ರುದ್ರಪ್ರಯಾಗ (ಉತ್ತರಾಖಂಡ):ಬದರಿನಾಥ್ ಹೆದ್ದಾರಿಯ ರೆಂಟೋಲಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟೆಂಪೋ ಟ್ರಾವೆಲರ್ ವಾಹನವೊಂದು ನಿಯಂತ್ರಣ ತಪ್ಪಿ ಅಲಕನಂದಾ ನದಿಗೆ ಬಿದ್ದಿದೆ. ಈ ರಸ್ತೆ ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 7 ಮಂದಿ ಗಾಯಗೊಂಡಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ಪೊಲೀಸ್ ಆಡಳಿತ, ಜಿಲ್ಲಾ ವಿಪತ್ತು ನಿರ್ವಹಣೆ, ಡಿಡಿಆರ್‌ಎಫ್ ಮತ್ತು ಇತರ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದರು ಎಸ್ಪಿ ಡಾ. ವಿಶಾಖ್ ಅಶೋಕ್ ಭಾದನೆ ಪ್ರತಿಕ್ರಿಯಿಸಿ, ''ವಾಹನದಲ್ಲಿದ್ದವರನ್ನು ರಕ್ಷಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ'' ಎಂದು ತಿಳಿಸಿದರು.
ಇತ್ತೀಚಿನ ಅಪಘಾತ ಪ್ರಕರಣಗಳು:ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ಅಪಘಾತಗಳು ಪದೇ ಪದೇ ನಡೆಯುತ್ತಿವೆ. ಪ್ರತಿನಿತ್ಯ ರಸ್ತೆ ಅಪಘಾತದಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಉತ್ತರಾಖಂಡದಲ್ಲಿ ಚಾರ್‌ಧಾಮ್ ಯಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ. ಚಾರ್‌ಧಾಮ್ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಇದರಿಂದ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯು ಅಧಿಕವಾಗಿದೆ. ಮತ್ತೊಂದೆಡೆ ಚಾರ್‌ಧಾಮ್ ಯಾತ್ರೆಗಾಗಿ ಪರ್ವತ ಮಾರ್ಗಗಳ ಮೂಲಕ ಹಾದು ಹೋಗಬಹುದು. ಆದ್ರೆ, ಅಲ್ಲಿ ಒಂದು ಸಣ್ಣ ತಪ್ಪು ಮಾಡಿದರೂ ಪ್ರಾಣ ಕಳೆದುಕೊಳ್ಳಬಹುದು.