ಕರ್ನಾಟಕ

karnataka

ETV Bharat / bharat

Rain Alert: ವಾಯುಭಾರ ಕುಸಿತ ಇಂದಿನಿಂದ ಮತ್ತೆ 4 ದಿನ ಭಾರಿ ಮಳೆ ಮುನ್ಸೂಚನೆ! - HEAVY RAINFALL ALERT IN AP

ಬಂಗಾಳ ಕೊಲ್ಲಿಯಲ್ಲಿ ಮುಂದುವರಿದ ತೀವ್ರ ವಾಯುಭಾರ ಕುಸಿತ - ಈ ತಿಂಗಳ 26 ರವರೆಗೆ ಆಂಧ್ರದ ಹಲವೆಡೆ ಸಾಧಾರಣ ಮಳೆ - ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

severe-low-pressure-area-continues-in-the-bay-of-bengal
ಮಳೆ ಎಚ್ಚರಿಕೆ: ವಾಯುಭಾರ ಕುಸಿತ ಇಂದಿನಿಂದ ಮತ್ತೆ 4 ದಿನ ಭಾರಿ ಮಳೆ! (ETV Bharat)

By ETV Bharat Karnataka Team

Published : Dec 23, 2024, 8:20 AM IST

ವಿಜಯವಾಡ, ಆಂಧ್ರಪ್ರದೇಶ:ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಕಂಡು ಬಂದಿದೆ. ಇದು ಪಶ್ಚಿಮ-ನೈಋತ್ಯ ದಿಕ್ಕಿನಲ್ಲಿ ಚಲಿಸಿ ಉತ್ತರ ತಮಿಳುನಾಡು ಮತ್ತು ಆಂಧ್ರಪ್ರದೇಶದ ದಕ್ಷಿಣ ಕರಾವಳಿಯ ಕಡೆಗೆ ಡಿ.24ರಂದು (ಮಂಗಳವಾರ) ಕ್ಕೆ ಚಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದರ ಪರಿಣಾಮವಾಗಿ ಆಂಧ್ರಪ್ರದೇಶದ ಹಲವೆಡೆ ಇಂದಿನಿಂದ ನ.26ರವರೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ನೆಲ್ಲೂರು, ತಿರುಪತಿ, ಬಾಪಟ್ಲಾ, ಪ್ರಕಾಶಂ ಮತ್ತಿತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಡಿಸೆಂಬರ್​ 25ರವರೆಗೆ ಗಂಟೆಗೆ ಗರಿಷ್ಠ 55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿ ಹಾಗೂ ಆಂಧ್ರಪ್ರದೇಶದ ಬಂದರುಗಳಿಗೆ ಹೈ ಅಲರ್ಟ್​ ಎಚ್ಚರಿಕೆ ನೀಡಲಾಗಿದೆ ಎಂದು ವಿಶಾಖ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್​ 26ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಭಾನುವಾರ ಸಮುದ್ರದಲ್ಲಿ ತೀವ್ರ ಕಡಿಮೆ ಒತ್ತಡವು ಸಂಪೂರ್ಣವಾಗಿ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ದಿಕ್ಕಿನ ಮಾರುತಗಳ ಪ್ರಭಾವ:ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಅನುಕೂಲಕರ ವಾತಾವರಣ ಇಲ್ಲದೇ ಇರುವುದರಿಂದ ಇಂತಹ ಪರಿಸ್ಥಿತಿ ಉಂಟಾಗಿದ್ದು, ಈ ವಿದ್ಯಮಾನಗಳು ಅಪರೂಪ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ:ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಮುನ್ಸೂಚನೆ : ಕರಾವಳಿ ಪ್ರದೇಶಗಳಿಗೆ ಅಪಾಯದ ಎಚ್ಚರಿಕೆ

ABOUT THE AUTHOR

...view details