ನವದೆಹಲಿ:ರಾಹುಲ್ ಗಾಂಧಿ ಯಾವಾಗಲೂ ಏಕೆ ಬಿಳಿ ಟಿ ಶರ್ಟ್ ಧರಿಸುತ್ತಾರೆ?, ಇದಕ್ಕೆ ಕಾಂಗ್ರೆಸ್ ನಾಯಕನಿಗೆ ಒಂದಲ್ಲ ಎರಡು ಕಾರಣಗಳಿವೆಯಂತೆ. ಅವರೇ ಹೇಳಿರುವಂತೆ ಒಂದನೇ ಕಾರಣ ಪಾರದರ್ಶಕತೆ ಮತ್ತು ಎರಡನೇ ಕಾರಣ ಸರಳತೆ. ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿರುವ ಎರಡು ನಿಮಿಷಗಳ ವಿಡಿಯೋದಲ್ಲಿ ರಾಹುಲ್ ಗಾಂಧಿ ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ರಾಜಕೀಯದಲ್ಲಿ ಸಿದ್ಧಾಂತದ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ, "ನನ್ನ ದೃಷ್ಟಿಯಲ್ಲಿ ಸಿದ್ಧಾಂತದ ಸ್ಪಷ್ಟ ತಿಳುವಳಿಕೆಯಿಲ್ಲದೆ ನೀವು ಅಧಿಕಾರದ ಕಡೆಗೆ ದೊಡ್ಡ ಸಂಘಟನೆಯಾಗಿ ಹೋಗಲು ಸಾಧ್ಯವಿಲ್ಲ. ಬಡವರ ಪರ, ಮಹಿಳೆಯರ ಪರ, ಬಹುವಚನ ಬಳಕೆ, ಎಲ್ಲರನ್ನೂ ಸಮಾನವಾಗಿ ಪರಿಗಣಿಸುವ ನಮ್ಮ ಸಿದ್ಧಾಂತವನ್ನು ನಾವು ಜನರಿಗೆ ಮನವರಿಕೆ ಮಾಡಬೇಕು. ಆದ್ದರಿಂದ ನಮ್ಮ ಹೋರಾಟ ಸಾಂಸ್ಥಿಕ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಯಾವಾಗಲೂ ಸಿದ್ಧಾಂತಕ್ಕೆ ಸಂಬಂಧಿಸಿದೆ" ಎಂದು ವಿವರಿಸಿದರು.
ಭಾರತ್ ಜೋಡೋ ಯಾತ್ರೆಯ ನಂತರ ಬಿಳಿ ಟಿ ಶರ್ಟ್ ರಾಹುಲ್ ಗಾಂಧಿ 'ಟ್ರೇಡ್ಮಾರ್ಕ್' ಆಗಿದೆ. ಇದಕ್ಕೇನು ಕಾರಣ ಎಂದು ಕೇಳಿದ್ದಕ್ಕೆ, "ಬಿಳಿ ಟಿ ಶರ್ಟ್ ಪಾರದರ್ಶಕತೆ ಹಾಗು ಸರಳತೆಯನ್ನು ತಿಳಿಸುತ್ತದೆ. ನಾನು ಬಟ್ಟೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಆದಷ್ಟು ಸರಳವಾಗಿರಲು ಇಷ್ಟಪಡುತ್ತೇನೆ" ಎಂದರು.