ETV Bharat / entertainment

ಅಪ್ಪ ಇದ್ದಾಗ 'ಅನುಭವ 2' ಮಾಡಬೇಕೆಂಬ ಯೋಚನೆ ಬಂದಿತ್ತು ಆದ್ರೆ.., ಅಭಿಮನ್ಯು ಸನ್ ಆಫ್ ಕಾಶೀನಾಥ್ - ABHIMANYU SON OF KASHINATH

ಕಾಶೀನಾಥ್ ಸುಪುತ್ರ ಅಭಿಮನ್ಯು ನಟನೆಯ ಹೊಸ ಚಿತ್ರ 'ಅಭಿಮನ್ಯು ಸನ್ ಆಫ್ ಕಾಶೀನಾಥ್'ನ ಮುಹೂರ್ತ ಸಮಾರಂಭ ನೆರವೇರಿದೆ. ಮುಂದಿನ ತಿಂಗಳು ಶೂಟಿಂಗ್​ ಶುರುವಾಗಲಿದೆ.

'Abhimanyu Son of Kashinath' Muhurta
ಅಭಿಮನ್ಯು ಸನ್ ಆಫ್ ಕಾಶೀನಾಥ್ ಚಿತ್ರತಂಡ (Photo source: ETV Bharat)
author img

By ETV Bharat Entertainment Team

Published : Oct 14, 2024, 2:28 PM IST

ಕನ್ನಡ ಚಿತ್ರರಂಗದ ದಂತಕಥೆ ಕಾಶೀನಾಥ್ ಸುಪುತ್ರ ಅಭಿಮನ್ಯು ಕಾಶೀನಾಥ್ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಮನ್ಯು ಅವರೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ‌ ಮುಹೂರ್ತ ಸಮಾರಂಭ ಸಹ ನೆರವೇರಿತು.

ಬೆಂಗಳೂರಿನ ಸಹಕಾರ ನಗರದ ಛೇರ್ಮನ್ ಕ್ಲಬ್​ನಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ನಟ ಕೋಮಲ್ ಕುಮಾರ್ ಆಗಮಿಸಿದ್ದರು. ಅಭಿಮನ್ಯು ನಟನೆಯ ಹೊಸ ಚಿತ್ರಕ್ಕೆ ಕೋಮಲ್ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.

'Abhimanyu Son of Kashinath' Poster
ಅಭಿಮನ್ಯು ಸನ್ ಆಫ್ ಕಾಶೀನಾಥ್ ಪೋಸ್ಟರ್ (Photo source: Film Poster)

ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ ಕೋಮಲ್ ಕುಮಾರ್, ನಾನು ಸಿನಿಮಾ ಇಂಡಸ್ಟ್ರಿಗೆ ಬಂದು 32 ವರ್ಷಗಳಾಯ್ತು. ಸಿನಿಮಾವೊಂದಕ್ಕೆ ಕ್ಲ್ಯಾಪ್ ಮಾಡಿದ್ದು ಇದೇ ಮೊದಲು. ಸಿನಿಮಾ ಚೆನ್ನಾಗಿ ಆಗಬೇಕು. ಯಾರು ಕ್ಲ್ಯಾಪ್ ಹೊಡೆದಿದ್ದು ಅಂತಾ ಆಗಬಾರದು. ಅಭಿಮನ್ಯು ಅವರು ಯಾರೂ ನನಗೆ ಸಪೋರ್ಟ್ ಮಾಡುತ್ತಿಲ್ಲ ಸರ್, ನಮ್ಮ ತಂದೆ ಇದ್ದಿದ್ದರೆ ನನಗೆ ಬೆಂಬಲ ಕೊಡುತ್ತಿದ್ದರು ಎಂದರು. ನನಗದು ಬಹಳ ಕನೆಕ್ಟ್ ಆಯಿತು. ಚಿಂತಿಸಬೇಡ, ದೇವರಿದ್ದಾನೆ. ಮೆಟ್ಟಿಲನ್ನು ನೋಡುತ್ತಾ ನಿಲ್ಲಬಾರದು. ಹತ್ತಲು ಪ್ರಯತ್ನ ಪಡಬೇಕು. ನಿಮಗೆ ಒಳ್ಳೆದಾಗುತ್ತದೆ. ಪ್ರಯತ್ನ ಪಡುತ್ತಾ ಇರಿ. ಯಾರಿಗೂ ದಿಢೀರ್ ಯಶಸ್ಸು ಸಿಗಲ್ಲ. ನನಗೆ ಯಾರೂ ಇಲ್ಲ ಎಂಬುದನ್ನು ತಲೆಯಿಂದ ತೆಗೆದು ದೇವರು ಇದ್ದಾನೆ ಎಂಬುದನ್ನು ಇಟ್ಟುಕೊಳ್ಳಿ. ನಿಮಗೋಸ್ಕರ‌ ನಾನು ಬಂದೆ. ಚಿತ್ರದ ನಿರ್ದೇಶಕರಿಗೆ, ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

