ಕರ್ನಾಟಕ

karnataka

ETV Bharat / bharat

ಯುವತಿಯ ತಲೆಬುರುಡೆಯಿಂದ ಸುಮಾರು 70 ಸೂಜಿಗಳನ್ನು ಹೊರತೆಗೆದ ಶಸ್ತ್ರಚಿಕಿತ್ಸಕರು - Needles Remove From Girl Skull

ಬುರ್ಲಾದ ವಿಮ್ಸಾರ್​( VIMSAR0ನ ಶಸ್ತ್ರಚಿಕಿತ್ಸಕರು ಯುವತಿಯ ತಲೆಬುರುಡೆಯಿಂದ ಸುಮಾರು 70 ಸೂಜಿಗಳನ್ನು ಹೊರತೆಗೆದಿದ್ದಾರೆ.

VIMSAR
ವಿಮ್ಸಾರ್ (ETV Bharat)

By ETV Bharat Karnataka Team

Published : Jul 19, 2024, 10:41 PM IST

ಸಂಬಲ್‌ಪುರ (ಒಡಿಶಾ) :ವಿಪರೀತ ತಲೆನೋವಿನಿಂದ ಬಳಲುತ್ತಿದ್ದ 19 ವರ್ಷದ ಯುವತಿಯ ತಲೆಬುರುಡೆಯಿಂದ ಬುರ್ಲಾದ ವಿಮ್ಸಾರ್​ VIMSARನ ಶಸ್ತ್ರಚಿಕಿತ್ಸಕರು ಸುಮಾರು 70 ಸೂಜಿಗಳನ್ನು ಹೊರತೆಗೆದಿದ್ದಾರೆ.

ಮೂವರು ಹಿರಿಯ ಶಸ್ತ್ರಚಿಕಿತ್ಸಕರು ಒಂದೂವರೆ ಗಂಟೆಗಳ ಕಾಲ ಆಪರೇಷನ್ ನಡೆಸಿದ್ದು, ಈಗ ಬಾಲಕಿ ಅಪಾಯದಿಂದ ಪಾರಾಗಿದ್ದಾರೆ ಎಂದು ವಿಮ್ಸಾರ್( VIMSAR) ನಿರ್ದೇಶಕ ಭಾಬಗ್ರಾಹಿ ರಾತ್ ತಿಳಿಸಿದ್ದಾರೆ.

ಬಲಂಗೀರ್ ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬಳ ತಲೆಬುರುಡೆಗೆ ತಾಂತ್ರಿಕರೊಬ್ಬರು ಸೂಜಿಯನ್ನು ಅಳವಡಿಸಿರುವುದು ಬೆಳಕಿಗೆ ಬಂದಿತ್ತು. ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ನಿನ್ನೆ ಸಂಜೆ ಬುರ್ಲಾ ವಿಮ್ಸಾರ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ತಲೆಯನ್ನು ಸಿಟಿ ಸ್ಕ್ಯಾನ್ ಮಾಡಿದ ನಂತರ, ಆಕೆಯ ತಲೆಯೊಳಗೆ ಹೆಚ್ಚಿನ ಸಂಖ್ಯೆಯ ಸೂಜಿಗಳನ್ನು ಅಳವಡಿಸಿರುವುದು ಕಂಡುಬಂದಿತ್ತು.

ಮಾಹಿತಿಯ ಪ್ರಕಾರ, ಡಾ. ರವಿ ನಾರಾಯಣ ಗುರು ಎಂಬ ತಾಂತ್ರಿಕರೊಬ್ಬರು ಆಕೆಯ ಮೇಲೆ ಧಾರ್ಮಿಕ ಕಾರ್ಯವಿಧಾನವನ್ನು ಬಳಕೆ ಮಾಡಿದ್ದರು ಎಂಬುದಾಗಿ ತಿಳಿದುಬಂದಿತ್ತು. ಈ ಸಮಯದಲ್ಲಿ ಅವನು ಅವಳ ತಲೆಗೆ ಸೂಜಿಯನ್ನು ಚುಚ್ಚಿದ್ದಾನೆ. ಅದರಿಂದ ಯುವತಿ ಪ್ರಜ್ಞೆ ಕಳೆದುಕೊಂಡಿದ್ದಳು. ಆದರೆ ತಾಂತ್ರಿಕ ಮಾತ್ರ ತಮ್ಮ ಈ ಚಿಕಿತ್ಸೆಯಿಂದ ಗುಣಮುಖಳಾಗಿದ್ದಳು ಎಂದು ತಿಳಿಸಿದ್ದ. ಆದರೆ, ಯುವತಿಯನ್ನು ಪೋಷಕರು ಮನೆಗೆ ಹಿಂದಿರುಗಿದ ಬಳಿಕ ಆಕೆಯ ತಲೆಯಲ್ಲಿ ಸೂಜಿಗಳು ಇರುವುದನ್ನು ಗುರುತಿಸಿ, ಭೀಮಾ ಭೋಯ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಿದ್ದರು.

ಯುವತಿಯನ್ನು ಪರೀಕ್ಷಿಸಿದ VIMSAR ಆಸ್ಪತ್ರೆ ವೈದ್ಯರು ಆ ಎಲ್ಲ ಗುಂಡು ಸೂಜಿಗಳನ್ನು ಆಕೆಯ ತಲೆಯಿಂದ ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ :ತಲೆಬುರುಡೆ ತಿನ್ನುವ ಸೈಕೋ... ಇವನ ವಿಕೃತಿ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು!

ABOUT THE AUTHOR

...view details