ಕರ್ನಾಟಕ

karnataka

ETV Bharat / bharat

ಕರ್ನಾಟಕ ಮೂಲದ ವಲಸಿಗ ಕಾರ್ಮಿಕ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ: ತನಿಖೆ ಚುರುಕು

ಕರ್ನಾಟಕದ ಬಳ್ಳಾರಿ ಕುಟುಂಬವೊಂದು ಕಟ್ಟಡ ನಿರ್ಮಾಣದ ಕೆಲಸ ಅರಸಿ ಆಂಧ್ರಪ್ರದೇಶಕ್ಕೆ ವಲಸೆ ಬಂದಿತು. ಈ ವೇಳೆ, ಕಾರ್ಮಿಕ ಮಹಿಳೆಯರ ಮೇಲೆ ಗುಂಪೊಂದು ಅತ್ಯಾಚಾರ ಎಸಗಿ ಪರಾರಿಯಾಗಿದೆ.

By ETV Bharat Karnataka Team

Published : 4 hours ago

rape case
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​)

ಹೈದರಾಬಾದ್​: ಕರ್ನಾಟಕದ ವಲಸಿಗ ಕಾರ್ಮಿಕ ಮಹಿಳೆಯರಿಬ್ಬರ ಮೇಲೆ ಆರು ಜನ ಚಾಕು ತೋರಿಸಿ, ಬೆದರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಕರ್ನಾಟಕದ ಬಳ್ಳಾರಿ ಮೂಲದ ಕುಟುಂಬವೊಂದು ಕಟ್ಟಡ ನಿರ್ಮಾಣದ ಕೆಲಸ ಅರಸಿ ಇಲ್ಲಿಗೆ ವಲಸೆ ಬಂದಿತು. ಗಂಡ- ಹೆಂಡತಿ, ಮಗ ಸೊಸೆ ಕಳೆದ ಐದು ತಿಂಗಳ ಹಿಂದೆ ಇಲ್ಲಿನ ಪೇಪರ್​ ಮಿಲ್​ ನಿರ್ಮಾಣ ಕಾರ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಿಲ್​ ಪಕ್ಕದಲ್ಲಿಯೇ ತಾತ್ಕಾಲಿಕ ಶೆಡ್​ವೊಂದನ್ನು ಹಾಕಿಕೊಂಡು ಜೀವನ ಮಾಡುತ್ತಿದ್ದರು.

ಅದೇ ರೀತಿ ಶುಕ್ರವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ಎಂದಿನಂತೆ ಅತ್ತೆ- ಸೊಸೆ ಶೆಡ್​ನಲ್ಲಿ ಮಲಗಿದ್ದರೆ, ಅಪ್ಪ ಮತ್ತು ಮಗ ಶೆಡ್​ ಹೊರಗೆ ಮಲಗಿದ್ದಾರೆ. ಈ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಕೆಲವು ದುಷ್ಕರ್ಮಿಗಳು ಬಂದಿದ್ದಾರೆ. ಶೆಡ್​ ಮುಂದೆ ದಾಂಧಲೆ ಮಾಡುತ್ತಿದ್ದರಿಂದ ಎಚ್ಚರಗೊಂಡ ತಂದೆ ಮಗ ಯಾರು ನೀವು ಎಂದು ವಿಚಾರಿಸಿದಾಗ ಚಾಕು ತೋರಿಸಿ ಬೆದರಿಸಿದ್ದಾರೆ. ಬಳಿಕ ಶೆಡ್​ವೊಳಗೆ ಮಲಗಿದ್ದ ಅತ್ತೆ ಸೊಸೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ವಾಹನದಲ್ಲಿ ಹೊರಟು ಹೋಗಿದ್ದಾರೆ.

ಈ ಸಂಬಂಧ ಸಂತ್ರಸ್ತರು ಚಿಲಮತ್ತೂರ್​​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಂತ್ರಸ್ತ ಮಹಿಳೆಯರನ್ನು ಹಿಂದುಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೃತ್ಯಕ್ಕೆ ಮುನ್ನ ದರೋಡೆ ಮಾಡಿರುವ ಶಂಕೆ:ಘಟನೆ ಗಮನಿಸಿದರೆ ಆರೋಪಿಗಳು ಕೃತ್ಯಕ್ಕೆ ಮುನ್ನ ದರೋಡೆ ನಡೆಸಿದಂತೆ ಕಾಣುತ್ತದೆ. ಗ್ರಾಮದ ಹೊರಗೆ ಕುಟುಂಬ ಒಂದೇ ಪೇಪರ್​ ಮಿಲ್​ ಬಳಿ ಇರುವುದನ್ನು ತಂಡ ಅರಿತಿದೆ. ಮೊದಲಿಗೆ ಗ್ಯಾಂಗ್​​ ಮಿಲ್​ನ ಬಳಿ ಇದ್ದ ಸಿಸಿಟಿವಿ ನಾಶ ಪಡೆಸಿದೆ. ಬಳಿಕ ಸಂತ್ರಸ್ತ ಮಹಿಳೆಯರಿಗೆ ಬೆದರಿಕೆ ಹಾಕಿ ದೌರ್ಜನ್ಯ ಎಸಗಿದ್ದಾರೆ. ಸಿಸಿಟಿವಿ ಹಾನಿ ಮಾಡುವಾಗ ಆರೋಪಿಗಳ ಕೃತ್ಯ ರೆಕಾರ್ಡ್​ ಆಗಿದ್ದು, ಅದರ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಗಾಂಜಾ ಸೇವಿಸಿ ಅಥವಾ ಕಳ್ಳತನದಂತಹ ಕೃತ್ಯ ಎಸಗಿದ ಬಳಿಕ ಈ ಅಮಾನವೀಯ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಘಟನೆಗೆ ಸಿಎಂ ಚಂದ್ರಬಾಬು ನಾಯ್ಡು ಕಳವಳ:ಘಟನೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರವಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಎಸ್​ಪಿ ರತ್ನ ಅವರೊಂದಿಗೆ ಮಾತನಾಡಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಯರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುವಂತೆ ಗೃಹ ಸಚಿವ ಗೃಹ ಸಚಿವೆ ವಂಗಲಪುಡಿ ಅನಿತಾ ಸೂಚನೆ ನೀಡಿದ್ದಾರೆ. ಇನ್ನು ಸಚಿವೆ ಸವಿತಾ, ಶಾಸಕ ಬಾಲಕೃಷ್ಣ ಅವರು ಕೂಡ ಜಿಲ್ಲಾ ಎಸ್‌ಪಿ ಜತೆ ಮಾತನಾಡಿದ್ದು, ಘಟನೆ ಬಗ್ಗೆ ವರದಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಮುಂಬೈ - ನ್ಯೂಯಾರ್ಕ್ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ: ದೆಹಲಿ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ

ABOUT THE AUTHOR

...view details