ಜಮ್ಮು:ಜಮ್ಮು ಮತ್ತು ಕಾಶ್ಮೀರದ ದೋಡಾ ಮತ್ತು ಉರಾರ್ ಬಾಗಿ ದೇಸಾ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಶಂಕಿತ ಉಗ್ರರ ಸ್ಕೆಚ್ಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಮೂವರು ಶಂಕಿತ ಉಗ್ರರ ರೇಖಾಚಿತ್ರವನ್ನು ಸಿದ್ಧಪಡಿಸಲಾಗಿದ್ದು, ಉಗ್ರರ ಚಲನವಲನದ ಬಗ್ಗೆ ಯಾರಾದರೂ ಮಾಹಿತಿ ನೀಡಿದರೆ, ಪ್ರತಿ ಶಂಕಿತರಿಗೆ 5 ಲಕ್ಷ ರೂಪಾಯಿಯಂತೆ ಬಹುಮಾನ ನೀಡಲಾಗುವುದು. ಮತ್ತು ಮಾಹಿತಿ ನೀಡಿದವರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೋಡಾ ಎಸ್ಎಸ್ಪಿ - 954190420, ಹೆಚ್ಕ್ಯೂಆರ್ಎಸ್ ದೋಡಾ ಎಸ್ಪಿ- 9797649362, 9541904202, ಒಪಿಎಸ್ ದೊಡಾ ಎಸ್ಪಿ - 954190420, ದಾರ್ ದೋಡಾ DySP -9541904205, ಹೆಚ್ಕ್ಯೂಆರ್ಎಸ್ ದೋಡಾ DySP -9541904205, ದೋಡಾ ಎಸ್ಎಚ್ಒ ಪಿಎಸ್-9419163516, 9541904211, ದೆಸ್ಸಾ ಎಸ್ಎಚ್ಒ ಪಿಎಸ್- 8082383906, ಐಸಿ ಪಿಪಿ ಬಾಗ್ಲಾ ಭಾರತ್ - 7051484314, 9541904249, ದೋಡಾ ಪಿಸಿಆರ್- 01996233530, 7298923100, 9469365174, 9103317361. ಭಯೋತ್ಪಾದಕರ ಉಪಸ್ಥಿತಿ/ ಚಲನವಲನದ ಬಗ್ಗೆ ತಿಳಿದಲ್ಲಿ ಈ ಮೇಲಿನ ಸಂಪರ್ಕ ಸಂಖ್ಯೆಗಳಿಗೆ ಮಾಹಿತಿ ಒದಗಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ವರ್ಷದ ಆರಂಭದಿಂದ ಜಮ್ಮು ಪ್ರಾಂತ್ಯದ ಆರು ಜಿಲ್ಲೆಗಳಲ್ಲಿ ನಡೆದ ಸುಮಾರು ಹನ್ನೆರಡು ಭಯೋತ್ಪಾದಕ ದಾಳಿಗಳಲ್ಲಿ 11 ಭದ್ರತಾ ಸಿಬ್ಬಂದಿ, ಗ್ರಾಮ ರಕ್ಷಣಾ ಸಿಬ್ಬಂದಿ ಮತ್ತು ಐವರು ಭಯೋತ್ಪಾದಕರು ಸೇರಿದಂತೆ ಒಟ್ಟು 27 ಜನರು ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಜಮ್ಮುವಿನಲ್ಲಿ ಭಯೋತ್ಪಾದನೆ ಉಲ್ಬಣ, 'ನಯಾ ಕಾಶ್ಮೀರ'ದಲ್ಲಿ ಅನಿಶ್ಚಿತತೆ: ಚುನಾವಣೆಗಳು ಹಿಂಸಾಚಾರ ತಡೆಯಬಹುದೇ? - Terror Surge in Jammu