್​ನಲ್ಲಿ -11.8 ಡಿಗ್ರಿ ಸೆಲ್ಸಿಯಸ್​ ದಾಖಲಾದರೆ, ಕಾರ್ಗಿಲ್​ನಲ್ಲಿ ಕನಿಷ್ಠ ತಾಪಮಾನ ಮೈನಸ್​ 13.8 ಡಿಗ್ರಿ ದಾಖಲಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ 5 ಡಿಗ್ರಿ ಉಷ್ಣಾಂಶ ದಾಖಲು; ತೀವ್ರ ಮಾಲಿನ್ಯದಿಂದ ಮತ್ತಷ್ಟು ಹೆಚ್ಚಿದ ಆರೋಗ್ಯ ಸಮಸ್ಯೆ

ABOUT THE AUTHOR

...view details