ಕರ್ನಾಟಕ

karnataka

ETV Bharat / bharat

ವಿದ್ಯಾರ್ಥಿಗಳಿಗೆ ಖುಷಿ ಸಮಾಚಾರ: ಸೆಪ್ಟೆಂಬರ್​ನಲ್ಲಿ ಸಾಲು ಸಾಲು ರಜೆ, ಮಕ್ಕಳಿಗೆ ರಜೆಯ ಮಜಾ - SEPTEMBER SCHOOL HOLIDAY

ಶಾಲಾ ವಿದ್ಯಾರ್ಥಿಗಳಿಗೆ ಇದು ಒಂದು ದೊಡ್ಡ ಸಂತಸದ ಸುದ್ದಿ! ಏಕೆಂದರೆ.. ಸೆಪ್ಟೆಂಬರ್​ ತಿಂಗಳಿನಲ್ಲಿ ಹಲವು ರಜೆಗಳಿವೆ. ಸೆಪ್ಟೆಂಬರ್ ಯಾವ ಯಾವ ದಿನ ಶಾಲೆಗಳು ಇರೋದಿಲ್ಲ ಎಂಬುದನ್ನು ಈ ಸುದ್ದಿಯಲ್ಲಿ ನೋಡೋಣ

School Holidays in September
ವಿದ್ಯಾರ್ಥಿಗಳಿಗೆ ಖುಷಿ ಸಮಾಚಾರ: ಸೆಪ್ಟೆಂಬರ್​ನಲ್ಲಿ ಶಾಲೆಗಳಿಗೆ ಸತತ 3 ದಿನ ರಜೆ (ETV Bharat)

By ETV Bharat Karnataka Team

Published : Aug 31, 2024, 8:53 AM IST

ಸಾಮಾನ್ಯವಾಗಿ, ಶಾಲಾ ಮಕ್ಕಳಿಗೆ ಪ್ರತಿ ಭಾನುವಾರ ರಜೆ ಇರುತ್ತದೆ. ಮತ್ತು ಕೆಲವರಿಗೆ ಎರಡನೇ ಶನಿವಾರದಂದು ರಜೆ ಇರುತ್ತದೆ. ಇದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಭಾರೀ ಮಳೆ ಮತ್ತು ಬಂದ್‌ನಂತಹ ಕೆಲವು ಕಾರಣಗಳಿಂದಲೂ ಶಾಲೆಗಳಿಗೆ ರಜೆ ನೀಡಲಾಗುತ್ತದೆ. ಅಲ್ಲದೇ, ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗುತ್ತದೆ. ಇದೇ ವೇಳೆ, ಈ ಸೆಪ್ಟೆಂಬರ್ ತಿಂಗಳು ಮಕ್ಕಳ ಪಾಲಿಗೆ ಸಂತಸದ ಸುದ್ದಿಯೊಂದನ್ನು ತರಲಿದೆ ಎನ್ನಬಹುದು. ಏಕೆಂದರೆ.. ಈ ತಿಂಗಳು ವಿವಿಧ ಹಬ್ಬಗಳಿವೆ. ಈ ಹಬ್ಬಗಳ ನಿಮಿತ್ತ ಶಾಲೆಗಳಿಗೆ ಸತತ ರಜೆ ಇದೆ.

ಎಲ್ಲರ ಮೆಚ್ಚಿನ ವಿನಾಯಕ ಚೌತಿ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಬರುತ್ತದೆ. ಈ ಹಬ್ಬಕ್ಕಾಗಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕಾತರದಿಂದ ಕಾಯುತ್ತಾರೆ. ವಿನಾಯಕ ಚತುರ್ಥಿ ಮತ್ತು ನಿಮಜ್ಜನವನ್ನು ವಯಸ್ಸಿನ ಭೇದವಿಲ್ಲದೆ ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಅಂದಹಾಗೆ ಈ ವಿನಾಯಕ ಚೌತಿಯನ್ನು ಸೆಪ್ಟೆಂಬರ್​ ಏಳರಂದು ಆಚರಣೆ ಮಾಡಲಾಗುತ್ತಿದೆ. ಇನ್ನು ಮರುದಿನ ಹೇಗಿದ್ದರೂ ಭಾನುವಾರ ರಜಾದಿನ. ಈ ಮೂಲಕ ಸತತ ಎರಡು ದಿನ ಒಟ್ಟಿಗೆ ರಜೆ ಬರುವುದರಿಂದ ಮಕ್ಕಳಲ್ಲಿ ಉತ್ಸಾಹ ಇಮ್ಮಡಿಗೊಳ್ಳುವುದಂತೂ ಸತ್ಯ.