'Abhimanyu Son of Kashinath' Muhurta
ಅಭಿಮನ್ಯು ಸನ್ ಆಫ್ ಕಾಶೀನಾಥ್ ಮುಹೂರ್ತ ಸಮಾರಂಭ (Photo source: ETV Bharat)

ನಟ ಅಭಿಮನ್ಯು ಮಾತನಾಡಿ, ನಿರ್ದೇಶಕ ರಾಜ್‌ಮುರಳಿ ಅವರು ಅಪ್ಪನ ಜಾನರ್ ಇಟ್ಟುಕೊಂಡು ಈಗಿನ ಕಾಲದ ಹುಡುಗರಿಗೆ ತಕ್ಕ ಕಥೆ ಮಾಡಿದರೆ ಹೇಗಿರುತ್ತದೆ? ನಿಮ್ಮನ್ನು ತಲೆಯಲ್ಲಿಟ್ಟುಕೊಂಡು ಪ್ಲ್ಯಾನ್​​ ಮಾಡಿಕೊಂಡಿದ್ದೇನೆ ಸರ್ ಅಂದರು. ಅಪ್ಪ ಇದ್ದಾಗ ನನಗೆ ಬರುತ್ತಿದ್ದ ಆಫರ್ ಇಂತಹದ್ದೇ. ಅಪ್ಪ ಡೈರೆಕ್ಷನ್ ಮಾಡಬೇಕು. ನಾನು ಆ್ಯಕ್ಟಿಂಗ್ ಮಾಡಬೇಕು. ಅನಂತನ ಅವಾಂತರ ಪಾರ್ಟ್ 2 ಮಾಡಬೇಕು. ಅನುಭವ ಪಾರ್ಟ್‌ 2 ಮಾಡಬೇಕು ಎಂದು ತಲೆಗೆ ಬರುತ್ತಿತ್ತು. ಆದ್ರೆ ಅಪ್ಪನಿಗೆ ಆ ಕ್ಯಾರೆಕ್ಟರ್ ನನಗೆ ಸೂಟ್ ಆಗಲ್ಲ ಅಂತಾ ಅನಿಸುತ್ತಿತ್ತು. ನನಗೂ ಅದನ್ನು ಮಾಡುತ್ತೇನೆಂಬ ಕಾನ್ಫಿಡೆನ್ಸ್ ಇರಲಿಲ್ಲ. ಇನ್ನು ಸನ್ ಆಫ್ ಕಾಶೀನಾಥ್ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡೋಣಾ ಅಂತಾ ಹೋದಾಗ ಯಾರೋ ಮಾಡಿಬಿಟ್ಟಿದ್ದರು. ಎಲ್ಲರೂ ಕಾಶೀನಾಥ್ ಮಗನಿಗೆ ಸನ್ ಆಫ್‌ ಕಾಶೀನಾಥ್ ಸಿಗಲಿಲ್ಲ ಅಂದ್ರು. ನಿರ್ದೇಶಕರು ಟೈಟಲ್ ಇಲ್ಲ ಸರ್ ಯಾರೋ ರಿಜಿಸ್ಟರ್ ಮಾಡಿಸಿದ್ದಾರೆ ಅಂದರು. ಆಮೇಲೆ ಅವರೇ ಯೋಚನೆ ಮಾಡಿ 'ಅಭಿಮನ್ಯು ಸನ್ ಆಫ್ ಕಾಶೀನಾಥ್' ಎಂಬ ಶೀರ್ಷಿಕೆ ನೀಡಿದರು.

