ನವದೆಹಲಿ:ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ಅಗ್ನಿ ಮತ್ತು ನಾಗರಿಕದಳದ ಸಿಬ್ಬಂದಿ ಸೇರಿದಂತೆ ಒಟ್ಟು 942 ಮಂದಿ ಪೊಲೀಸರಿಗೆ ವಿವಿಧ ರೀತಿಯ ಶೌರ್ಯ ಮತ್ತು ಸೇವಾ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಘೋಷಣೆ ಮಾಡಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಇದರಲ್ಲಿ 95 ಶೌರ್ಯ ಪ್ರಶಸ್ತಿಗಳು ಸೇರಿದೆ.
ಹೋಮ್ ಗಾರ್ಡ್, ನಾಗರಿಕ ರಕ್ಷಣೆ, ಪೊಲೀಸ್ ಸಿಬ್ಬಂದಿ ಸೇರಿದಂತೆ ವಿವಿಧ ಸೇವೆಗಳಲ್ಲಿ ಕರ್ತವ್ಯ ನಿರ್ವಹಣೆ ನಡೆಸಿದ ಸಿಬ್ಬಂದಿಗಳು ಈ ಗೌರವ ಪದಕಕ್ಕೆ ಪಾತ್ರರಾಗಿದ್ದಾರೆ.
ಶೌರ್ಯ ಪ್ರಶಸ್ತಿ ವಿಜೇತರಲ್ಲಿ, ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ 28, ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ 28, ಈಶಾನ್ಯದಲ್ಲಿ ಮೂರು ಮತ್ತು ಇತರ ಪ್ರದೇಶಗಳಲ್ಲಿ ನಿಯೋಜಿಸಲಾದ 36 ಸಿಬ್ಬಂದಿಗೆ ಪ್ರಶಸ್ತಿ ನೀಡಲಾಗಿದೆ.
ವಿಶೇಷ ಸೇವೆಗಾಗಿ ನೀಡುವ 101 ರಾಷ್ಟ್ರಪತಿಗಳ ಪದಕಗಳಲ್ಲಿ, 85 ಪೊಲೀಸ್ ಸಿಬ್ಬಂದಿಗೆ, 5 ಅಗ್ನಿಶಾಮಕ ಸೇವಾ ಸಿಬ್ಬಂದಿಗೆ, 7 ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ಸೇವೆಗೆ ಮತ್ತು 4 ಸುಧಾರಣಾ ಸೇವೆ ಗುರುತಿಸಿ ನೀಡಲಾಗಿದೆ.