ನವದೆಹಲಿ: ಇಂದು ದೇಶದೆಲ್ಲಡೆ ದಸರಾ ಸಂಭ್ರಮ ಮತ್ತು ಸಡಗರ ಮನೆ ಮಾಡಿದೆ. ವಿಜಯದಶಮಿ ಅಥವಾ ದಸರಾ ಹಬ್ಬದ ದಿನವಾದ ಇಂದು ರಾವಣ ದಹನ ಮಾಡುವುದು ಅತ್ಯಂತ ಪ್ರಮುಖವಾದ ಆಚರಣೆ. ಈ ದಿನ ರಾಮನು ರಾವಣನನ್ನು ಸಂಹಾರ ಮಾಡಿದ ಪ್ರತೀಕವಾಗಿ ರಾವಣ ದಹನವನ್ನು ಮಾಡಲಾಗುತ್ತದೆ. ರಾಷ್ಟ್ರರಾಜಧಾನಿ ದೆಹಲಿ ಕೂಡ ಅದಕ್ಕೆ ಹೊರತಾಗಿಲ್ಲ. ರಾವಣ ದಹನವನ್ನು ಇಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ರಾಷ್ಟ್ರಪತಿ, ಪ್ರಧಾನಿ ಭಾಗಿ:ರಾಮಲೀಲಾ ಮೈದಾನದಲ್ಲಿ ಬೃಹತ್ ರಾವಣ ದಹನಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಇಂದು ಸಂಜೆ 7 ಗಂಟೆಗೆ ಪ್ರತಿಕೃತಿ ದಹನ ನಡೆಯಲಿದೆ. ಶ್ರೀ ಧಾರ್ಮಿಕ ಲೀಲಾ ಸಮಿತಿಯ ಆಹ್ವಾನದ ಮೇರೆಗೆ ಈ ಬಾರಿಯ ದಸರಾ ಆಚರಣೆಯ ಕಣ್ತುಂಬಿಕೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಹಾಗೂ ತಾರೆಯರಾದ ಅಜಯ್ ದೇವಗನ್, ಕರೀನಾ ಕಪೂರ್ ಸೇರಿದಂತೆ ಇತರ ಬಾಲಿವುಡ್ ನಟ-ನಟಿಯರು, ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ. ಅದಕ್ಕೂ ಮುನ್ನ ವಿವಿಧ ಕಾರ್ಯಕ್ರಮಗಳಿಗೂ ಅವರು ಸಾಕ್ಷಿಯಾಗಲಿದ್ದಾರೆ.
ರಾಮಲೀಲಾ ಮೈದಾನದಲ್ಲಿ ರಾವಣ ದಹನ (ETV Bharat) ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (ETV Bharat) ತಮ್ಮ ಆಹ್ವಾನವನ್ನು ರಾಷ್ಟ್ರಪತಿ ಮತ್ತು ಪ್ರಧಾನಿಗಳು ಸ್ವೀಕರಿಸಿದ್ದಾರೆ. ವಿಜಯದಶಮಿ ದಿನದಂದು ಕೆಂಪುಕೋಟೆ ಮೈದಾನದಲ್ಲಿ ಆಯೋಜಿಸಿರುವ ಲೀಲಾ ಕಾರ್ಯಕ್ರಮಕ್ಕೆ ಬರಲು ಅನುಮತಿ ಕೂಡ ನೀಡಿದ್ದಾರೆ. ಅವರ ಆಗಮನದ ಹಿನ್ನೆಲೆ ಸಮಿತಿ ಕೂಡ ಸ್ಥಳದಲ್ಲಿ ಸಿದ್ಧತೆ ಆರಂಭಿಸಿದೆ. ರಾವಣ ದಹನವನ್ನು ಕಣ್ತುಂಬಿಕೊಳ್ಳಲು ಅವರೊಂದಿಗೆ ಸಾವಿರಾರು ಜನ ಇಲ್ಲಿಗೆ ಆಗಮಿಸಲಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಧೀರಜಧರ್ ಗುಪ್ತಾ ಮತ್ತು ಕಾರ್ಯದರ್ಶಿ ಪ್ರದೀಪ್ ಶರಣ್ ಅವರು ಮಾಹಿತಿ ನೀಡಿದ್ದಾರೆ.
