ETV Bharat / technology

ಗುರುವಿನ ಚಂದ್ರನಲ್ಲಿ ಜೀವಿಗಳಿರುವ ಸಾಧ್ಯತೆ; ಪತ್ತೆಗೆ ಸಜ್ಜಾದ ನಾಸಾ - ಯಾವುದಾ ಉಪಗ್ರಹ?

ಗುರುವಿನ ಚಂದ್ರವಾಗಿರುವ ಯುರೋಪಾ ಭೂಮಿಯಾಚೆಗಿನ ಹೊಸ ಭರವಸೆಯ ಹುಡುಕಾಟದ ಸ್ಥಳವಾಗಿದೆ ಎಂದು ನಾಸಾ ತಿಳಿಸಿದೆ.

author img

By ETV Bharat Tech Team

Published : 2 hours ago

Updated : 1 hours ago

is-life-possible-on-a-jupiter-moon-nasa-goes-to-investigate
ಯುರೋಪಾ (ನಾಸಾ)

ಹೈದರಾಬಾದ್​: ಭೂಮಿ ಹೊರತಾಗಿ ಅನ್ಯಗ್ರಹದಲ್ಲಿ ಜೀವಿ ಇದೆಯಾ?. ಮಂಗಳ, ಗುರು ಗ್ರಹ ವಾಸ ಯೋಗ್ಯವಾ ಎಂಬ ಇತ್ಯಾದಿ ಕುರಿತಾಗಿ ನಾಸಾದ ಶೋಧ ನಿರಂತರವಾಗಿ ಸಾಗಿದೆ. ಕಳೆದ ಐದೂವರೆ ವರ್ಷಗಳಿಂದ ಸಾಗಿದ ಈ ಪ್ರಯಾಣದಲ್ಲಿ ಇದೀಗ ಹೊಸ ಭರವಸೆಯೊಂದು ಸಿಕ್ಕಿದೆ. ಅದು ಗುರು ಗ್ರಹದ ಚಂದ್ರ ಯೂರೋಪಾ.

ಯುರೋಪಾ ಕ್ಲಿಪ್ಪರ್ ಮಿಷನ್ ಚಂದ್ರನ ಬಗ್ಗೆ ಹೊಸ ವಿವರಗಳನ್ನು ಬಹಿರಂಗಪಡಿಸಿದೆ. ಇದರಲ್ಲಿ ಹಿಮಾವೃತ ಮೇಲ್ಮೈ ಅಡಿ ನೀರಿನ ಸಾಗರವನ್ನು ಹಿಡಿದಿಟ್ಟುಕೊಂಡಿರಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ.

ಗುರುವಿನ ಚಂದ್ರವಾಗಿರುವ ಯುರೋಪಾ ಭೂಮಿಯಾಚೆಗಿನ ಹೊಸ ಭರವಸೆಯ ಹುಡುಕಾಟದ ಸ್ಥಳವಾಗಿದೆ ಎಂದು ನಾಸಾದ ಬಾಹ್ಯಾಕಾಶ ತಜ್ಙ ಗಿನ ಡಿಬ್ರಸ್ಸಿಯೊ ತಿಳಿಸಿದ್ದಾರೆ. ಈ ಯೋಜನೆ ನೇರವಾಗಿ ಅಲ್ಲಿ ಜೀವಿಸುವ ಕುರಿತು ಸೂಚನೆ ನೀಡಿಲ್ಲ. ಆದರೆ. ಯುರೋಪಾದಲ್ಲಿ ಜೀವಿಸಲು ಇರಬೇಕಾದ ಅಂಶಗಳು ಇದೆಯಾ ಎಂಬ ಬಗ್ಗೆ ತಿಳಿಸಲಿದೆ.

