ನವದೆಹಲಿ: ರಕ್ಷಾ ಬಂಧನ ಹಿನ್ನೆಲೆ ಜನರಿಗೆ ಶುಭಾಶಯ ತಿಳಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು, ಮಹಿಳೆಯರ ಸುರಕ್ಷತೆ ಮತ್ತು ಗೌರವ ಕಾಪಾಡುವುದು ಅತ್ಯಗತ್ಯ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಕ್ಷಾ ಬಂಧನದ ವಿಶೇಷ ದಿನದಂದು, ಪ್ರತಿಯೊಬ್ಬರಿಗೆ ಶುಭ ಹಾರೈಸುತ್ತೇನೆ. ಈ ಹಬ್ಬವನ್ನು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿ ಮತ್ತು ನಂಬಿಕೆಯಾಗಿ ಆಚರಿಸಲಾಗುವುದು. ಹಾಗೇ ಈ ಹಬ್ಬವು ನಮಗೆ ಎಲ್ಲಾ ಸಹೋದರಿಯರನ್ನು ಮತ್ತು ಮಕ್ಕಳನ್ನು ಕಾಳಜಿ ಮತ್ತು ಗೌರವಯುತವಾಗಿ ನೋಡುವಂತೆ ಕಲಿಸುತ್ತದೆ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಈ ದಿನದಂದು ಸಮಾಜದಲ್ಲಿರುವ ಎಲ್ಲಾ ಮಹಿಳೆಯರ ಸುರಕ್ಷೆ ಮತ್ತು ಗೌರವ ಖಚಿತಪಡಿಸುವ ಭರವಸೆಯನ್ನು ಪ್ರತಿಯೊಬ್ಬರು ನೀಡುತ್ತಾರೆ ಎಂಬ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದ್ದಾರೆ.
ಪ್ರಧಾನಿ ಶುಭಾಶಯ: ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಕ್ಷಾ ಬಂಧನ್ ಹಿನ್ನೆಲೆ ದೇಶದ ಜನರಿಗೆ ಶುಭಾಶಯ ಕೋರಿದ್ದಾರೆ. ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿ ವ್ಯಕ್ತಪಡಿಸುವ ರಕ್ಷಾ ಬಂಧನ ಹಬ್ಬದ ಶುಭಾಯಗಳು. ಈ ದಿನವು ಎಲ್ಲರ ಜೀವನದಲ್ಲಿ ಸುಖ, ಯಶಸ್ಸು, ಒಳ್ಳೆಯದನ್ನು ತರಲಿ ಎಂದು ಹಾರೈಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಕೂಡ ರಕ್ಷಾ ಬಂಧನ್ ದಿನದಂದು ಎಲ್ಲಾ ಕುಟುಂಬಗಳಿಗೆ ಸುಖ ಮತ್ತು ಸಮೃದ್ಧಿ ತರಲಿ ಎಂದು ಆಶಿಸುವುದಾಗಿ ಶುಭ ಕೋರಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಾ ಬಂಧನದ ಶುಭಾಶಯವನ್ನು ಎಲ್ಲರಿಗೂ ತಿಳಿಸಿದ್ದು, ಸಹೋದರ ಸಹೋದರಿಯರ ನಡುವಿನ ಬಂಧವನ್ನು ಈ ದಿನ ತೋರಿಸುತ್ತದೆ. ಇದು ರಕ್ಷಣೆ ಮತ್ತು ಭದ್ರತೆಯ ಮಹತ್ವವನ್ನು ನೆನಪಿಸುತ್ತದೆ. ಈ ಹಬ್ಬವು ನಿಮ್ಮ ಕುಟುಂಬಗಳಿಗೆ ಮತ್ತು ನಮ್ಮ ದೇಶಕ್ಕೆ ಒಳಿತಾಗಲಿ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಕ್ಷಾ ಬಂಧನ್ ಹಬ್ಬವು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯ ಸಂಕೇತವಾಗಿದೆ. ಈ ದಿನದಂದು ದೇಶದ ಎಲ್ಲಾ ಜನರಿಗೆ ನಾನು ಹೃದಯಪೂರ್ವಕ ಶುಭಾಶಯ ತಿಳಿಸುತ್ತೇನೆ. ಈ ಹಬ್ಬವು ಸಂಬಂಧಗಳ ನಡುವಿನ ಬಲ ಮತ್ತು ಸಾಮರಸ್ಯವನ್ನು ತೋರಿಸುತ್ತದೆ ಎಂದು ತಿಳಿಸಿದರು.
ವಿಶೇಷ ಫೋಟೋ ಹಂಚಿಕೊಂಡ ರಾಹುಲ್ ಗಾಂಧಿ: ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯೊಂದಿಗಿನ ವಿಶೇಷದ ಫೋಟೋ ಹಂಚಿಕೊಳ್ಳುವ ಮೂಲಕ ಶುಭ ಕೋರಿದ್ದಾರೆ. ಸಹೋದರ ಮತ್ತು ಹಸೋದರಿಯ ನಡುವಿನ ಅಚಲ ಪ್ರೀತಿ ಮತ್ತು ವಿಶ್ವಾಸದ ಪ್ರತೀಕ ಈ ಹಬ್ಬವಾಗಿದೆ. ಈ ರಕ್ಷಾ ಬಂಧನವು ಈ ಪವಿತ್ರ ಬಂಧವನ್ನು ಬಲಗೊಳಿಸಲಿದೆ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ರಕ್ಷಾ ಬಂಧನ: ಚಿನ್ನ, ಬೆಳ್ಳಿ, ವಜ್ರದ ರಾಖಿ ಖರೀದಿಸಿದ ಸಹೋದರಿಯರು