ಕರ್ನಾಟಕ

karnataka

ETV Bharat / bharat

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಂದಿನ ವರ್ಷ ಭಾರತ ಭೇಟಿ ಸಾಧ್ಯತೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (IANS)

By ETV Bharat Karnataka Team

Published : 5 hours ago

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ರಾಜತಾಂತ್ರಿಕ ಮೂಲಗಳು ಮಂಗಳವಾರ ತಿಳಿಸಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕ್ರೆಮ್ಲಿನ್ ಪತ್ರಿಕಾ ಕಾರ್ಯದರ್ಶಿ ಡಿಮಿಟ್ರಿ ಪೆಸ್ಕೊವ್ ಮಂಗಳವಾರ ತಿಳಿಸಿದ್ದಾರೆ.

ಜುಲೈನಲ್ಲಿ ಮಾಸ್ಕೋದಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು.

ಶೀಘ್ರದಲ್ಲೇ ನಿಖರ ದಿನಾಂಕ ನಿರ್ಧಾರ:"ಶೀಘ್ರದಲ್ಲೇ ಪುಟಿನ್ ಅವರ ಭಾರತ ಭೇಟಿಯ ನಿಖರವಾದ ದಿನಾಂಕಗಳನ್ನು ನಾವು ನಿರ್ಧರಿಸುತ್ತೇವೆ ಎಂದು ನಾನು ಭಾವಿಸುತ್ತೇನೆ. ನಮ್ಮ ನಾಯಕರು ಪರಸ್ಪರ ಭೇಟಿ ಮಾಡುವುದು ನಿಮಗೆ ತಿಳಿದಿದೆ. ಹೀಗಾಗಿ ಪ್ರಧಾನಿ ಮೋದಿ ಅವರು ಎರಡು ಬಾರಿ ರಷ್ಯಾಗೆ ಭೇಟಿ ನೀಡಿರುವುದರಿಂದ ಸಹಜವಾಗಿಯೇ ಈಗ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಭೇಟಿಗಾಗಿ ನಾವು ಬಹಳ ಎಚ್ಚರಿಕೆಯಿಂದ ತಯಾರಿಯನ್ನು ಪ್ರಾರಂಭಿಸಲಿದ್ದೇವೆ. ನಾವು ಈ ಭೇಟಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ಆದರೆ, ಈ ಬಗ್ಗೆ ಯಾವುದೇ ನಿರ್ದಿಷ್ಟ ದಿನಾಂಕಗಳ ಮಾಹಿತಿ ನನ್ನ ಬಳಿ ಇಲ್ಲ" ಎಂದು ಪೆಸ್ಕೊವ್ ರಷ್ಯಾದ ಪ್ರಮುಖ ಸುದ್ದಿ ಸಂಸ್ಥೆ ಆರ್​ಐಎ ನೋವೊಸ್ಟಿಗೆ ತಿಳಿಸಿದ್ದಾರೆ.

ಭಾರತ- ರಷ್ಯಾ ಬಲವಾದ ಸಂಬಂಧ:ಇದಕ್ಕೂ ಮುನ್ನ ಮಂಗಳವಾರ, ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಅವರು ಹಿರಿಯ ಭಾರತೀಯ ಸಂಪಾದಕರೊಂದಿಗಿನ ವಿಡಿಯೋ ಸಂವಾದದಲ್ಲಿ ಭಾರತ ಮತ್ತು ರಷ್ಯಾ ನಡುವಿನ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಉಲ್ಲೇಖಿಸಿದರು ಮತ್ತು ಪುಟಿನ್ ಅವರ ಭೇಟಿಗೆ ಸಿದ್ಧತೆಗಳು ಆರಂಭವಾಗಿವೆ ಎಂದು ಹೇಳಿದರು. ಆದರೆ, ಪೆಸ್ಕೊವ್ ಈ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ದಿನಾಂಕವನ್ನು ಘೋಷಣೆ ಮಾಡಲಿಲ್ಲ. ಈ ಸಂವಾದವನ್ನು ಸರ್ಕಾರಿ ಸ್ವಾಮ್ಯದ ಸ್ಪುಟ್ನಿಕ್ ಸುದ್ದಿ ಸಂಸ್ಥೆ ಆಯೋಜಿಸಿತ್ತು.

"ಉಕ್ರೇನ್ ನಲ್ಲಿನ ಸಂಘರ್ಷವನ್ನು ಕೊನೆಗಾಣಿಸುವ ಗುರಿಯನ್ನು ಹೊಂದಿರುವ ಎಲ್ಲ ಸಂಭಾವ್ಯ ದೇಶಗಳ ಪ್ರಯತ್ನಗಳನ್ನು ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ ಮತ್ತು ಭಾರತದಂತಹ ನಮ್ಮ ಉತ್ತಮ ಸ್ನೇಹಿತರಿಂದ ಬಂದಾಗ ವಿಶೇಷವಾಗಿ ಈ ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ. ಈ ಅರ್ಥದಲ್ಲಿ, ಅಧ್ಯಕ್ಷ ಪುಟಿನ್ ಅವರು ಪ್ರಧಾನಿ ಮೋದಿ ಅವರ ಪ್ರಯತ್ನಗಳನ್ನು ನಿಜವಾಗಿಯೂ ಶ್ಲಾಘಿಸುತ್ತಾರೆ ಮತ್ತು ಅವರು ಪ್ರಧಾನಿ ಮೋದಿಗೆ ನಿಜವಾಗಿಯೂ ಕೃತಜ್ಞರಾಗಿದ್ದಾರೆ" ಎಂದು ಪೆಸ್ಕೊವ್ ಹೇಳಿದರು. ಅತ್ಯುತ್ತಮ ದ್ವಿಪಕ್ಷೀಯ ಸಂಬಂಧಗಳಿಂದಾಗಿ ಭಾರತವು ರಷ್ಯಾದ ಅತ್ಯುತ್ತಮ ಮಿಲಿಟರಿ ಉಪಕರಣಗಳನ್ನು ಉತ್ತಮ ಬೆಲೆಗೆ ಪಡೆಯುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಇದನ್ನೂ ಓದಿ : ಚೀನಾ ವಿದೇಶಾಂಗ ಸಚಿವ ವಾಂಗ್​ ಯಿ ಭೇಟಿಯಾದ ಜೈಶಂಕರ್: ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಚರ್ಚೆ

ABOUT THE AUTHOR

...view details