ಒಂದು ವೇಳೆ ಇದು ಸಾಧ್ಯವಾದರೆ, ಮತ್ತೊಂದು ಯೋಜನೆ ಮೂಲಕ ನಮ್ಮ ಪ್ರಯಾಣವನ್ನು ನಡೆಸಿ, ಅಲ್ಲಿನ ಅಂಶಗಳನ್ನು ಪತ್ತೆ ಮಾಡಲಾಗುವುದು. ಇದು ಜಗತ್ತನ್ನು ಅವಿಷ್ಕಾರ ಮಾಡುವುದಕ್ಕೆ ಮಾತ್ರ ಅವಕಾಶ ನೀಡುವುದಿಲ್ಲ. ಬದಲಾಗಿ ಮತ್ತೊಂದು ವಾಸಯೋಗ್ಯ ಸ್ಥಳವಿದೆಯಾ ಎಂದು ಕುರಿತು ತಿಳಿಯಲು ಸಹಾಯ ಮಾಡಲಿದೆ. ಅಂತರ್​ ಗ್ರಹದ ಅನ್ವೇಷಣೆಯಲ್ಲಿ ನಾಸಾದಿಂದ ವಿನ್ಯಾಸಿತವಾದ ಅತ್ಯಂತ ದೊಡ್ಡ ಸಂಶೋಧನೆ ಇದಾಗಿದೆ.

ಹಿಂದೆ ಇತ್ತಾ ಇಲ್ಲಿ ಜೀವಿಗಳ ವಾಸ?: 1610ರಿಂದೀಚೆಗೆ ಯುರೋಪಾ ಅಸ್ತಿತ್ವ ಇದೆ ಎಂಬುದು ನಮಗೆ ತಿಳಿದಿದೆ. ಇದರ ಮೊದಲ ಹತ್ತಿರದ ಚಿತ್ರವನ್ನು ವಯೆಂಜರ್​ 1979ರಲ್ಲಿ ತೆಗೆದಿತ್ತು. ಇದರ ಮೇಲ್ಮೈ ಮೇಲೆ ನಿಗೂಢವಾದ ಕೆಂಪು ಬಣ್ಣದ ಪಟ್ಟಿ ಇದೆ. ಇದರ ನಂತರದ ಅವಿಷ್ಕಾರವನ್ನು ನಾಸಾ 1990ರಲ್ಲಿ ಗೆಲಿಲಿಯೋ ಮೂಲಕ ಪತ್ತೆ ಹಚ್ಚಿತ್ತು. ಈ ವೇಳೆ ಚಂದ್ರನು ಸಾಗರಕ್ಕೆ ನೆಲೆಯಾಗಿರುವ ಸಾಧ್ಯತೆಯನ್ನು ಕಂಡುಹಿಡಿದಿದೆ.

ಈ ಬಾರಿ ಯುರೋಪಾ ಕ್ಲಿಪರ್​​ ಪತ್ತೆಹಚ್ಚುವಿಕೆಯ ನಿರ್ದಿಷ್ಟ ಸಾಧನವನ್ನು ಹೊಂದಿದೆ. ಅದರಲ್ಲಿ ಕ್ಯಾಮೆರಾ, ಸೆಪ್ಟೊಗ್ರಾಫ್​, ರಾಡಾರ್​ ಮತ್ತು ಮಗ್ನೆಟೊಮೀಟರ್​ ಇದೆ. ಈ ಯೋಜನೆಯಲ್ಲಿ ಯುರೋಪಾದ ಮಂಜಿನ ಮೇಲ್ಮೈ ಸಂಯೋಜನೆಯ ವಿನ್ಯಾಸವನ್ನು ನೋಡಲಾಗುವುದು. ಇದರ ಆಳವೂ ಸಮುದ್ರದಾಳದ ಲವಣಾಂಶವನ್ನು ಪತ್ತೆ ಮಾಡುವುದಾಗಿದೆ.

