ಕರ್ನಾಟಕ

karnataka

ETV Bharat / bharat

ಅಸ್ಸಾಂನ ಟೀ ತೋಟಕ್ಕೆ ಭೇಟಿ ನೀಡಿದ ಮೋದಿ; ಚಹಾ ತೋಟಗಳಿಗೆ ಭೇಟಿ ನೀಡುವಂತೆ ಪ್ರವಾಸಿಗರಿಗೆ ಮನವಿ​ - PM visit tea plantations

ಅಸ್ಸಾಂಗೆ ಭೇಟಿ ನೀಡಿದ್ದ ಪ್ರಧಾನಿ ಇಂದು ಬೆಳಗ್ಗೆ ಅಲ್ಲಿನ ಟೀ ತೋಟಗಳಿಗೆ ಭೇಟಿ ನೀಡಿ ಗಮನ ಸೆಳೆದರು.

Prime Minister visit tea plantations of Assam
ಲೋಕಸಭೆ ಚುನಾವಣೆಗೆ ಬಿಜೆಪಿ ಸನ್ನದ್ಧ: ಟೀ ತೋಟಕ್ಕೆ ಭೇಟಿ ನೀಡದ ಮೋದಿ

By ETV Bharat Karnataka Team

Published : Mar 9, 2024, 9:37 PM IST

ತೇಜ್‌ಪುರ, ಅಸ್ಸಾಂ: ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಚಹಾ ತೋಟಗಳಲ್ಲಿ ಕಾರ್ಮಿಕರನ್ನು ಸೆಳೆಯುವ ಯತ್ನ ನಡೆಸಿದ್ದಾರೆ. ಅಸ್ಸಾಂ ಪ್ರವಾಸದಲ್ಲಿರುವ ಮೋದಿ ಶನಿವಾರ ಬೆಳಗ್ಗೆ ಕಾಜಿರಂಗ ಸಮೀಪದ ಹತಿಖುಲಿ ಚಹಾ ತೋಟಕ್ಕೆ ಭೇಟಿ ನೀಡಿ, ಚಹಾ ಎಲೆಗಳನ್ನು ತಮ್ಮ ಕೈಯಿಂದ ಸ್ಪರ್ಶಿಸಿ ಅಲ್ಲಿದ್ದ ಕಾರ್ಮಿಕರೊಂದಿಗೆ ಮಾತನಾಡಿದರು.

ಲೋಕಸಭೆ ಚುನಾವಣೆಗೆ ಬಿಜೆಪಿ ಸನ್ನದ್ಧ: ಟೀ ತೋಟಕ್ಕೆ ಭೇಟಿ ನೀಡದ ಮೋದಿ

ಚಹಾ ತೋಟಕ್ಕೆ ಭೇಟಿ ನೀಡಿದ ಬಳಿಕ ಈ ಬಗ್ಗೆ ತಮ್ಮ ಎಕ್ಸ್​ ಆ್ಯಪ್​​ನಲ್ಲಿ ಈ ಬಗ್ಗೆ ಪೋಸ್ಟ್​ವೊಂದನ್ನ ಮಾಡಿದ್ದಾರೆ. ಅಸ್ಸಾಂ ಅತ್ಯುತ್ತಮ ಚಹಾ ತೋಟಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಚಹಾವು ಪ್ರಪಂಚದಾದ್ಯಂತ ತನ್ನದೇ ಆದ ಛಾಪು ಮೂಡಿಸಿದೆ. ಶ್ರಮವಹಿಸಿ ದುಡಿದ ಮತ್ತು ಅಸ್ಸಾಂ ಚಹಾವನ್ನು ಜಗತ್ತಿನಾದ್ಯಂತ ಪಸರಿಸುವಂತೆ ಮಾಡಿದ ಇಲ್ಲಿನ ಸಮುದಾಯವನ್ನು ನಾನು ಪ್ರಶಂಸಿಸುತ್ತೇನೆ. ಪ್ರವಾಸಿಗರು ಈ ರಾಜ್ಯಕ್ಕೆ ಭೇಟಿ ನೀಡಿದ ಸಮಯದಲ್ಲಿ ಚಹಾ ತೋಟಗಳಿಗೆ ತೆರಳಿ ಇವರನ್ನು ಹುರಿದುಂಬಿಸುವಂತೆ ನಾನು ಮನವಿ ಮಾಡುತ್ತೇನೆ ಎಂದು ಅಸ್ಸಾಮಿ ಭಾಷೆಯಲ್ಲೇ ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