ಈ ತಿಂಗಳು ಸತತ ಮೂರು ದಿನಗಳ ಕಾಲ ಶಾಲೆಗಳಿಗೆ ರಜೆ:ಸೆ.14 ಎರಡನೇ ಶನಿವಾರದ ಕಾರಣ ಕೆಲ ಶಾಲೆಗಳಿಗೆ ರಜೆ ಇರುತ್ತದೆ. ಅದರ ನಂತರ, ಸೆಪ್ಟೆಂಬರ್ 15ರ ಭಾನುವಾರ ಸಹಜವಾಗಿ ಶಾಲೆಗಳಿಗೆ ರಜೆ ಇರುತ್ತದೆ, ಇನ್ನು ಸೆಪ್ಟೆಂಬರ್ 16ರ ಸೋಮವಾರ, ಮಿಲಾದ್-ಉನ್-ನಬಿ ಅಥವಾ ಈದ್-ಇ ಮಿಲಾದ್ (ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ) ಇರುವುದರಿಂದ ಅಂದೂ ಶಾಲೆಗಳಿಗೆ ರಜೆ ಇರುತ್ತದೆ. ಹೀಗಾಗಿ ಸೆಪ್ಟೆಂಬರ್​ ಎರಡನೇ ವಾರಾಂತ್ಯ ಹಾಗೂ ಮೂರನೇ ವಾರದ ಆರಂಭದಲ್ಲಿ ಮಕ್ಕಳಿಗೆ ರಜೆ ಸಿಗಲಿದೆ.

ಸೆಪ್ಟೆಂಬರ್‌ನಲ್ಲಿ ಶಾಲೆಗೆ ರಜೆ ಇರುವ ದಿನಗಳು

  • ಸೆಪ್ಟೆಂಬರ್ 1 (ಭಾನುವಾರ)
  • ಸೆಪ್ಟೆಂಬರ್ 7 (ಶನಿವಾರ): ವಿನಾಯಕ ಚತುರ್ಥಿ ಸಂದರ್ಭದಲ್ಲಿ ರಜೆ
  • ಸೆಪ್ಟೆಂಬರ್ 8 (ಭಾನುವಾರ)
  • ಸೆಪ್ಟೆಂಬರ್ 14 (ಎರಡನೇ ಶನಿವಾರ)
  • ಸೆಪ್ಟೆಂಬರ್ 15 (ಭಾನುವಾರ)
  • ಸೆಪ್ಟೆಂಬರ್ 16 (ಸೋಮವಾರ): ಮಿಲಾದ್-ಉನ್-ನಬಿ ಅಥವಾ ಈದ್-ಇ ಮಿಲಾದ್ ರಜೆ (ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ)
  • ಭಾನುವಾರ, ಸೆಪ್ಟೆಂಬರ್ 22 ರಜಾ ದಿನವಾಗಿದೆ
  • ಸೆಪ್ಟೆಂಬರ್ 29 (ಭಾನುವಾರ)

ಒಟ್ಟಾರೆ ಸೆಪ್ಟೆಂಬರ್ ತಿಂಗಳಲ್ಲಿ ಸುಮಾರು 8 ದಿನಗಳ ಕಾಲ ಶಾಲೆಗಳಿಗೆ ರಜೆ ಇರಲಿದೆ. ಇದು ಮಕ್ಕಳಿಗೆ ಹಬ್ಬವೋ ಹಬ್ಬ ಅನ್ನ ಬಹುದಲ್ಲವೇ?

ಇದನ್ನು ಓದಿ:ಯುಜಿ ನೀಟ್/ಯುಜಿ ಸಿಇಟಿ-24: ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟ - UG NEET UG CET

ABOUT THE AUTHOR

...view details