ಇದರ ಮುಖ್ಯ ಉದ್ದೇಶವೂ ಮೂರು ಅಂಶವನ್ನು ಹೊಂದಿದೆ. ಸದ್ಯ ಜೀವನಕ್ಕೆ ಬೇಕಾದ ನೀರು, ಶಕ್ತಿ ಮತ್ತು ಕೆಲವು ರಾಸಾಯನಿಕ ಸಂಯೋಜನೆಗಳಿವೆಯೇ ಎಂಬುದನ್ನು ಪತ್ತೆ ಹಚ್ಚುವುದಾಗಿದೆ. ಯುರೋಪಾದಲ್ಲಿ ಈ ರೀತಿ ಪರಿಸ್ಥಿತಿ ಇದ್ದರೆ, ಸಾಗರದಲ್ಲಿ ಪ್ರಾಚೀನ ಬ್ಯಾಕ್ಟೀರಿಯಾದ ರೂಪದಲ್ಲಿ ಸಮುದ್ರದಲ್ಲಿ ಜೀವಿಗಳಿವೆ ಎಂಬುದನ್ನು ಗುರುತಿಸಬಹುದಾಗಿದೆ. ಆದರೆ, ಈ ಬ್ಯಾಕ್ಟೀರಿಯಾಗಳು ಯುರೋಪಾ ಕ್ಲಿಪರ್​ನ ಆಳದಲ್ಲಿ ಇರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

49 ಫ್ಲೈಬೈಸ್​: ಸಂಶೋಧನೆಯಲ್ಲಿ ಅಂದರೆ ಗುರುವಿನ ಪ್ರಯಾಣದಲ್ಲಿ 2.9 ಬಿಲಿಯನ್​ ಕಿ.ಮೀ ಸಾಗಲಿದ್ದು, ಈ ಪ್ರಯಾಣವೂ 2030ಕ್ಕೆ ಆಗಮಿಸುವ ಸಾಧ್ಯತೆ ಇದೆ. ಪ್ರಮುಖ ಯೋಜನೆಯು ಮತ್ತೆ ನಾಲ್ಕು ವರ್ಷಕ್ಕೆ ಮುಗಿಯಲಿದೆ. ಈ ಸಂಶೋಧನೆ 49 ಕ್ಲೋಸ್​ ಫ್ಲೈಬೈಸ್​ ಮಾಡಲಿದ್ದು, ಮೇಲ್ಮೈ ಮೇಲೆ 25 ಕಿ.ಮೀ ಬರಲಿದೆ.

ಇದು ತೀವ್ರವಾದ ವಿಕಿರಣಕ್ಕೆ ಒಳಗಾಗುತ್ತದೆ. ಪ್ರತಿ ಪಾಸ್‌ಗಳು ಹಲವಾರು ಮಿಲಿಯನ್ ಕ್ಷ-ಕಿರಣಗಳಿಗೆ ಸಮನಾಗಿರುತ್ತದೆ. ಸುಮಾರು 4,000 ಜನರು ಸುಮಾರು ಒಂದು ದಶಕದಿಂದ 5.2 ಬಿಲಿಯನ್ ಡಾಲರ್​​ ಮಿಷನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ನಮ್ಮ ಸೌರವ್ಯೂಹವು ಎರಡು ವಾಸಯೋಗ್ಯ ಪ್ರಪಂಚಗಳಿಗೆ (ಯುರೋಪಾ ಮತ್ತು ಭೂಮಿ) ನೆಲೆಯಾಗಿ ಹೊರಹೊಮ್ಮಿದರೆ, ಈ ಗ್ಯಾಲಕ್ಸಿಯಲ್ಲಿರುವ ಶತಕೋಟಿ ಮತ್ತು ಶತಕೋಟಿ ಸೌರವ್ಯೂಹಗಳಿಗೆ ವಿಸ್ತರಣೆಗೆ ಇದು ಫಲಪ್ರದ ಫಲಿತಾಂಶವನ್ನು ನೀಡುತ್ತದೆ ಎಂದು ಯುರೋಪಾ ಕ್ಲಿಪರ್​ ಯೋಜನೆ ವಿಜ್ಞಾನಿ ನೈಬುರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 2035ಕ್ಕೆ ಮಂಗಳನ ಅಂಗಳಕ್ಕೆ ಮಾನವರನ್ನ ಕಳುಹಿಸಲು ನಾಸಾ ಸರ್ವ ಸನ್ನದ್ಧ

Last Updated : 1 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.