ಕರ್ನಾಟಕ

karnataka

ETV Bharat / bharat

ಹುಲಿ ಕೊಂದು ಮಾಂಸ ತಿಂದ ಬೇಟೆಗಾರರು; ಇಬ್ಬರ ಬಂಧನ - HUNTERS KILLED TIGER

ನುವಾಪಾಡಾದ ಅರಣ್ಯದಲ್ಲಿ ಹುಲಿಯನ್ನ ಬೇಟೆಯಾಡಿ ಕೊಂದು ಮಾಂಸ ತಿಂದ ನಾಲ್ವರು ಬೇಟೆಗಾರರಲ್ಲಿ ಇಬ್ಬರನ್ನ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

Nuwapada
ನುವಾಪಾಡಾ (ETV Bharat)

By ETV Bharat Karnataka Team

Published : Nov 19, 2024, 10:40 PM IST

ನುವಾಪಾಡಾ (ಒಡಿಶಾ) : ಜಿಲ್ಲೆಯಲ್ಲಿ 4 ಬೇಟೆಗಾರರು ಹುಲಿಯನ್ನು ಬೇಟೆಯಾಡಿ ಅದರ ಮಾಂಸವನ್ನು ತಿಂದಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ ನುವಾಪಾಡಾ ಕೋಮನ ಅರಣ್ಯ ಇಲಾಖೆ ಸಿಬ್ಬಂದಿ 2 ಬೇಟೆಗಾರರನ್ನು ಬಂಧಿಸಿದ್ದಾರೆ.

ಪುಷ್ಟಮ್ ಚಿಂದಾ ಮತ್ತು ಟಿಕು ಚಿಂದಾ ಬಂಧಿತರು. ಇನ್ನಿಬ್ಬರು ಬೇಟೆಗಾರರಾದ ದೇವೇಂದ್ರ ಚಿಂದಾ ಮತ್ತು ಜಗಬಂಧು ಚಿಂದಾ ಎಂಬುವವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈಗಾಗಲೇ ಹುಲಿ ಚರ್ಮ, ಮಾಂಸ, ಉಗುರು, ಹಲ್ಲುಗಳನ್ನು ವಶಪಡಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.

ಬೇಟೆಗಾರರ ಪ್ರಕಾರ, ಕಾಡು ಹಂದಿ ಬೇಟೆಯಾಡಲು ಕಾಡಿನಲ್ಲಿ ವಿದ್ಯುತ್ ತಂತಿಯನ್ನ ಹರಡಿದ್ದಾರೆ. ಆದರೆ ಕಾಡುಹಂದಿಯ ಬದಲು ಹುಲಿ ಬಿದ್ದಿದೆ. ಅದರ ನಂತರ, ಹುಲಿಯ ಕಾಲುಗಳು, ಬಾಲ, ಉಗುರುಗಳು ಮತ್ತು ಹಲ್ಲುಗಳನ್ನು ಪ್ರತ್ಯೇಕವಾಗಿ ಕತ್ತರಿಸಿದ್ದಾರೆ. ನಂತರ 4 ಮಂದಿ ಹುಲಿ ಮಾಂಸವನ್ನು ಬೇಯಿಸಿ ತಿಂದಿದ್ದಾರೆ.

ಅಕ್ರಮ ವನ್ಯಜೀವಿ ಬೇಟೆ ಪ್ರಕರಣದಲ್ಲಿ ಕೋಮ್ನಾ ಅರಣ್ಯ ಇಲಾಖೆ ಸಿಬ್ಬಂದಿ ಇಬ್ಬರು ಬೇಟೆಗಾರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರು ಭಾಗಿಯಾಗಿರುವುದು ಪತ್ತೆಯಾಗಿದೆ. ಘಟನೆ ಕುರಿತು ಕೋಮ್ನಾ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ :13 ಜನರನ್ನು ಬಲಿ ಪಡೆದಿದ್ದ ಹುಲಿ ಸೆರೆ... ಯುದ್ಧದ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಅರಣ್ಯಾಧಿಕಾರಿಗಳು!

ABOUT THE AUTHOR

...view details