ರಾಮಲೀಲಾ ಮೈದಾನದಲ್ಲಿ ರಾವಣ ದಹನ (ETV Bharat) ತಾರೆಯರಿಗೂ ಆಹ್ವಾನ: ಈ ಬಾರಿ ಐತಿಹಾಸಿಕ ರಾವಣ ದಹನಕ್ಕೆ ಚಿತ್ರರಂಗದ ಗಣ್ಯರನ್ನು ಆಹ್ವಾನಿಸಲಾಗಿದೆ. ಖ್ಯಾತ ಚಿತ್ರನಟ ಅಜಯ್ ದೇವಗನ್, ಖ್ಯಾತ ಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಹಾಗೂ ನಟಿ ಕರೀನಾ ಕಪೂರ್ ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿಗೆ ನೀಡಿದ್ದಾರೆ ಎಂದು ರಾಮಲೀಲಾ ಸಮಿತಿ ಅಧ್ಯಕ್ಷ ಅರ್ಜುನ್ ಕುಮಾರ್ ತಿಳಿಸಿದ್ದಾರೆ.
ರೋಹಿತ್ ಶೆಟ್ಟಿ (ETV Bharat) 120 ಅಡಿ ಎತ್ತರದ ಮೂರ್ತಿ: ದಸರಾ ಮಹೋತ್ಸವ ನಿಮಿತ್ತ ರಾಮಲೀಲಾ ಸ್ಥಳವಾದ ಕೆಂಪುಕೋಟೆ ಮೈದಾನದಲ್ಲಿ 120-110-100 ಅಡಿ ಎತ್ತರದ ರಾವಣ, ಕುಂಭಕರನ್ ಮತ್ತು ಮೇಘನಾಥನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಬಾಣ ಬಿಡುವ ಮೂಲಕ ರಾವಣ ದಹನವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.
ಸರ್ಕಾರಕ್ಕೆ ಮನವಿ: ಕುಂಭಕರ್ಣ, ಮೇಘನಾಥನ ಪುತ್ಥಳಿಗಳಲ್ಲದೇ, ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರ ನಾಲ್ಕನೇ ಪ್ರತಿಕೃತಿಯನ್ನು ಸಹ ದಹಿಸಲಾಗಿದೆ. ಇತ್ತೀಚಿಗೆ ಕೋಲ್ಕತ್ತಾದಲ್ಲಿ ನಡೆದ ದುಷ್ಕೃತ್ಯದಿಂದ ಹಾಗೂ ವೈದ್ಯರ ಮುಷ್ಕರದಿಂದಾಗಿ ಸಾವಿರಾರು ಜನರು ಚಿಕಿತ್ಸೆಯಿಂದ ವಂಚಿತರಾಗಿದ್ದರು. ಮಹಿಳೆಯರ ಸಬಲೀಕರಣಕ್ಕಾಗಿ ಕಠಿಣ ಕಾನೂನುಗಳನ್ನು ತರಲು ಸರ್ಕಾರಕ್ಕೆ ಈ ಮೂಲಕ ಮನವಿ ಸಲ್ಲಿಸಲಾಗುತ್ತದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ರಾವಣ ದಹನ ಮಾಡಲು ಆಹ್ವಾನಿಸಲಾಗಿದೆ ಎಂದು ನವಶ್ರೀ ಧಾರ್ಮಿಕ ರಾಮಲೀಲಾ ಸಮಿತಿಯ ಪ್ರಚಾರ ಸಚಿವ ರಾಹುಲ್ ಶರ್ಮಾ ಇಂದಿನ ಹಬ್ಬದ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು.
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (ETV Bharat) ಇದನ್ನೂ ಓದಿ:ವಿಜಯದಶಮಿಯ ಶುಭಾಶಯಗಳು: ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಹಾರೈಸಿ, ಅಮ್ಮನ ಆಶೀರ್ವಾದ ಪಡೆಯಿರಿ