'Abhimanyu Son of Kashinath' Muhurta
ಅಭಿಮನ್ಯು ಸನ್ ಆಫ್ ಕಾಶೀನಾಥ್ ಚಿತ್ರತಂಡ (Photo source: ETV Bharat)

ಅಭಿಮನ್ಯು ನಟನೆಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಫಸ್ಟ್ ಲುಕ್ ಪೋಸ್ಟರ್ ಬಹಳ ಇಂಪ್ರೆಸಿವ್ ಆಗಿದೆ. ''ಅಭಿಮನ್ಯು S/o ಕಾಶೀನಾಥ್'' ಎಂಬ ಶೀರ್ಷಿಕೆ ಜೊತೆಗೆ ಇದು ಹೊಸ ಅನುಭವ ಎಂಬ ಅಡಿಬರಹ ಆಕರ್ಷಕವಾಗಿದೆ. ಬುಕ್ ಹಿಡಿದು ಅರ್ಧ ಮುಖ ತೋರಿಸುತ್ತಿರುವ ಅಭಿಮನ್ಯು, ಸೂಟು ಬೂಟು ತೊಟ್ಟು ಸ್ಟೈಲಿಶ್ ಗೆಟಪ್​ನಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: ಸುದೀಪ್​ ಗುಡ್​ ಬೈ ಬೆನ್ನಲ್ಲೇ ಮನೆಯಿಂದ ಹೊರನಡೆದ ಬಿಗ್​ ಬಾಸ್​​! ಸ್ಪರ್ಧಿಗಳ ಉಡಾಫೆತನದ ವಿರುದ್ಧ ರೊಚ್ಚಿಗೆದ್ದ Bigg Boss

8MM ಸಿನಿಮಾದಲ್ಲಿ ಕೋ ಡೈರೆಕ್ಟರ್ ಆಗಿ, ಒಂದಷ್ಟು ಚಿತ್ರಗಳಲ್ಲಿ ಅಸಿಸ್ಟೆಂಟ್, ಅಸೋಸಿಯೇಟ್​ ಡೈರೆಕ್ಟರ್ ಆಗಿ‌ ದುಡಿದಿರುವ ರಾಜ್ ಮುರಳಿ ಅವರೀಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರದ ಮೂಲಕ ರಾಜ್ ಕಾಮಿಡಿ ಡ್ರಾಮಾ ಕಥೆ ಹೇಳೋದಿಕ್ಕೆ ಹೊರಟಿದ್ದಾರೆ. ಸಿನಿಮಾ ಮೇಲಿರುವ ಪ್ರೀತಿಯಿಂದ 'ಐಸಿರಿ ಪ್ರೊಡಕ್ಷನ್' ಅಡಿ ಮಾರಪ್ಪ ಶ್ರೀನಿವಾಸ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಲಯಾಳಂ ನಟ ಬಾಲಾ ಬಂಧನ : ದೂರು ನೀಡಿದ್ದ ಮಾಜಿ ಪತ್ನಿ, ಮಗಳು

ಅಭಿಮನ್ಯು ಜೋಡಿಯಾಗಿ ಸ್ಪಂದನ ಸೋಮಣ್ಣ, ವಿಜಯಶ್ರೀ ಕಲ್ಬುರ್ಗಿ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ ನಿಭಾಯಿಸಲಿದ್ದರೆ, ಅಭಿನಂದನ್ ಕಶ್ಯಪ್ ಅವರ ಸಂಗೀತ ಮತ್ತು ಚಂದನ್ ಪಿ ಸಂಕಲನ ಚಿತ್ರಕ್ಕಿದೆ. ನವೆಂಬರ್ ತಿಂಗಳಿನಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ. ಚಿಕ್ಕಮಗಳೂರು, ಮೈಸೂರು, ಹೈದರಾಬಾದ್ ಭಾಗಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.