ಗೊಂಡಾ (ಉತ್ತರ ಪ್ರದೇಶ):ಪದ್ಮಶ್ರೀ ಪುರಸ್ಕೃತ ಕ್ರೀಡಾಪಟು ಶೀತಲ್ ಮಹಾಜನ್ ಅವರು 5 ಸಾವಿರ ಅಡಿ ಎತ್ತರದಿಂದ ಜಿಗಿದು ಎಲ್ಲರ ಗಮನ ಸೆಳೆದಿದ್ದಾರೆ. ಬಿಜೆಪಿ ಸಂಸದರಾದ ಕೀರ್ತಿ ವರ್ಧನ್ ಸಿಂಗ್ ಕೂಡ ಪ್ಯಾರಾಗ್ಲೈಡಿಂಗ್ ಮಾಡಿದ್ದಾರೆ. ಇಬ್ಬರೂ ಮಾಂಕಾಪುರದಿಂದ ಅಯೋಧ್ಯೆಯ 27 ಕಿಲೋಮೀಟರ್ ಪ್ರಯಾಣವನ್ನು ಕೇವಲ 22 ನಿಮಿಷಗಳಲ್ಲಿ ಪೂರ್ಣಗೊಳಿಸಿದರು.
ಶೀತಲ್ ಮಹಾಜನ್ 5 ಸಾವಿರ ಅಡಿ ಎತ್ತರದಿಂದ ಜಿಗಿದ ಸಂದರ್ಭ, ಪ್ಯಾರಾಚೂಟ್ ಇಲ್ಲದೇ 1,000 ಅಡಿಗಳ ಅಂತರದಲ್ಲಿ ಗಾಳಿಯಲ್ಲಿ ತೇಲುತ್ತಿದ್ದರು. ಇದಾದ ಬಳಿಕ 4 ಸಾವಿರ ಅಡಿ ಎತ್ತರದ ವೇಳೆ ಪ್ಯಾರಾಚೂಟ್ ತೆರೆದರು. ಕೀರ್ತಿ ಮತ್ತು ಶೀತಲ್ ಅವರ ಪ್ಯಾರಾಗ್ಲೈಡ್ ಮತ್ತು ಪ್ಯಾರಾಚೂಟ್ ಸರಯೂ ನದಿಯ ಬಯಲಿನಲ್ಲಿ ಇಳಿದ ನಂತರ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಬಿಜೆಪಿ ಸಂಸದರಾಗಿರುವ ಕೀರ್ತಿ ವರ್ಧನ್ ಸಿಂಗ್ ಮಂಕಾಪುರದಿಂದ ಅಯೋಧ್ಯೆಗೆ ಪ್ಯಾರಾಗ್ಲೈಡಿಂಗ್ ಮಾಡಿದರು. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಶೀತಲ್ ಮಹಾಜನ್ ಕೂಡ ಬಹಳ ದಿನಗಳ ತಯಾರಿ ಬಳಿಕ ಶುಕ್ರವಾರದಂದು ಪ್ಯಾರಾಚೂಟಿಂಗ್ ಸಾಹಸ ಮಾಡಿದರು. ಇಬ್ಬರೂ ತಮ್ಮ ಪ್ರಚಾರಕ್ಕಾಗಿ ಗೊಂಡಾ ಮತ್ತು ಅಯೋಧ್ಯೆ ಜಿಲ್ಲಾಡಳಿತದಿಂದ ಅನುಮತಿ ಪಡೆದಿದ್ದರು. ಇದನ್ನು ಹೊರತುಪಡಿಸಿ, ಅಯೋಧ್ಯೆ ವಿಮಾನ ನಿಲ್ದಾಣ ಪ್ರಾಧಿಕಾರವು ಇತರ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಇವರಿಗೆ ಅನುಮತಿ ನೀಡಿತ್ತು.