ಕರ್ನಾಟಕ

karnataka

ETV Bharat / bharat

ತನ್ನ ಪಕ್ಷಾಂತರಿ ಶಾಸಕರನ್ನು ಅನರ್ಹಗೊಳಿಸದ ಕ್ರಮ ಪ್ರಶ್ನಿಸಿದ ಕಾಂಗ್ರೆಸ್​ ಅರ್ಜಿ ವಜಾ ಮಾಡಿದ ಸುಪ್ರೀಂ - SC DISMISSES CONGRESS PLEA

ತನ್ನ ಶಾಸಕರನ್ನು ಅನರ್ಹಗೊಳಿಸದ ಸ್ಪೀಕರ್ ನಿರ್ಧಾರ ಪ್ರಶ್ನಿಸಿದ್ದ ಕಾಂಗ್ರೆಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಗೋವಾ ವಿಧಾನಸಭೆ
ಗೋವಾ ವಿಧಾನಸಭೆ (IANS)

By PTI

Published : Dec 13, 2024, 12:51 PM IST

ನವದೆಹಲಿ: ಆಡಳಿತಾರೂಢ ಬಿಜೆಪಿಗೆ ಪಕ್ಷಾಂತರ ಮಾಡಿದ ತನ್ನ ಎಂಟು ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಗೋವಾ ವಿಧಾನಸಭಾ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಮೊದಲಿಗೆ ಬಾಂಬೆ ಹೈಕೋರ್ಟ್​ನ ಗೋವಾ ಬೆಂಚ್​ನಲ್ಲಿ ಅರ್ಜಿ ಸಲ್ಲಿಸಿ ಎಂದು ಕಾಂಗ್ರೆಸ್ ಮುಖಂಡ ಗಿರೀಶ್ ಚೋಡಂಕರ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿತು.

ಬಿಜೆಪಿಗೆ ಪಕ್ಷಾಂತರ ಮಾಡಿದ ತನ್ನ ಎಂಟು ಶಾಸಕರನ್ನು ಅನರ್ಹಗೊಳಿಸಬೇಕೆಂದು ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅನರ್ಹತೆ ಅರ್ಜಿಯನ್ನು ನವೆಂಬರ್ 1 ರಂದು ಗೋವಾ ವಿಧಾನಸಭಾ ಸ್ಪೀಕರ್ ರಮೇಶ್ ತವಾಡ್ಕರ್ ವಜಾಗೊಳಿಸಿದ್ದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಸಕರಾದ ದಿಗಂಬರ ಕಾಮತ್, ಅಲೆಕ್ಸೊ ಸಿಕ್ವೇರಾ, ಸಂಕಲ್ಪ್ ಅಮೋಂಕರ್, ಮೈಕೆಲ್ ಲೋಬೊ, ಡೆಲಿಲಾ ಲೋಬೊ, ಕೇದಾರ್ ನಾಯಕ್, ರುಡಾಲ್ಫ್ ಫರ್ನಾಂಡಿಸ್ ಮತ್ತು ರಾಜೇಶ್ ಫಾಲ್ದೇಸಾಯಿ ವಿರುದ್ಧ ಗೋವಾ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಚೋಡಂಕರ್ ಅನರ್ಹತೆ ಅರ್ಜಿ ಸಲ್ಲಿಸಿದ್ದರು.

ಚೋಡಂಕರ್ ಅವರ ಅರ್ಜಿಯನ್ನು ವಜಾಗೊಳಿಸಿದ ಸ್ಪೀಕರ್ ತವಾಡ್ಕರ್, "ಚುನಾಯಿತ ಸದಸ್ಯರ ಮೂಲ ರಾಜಕೀಯ ಪಕ್ಷವನ್ನು ಮತ್ತೊಂದು ರಾಜಕೀಯ ಪಕ್ಷದೊಂದಿಗೆ ವಿಲೀನಗೊಳಿಸಿದ ನಂತರ, ಚುನಾಯಿತ ಸದಸ್ಯರು ಯಾವುದೇ ಸಂದರ್ಭದಲ್ಲಿಯೂ ಅನರ್ಹಗೊಳಿಸಲು ಸಾಧ್ಯವಿಲ್ಲ. ಅಂದರೆ ಅವರು ವಿಲೀನಗೊಂಡ ಗುಂಪಿನೊಂದಿಗೆ ಸೇರಿದರೂ ಅಥವಾ ಸೇರದಿದ್ದರೂ ಇದೇ ನಿಯಮ ಅನ್ವಯಿಸುತ್ತದೆ" ಎಂದು ತೀರ್ಪು ನೀಡಿದ್ದರು. ವಿಲೀನದ ಸಂದರ್ಭದಲ್ಲಿ ಪಕ್ಷಾಂತರದ ಆಧಾರದ ಮೇಲೆ ಅನರ್ಹತೆಯ ನಿಯಮ ಅನ್ವಯಿಸುವುದಿಲ್ಲ ಎಂದು ತವಾಡ್ಕರ್ ತೀರ್ಪು ನೀಡಿದ್ದರು.

ಆಪ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ: ಉದ್ಯೋಗಕ್ಕಾಗಿ ನಗದು ಹಗರಣದಲ್ಲಿ ತನ್ನ ಮತ್ತು ತನ್ನ ಪತ್ನಿಯನ್ನು ಹೆಸರಿಸಿದ್ದಕ್ಕಾಗಿ ದೆಹಲಿ ಮತ್ತು ಗೋವಾದ ಎಎಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇನೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ರಾಜ್ಯ ಸರ್ಕಾರದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ಕೆಲ ವ್ಯಕ್ತಿಗಳು ಆಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅನೇಕ ಆಕಾಂಕ್ಷಿಗಳು ಗೋವಾದಾದ್ಯಂತ ದೂರುಗಳನ್ನು ದಾಖಲಿಸಿದ್ದರು. "ಉದ್ಯೋಗಕ್ಕಾಗಿ ನಗದು ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ನಾನು ಕ್ರಮ ಕೈಗೊಂಡಿದ್ದೇನೆ. ಈ ವಿಷಯದಲ್ಲಿ ನ್ಯಾಯಸಮ್ಮತ ತನಿಖೆಗಾಗಿ ಸರ್ಕಾರ ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ" ಎಂದು ಸಾವಂತ್ ಹೇಳಿದರು.

ಇದನ್ನೂ ಓದಿ : ಪಾಕಿಸ್ತಾನದ​ ವಧು ರಾಜಸ್ಥಾನದ ವರ; ಎರಡು ದೇಶಗಳ ರಜಪೂತ್​ ರಾಜ ಕುಟುಂಬದ ಅದ್ದೂರಿ ವಿವಾಹ - RAJPUT ROYAL WEDDING

ABOUT THE AUTHOR

...view details