ಇಲ್ಲಿನ ಬಿಜೆಪಿ ನಾಯಕ ಮತ್ತು ಕಾಜಿರಂಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕಾಮಾಖ್ಯ ಪ್ರಸಾದ್ ತಾಸಾ ಅವರನ್ನು ಈ ಬಗ್ಗೆ ಈಟಿವಿ ಭಾರತ್ ಕೇಳಿದಾಗ, ಇದು ಯಾವುದೇ ರಾಜಕೀಯ ಉದ್ದೇಶದಿಂದ ನೀಡಿದ ಭೇಟಿಯಲ್ಲ ಎಂದು ಹೇಳಿದರು. ಅಸ್ಸಾಂ ಟೀ ತೋಟಗಳಿಂದ ಆಕರ್ಷಿತರಾದ ಪ್ರಧಾನಿ, ಅಲ್ಲಿನ ತೋಟಗಳಿಗೆ ಭೇಟಿ ನೀಡಿ ಅಲ್ಲಿದ್ದ ಕೆಲಸಗಾರರನ್ನು ಮಾತನಾಡಿಸಿದ್ದಾರೆ. ಮೋದಿ ಅವರ ಈ ನಡೆ ಅಲ್ಲಿನ ಜನರನ್ನು ಆಕರ್ಷಿಸಿದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರು "ಚಾಯ್ ಪೇ ಚರ್ಚಾ" ಎಂಬ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದರು ಎಂಬುದು ಗಮನಾರ್ಹ.

ಲೋಕಸಭೆ ಚುನಾವಣೆಗೆ ಬಿಜೆಪಿ ಸನ್ನದ್ಧ: ಟೀ ತೋಟಕ್ಕೆ ಭೇಟಿ ನೀಡದ ಮೋದಿ

ಅಸ್ಸಾಂ ಚಹಾ ತೋಟಗಳ 200 ವರ್ಷಗಳ ಇತಿಹಾಸವನ್ನು ಹೊಂದಿವೆ. ಪ್ರಸ್ತುತ, ಅಸ್ಸಾಂನಲ್ಲಿ ಸುಮಾರು 780 ಚಹಾ ತೋಟಗಳಿವೆ. ಮತ್ತು ವಾರ್ಷಿಕವಾಗಿ 700 ಮಿಲಿಯನ್ ಕೆಜಿ ಚಹಾ ಎಲೆಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ.

ಅಸ್ಸಾಂ ಸರ್ಕಾರದ ಒಡೆತನದ ಅಸ್ಸಾಂ ಟೀ ಕಾರ್ಪೊರೇಶನ್ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಕೆಲವು ತೋಟಗಳನ್ನು ಖಾಸಗಿಯವರಿಗೆ 35 ವರ್ಷಗಳ ಕಾಲ ಗುತ್ತಿಗೆ ಕೂಡಾ ನೀಡಲಾಗಿದೆ. ರಾಜ್ಯ ಸರ್ಕಾರವು ಮುಖ್ಯವಾಗಿ ಜಿಎಸ್‌ಟಿ ರೂಪದಲ್ಲಿ ಆದಾಯವನ್ನು ಪಡೆಯುತ್ತಿದೆ. ಚಹಾ ತೋಟದ ಭೂಮಿಯಿಂದ ರಾಜ್ಯ ಸರ್ಕಾರಕ್ಕೂ ಆದಾಯ ಬರುತ್ತದೆ. ರಾಜ್ಯ ಸರ್ಕಾರವು ಹಸಿರು ಎಲೆಗಳು ಮತ್ತು ಕೃಷಿ ಭೂಮಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಿದೆ.

2023ರಲ್ಲಿ ಅಸ್ಸಾಂ CTC ಚಹಾ ಪ್ರತಿ ಕೆಜಿಗೆ 220 ರೂ ನಂತೆ ಸರಾಸರಿ ಹರಾಜಾಗಿದೆ. 2022 ರಲ್ಲಿ (ಏಪ್ರಿಲ್ ನಿಂದ ಆಗಸ್ಟ್) ಪ್ರತಿ ಕೆಜಿಗೆ 229 ರೂ. ಪ್ರತಿ ಕೆಜಿಗೆ 229.97 ರೂ. ಹರಾಜಾಗಿತ್ತು. ಅಸ್ಸಾಂ ಚಹಾವನ್ನು ವಿದೇಶಗಳಿಗೆ ರಫ್ತು ಮಾಡಿ ಭಾರಿ ಲಾಭ ಗಳಿಸಲಾಗುತ್ತಿದೆ.

ಇದನ್ನು ಓದಿ:ಕಾಜಿರಂಗ್​ನಲ್ಲಿ ಆನೆ-ಜೀಪ್​ ಸಫಾರಿ ಮಾಡಿದ ಪ್ರಧಾನಿ ಮೋದಿ

ABOUT THE AUTHOR

...view details