ಕರ್ನಾಟಕ

karnataka

ETV Bharat / bharat

ಹಿಂಸಾಚಾರಪೀಡಿತ ಉತ್ತರ ಪ್ರದೇಶದ ಸಂಭಾಲ್​ಗೆ ನಾಳೆ ರಾಹುಲ್​ ಗಾಂಧಿ ನಿಯೋಗ ಭೇಟಿ

ನೂತನವಾಗಿ ಆಯ್ಕೆಯಾದ ವಯನಾಡ್‌ ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಈ ನಿಯೋಗದಲ್ಲಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

rahul-gandhi-other-party-mps-from-up-to-visit-sambhal-on-wednesday
ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್​ ಗಾಂಧಿ (ANI)

By PTI

Published : Dec 3, 2024, 4:03 PM IST

ಲಕ್ನೋ(ಉತ್ತರ ಪ್ರದೇಶ): ಹಿಂಸಾಚಾರಪೀಡಿತ ಸಂಭಾಲ್​ಗೆ ನಾಳೆ (ಬುಧವಾರ) ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್​ ಗಾಂಧಿ ಹಾಗೂ ಉತ್ತರ ಪ್ರದೇಶದ ಇತರೆ ಪಕ್ಷಗಳ ಐವರು ಸಂಸದರು ಭೇಟಿ ನೀಡಲು ಮುಂದಾಗಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್​ ರಾಯ್​ ಮಾಹಿತಿ ನೀಡಿದರು.

ಸಂಭಾಲ್​ನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಈ ನಿಷೇಧಾಜ್ಞೆ ಭಾನುವಾರ ಅಂತ್ಯಗೊಂಡಿದೆ. ಇದೀಗ ಮತ್ತೆ ಡಿಸೆಂಬರ್​ 31ರವರೆಗೂ ವಿಸ್ತರಿಸಲಾಗಿದ್ದು, ಹೊರಗಿನವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ನವೆಂಬರ್​ 19ರಂದು ಕೋರ್ಟ್​ ಅನುಮತಿ ಮೇರೆಗೆ ಮೊಘಲ್ ಕಾಲದ ಇಲ್ಲಿನ ಮಸೀದಿಯಿದ್ದ ಜಾಗದ ಸಮೀಕ್ಷೆಗೆ ಅಧಿಕಾರಿಗಳು ಮುಂದಾದಾಗ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಮಸೀದಿ ಕಟ್ಟಿದ ಜಾಗದಲ್ಲಿ ಹಿಂದೆ ದೇವಾಲಯವಿತ್ತು, ಈ ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಅರ್ಜಿದಾರರು ಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಇದರ ಆಧಾರದ ಮೇರೆಗೆ ಕೋರ್ಟ್ ಸಮೀಕ್ಷೆಗೆ ಅನುಮತಿ ನೀಡಿತ್ತು. ನವೆಂಬರ್​ 24ರಂದು ಎರಡನೇ ಬಾರಿ ಸಮೀಕ್ಷೆಗೆ ಮುಂದಾದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿ, ಅನೇಕರು ಗಾಯಗೊಂಡಿದ್ದರು.

ಸಮಾಜವಾದಿ ಪಕ್ಷದ ನಿಯೋಗವನ್ನು ತಡೆದಿದ್ದ ಪೊಲೀಸರು: ಸಂಭಾಲ್​ ಹಿಂಸಾಚಾರ ಕುರಿತು ವರದಿಗೆ ಹೊರಟಿದ್ದ 15 ಸದಸ್ಯರ ತಂಡದ ಸಮಾಜವಾದಿ ಪಕ್ಷದ ನಿಯೋಗವನ್ನು ನವೆಂಬರ್​ 30ರಂದು ಉತ್ತರ ಪ್ರದೇಶ ಪೊಲೀಸರು ಲಕ್ನೋದಲ್ಲಿ ತಡೆದಿದ್ದರು. ಈ ಕ್ರಮವನ್ನು ಸಮಾಜವಾದಿ ಪಕ್ಷ ತೀವ್ರವಾಗಿ ಖಂಡಿಸಿತ್ತು. ಎಸ್​ಪಿ ನಾಯಕ ಅಖಿಲೇಶ್​ ಯಾದವ್​, ಇದು ಸರ್ಕಾರದ ವೈಫಲ್ಯ ಎಂದು ಟೀಕಿಸಿದ್ದರು.

ಇದನ್ನೂ ಓದಿ: ಸಂಭಾಲ್ ಭೇಟಿಗೆ ಮುಂದಾಗಿದ್ದ ಸಮಾಜವಾದಿ ಪಕ್ಷದ ನಿಯೋಗ ತಡೆದ ಉತ್ತರ ಪ್ರದೇಶ ಪೊಲೀಸರು

ABOUT THE AUTHOR

...view details