ಕರ್ನಾಟಕ

karnataka

ETV Bharat / bharat

ಚಳಿಗಾಲದಲ್ಲಿ ಹಿಮ ಆವೃತ: ನವೆಂಬರ್​​ 17ಕ್ಕೆ ಬದರಿನಾಥ್​​ ದೇವಸ್ಥಾನ ಬಾಗಿಲು ಬಂದ್​ - BADRINATH TEMPLE

ಚಾರ್​​ಧಾಮ್​​ ಯಾತ್ರೆಯು ಮುಕ್ತಾಯದ ಹಂತದಲ್ಲಿದೆ. ಬದರಿನಾಥ್​​ ದೇವಸ್ಥಾನದ ಬಾಗಿಲು ಮುಚ್ಚುವ ದಿನಾಂಕವನ್ನು ಪ್ರಕಟಿಸಲಾಗಿದೆ.

ಬದರಿನಾಥ್​​ ದೇವಸ್ಥಾನ ಬಾಗಿಲು ಬಂದ್​
ಬದರಿನಾಥ್​​ ದೇವಸ್ಥಾನ ಬಾಗಿಲು ಬಂದ್​ (ETV Bharat)

By PTI

Published : Oct 12, 2024, 7:47 PM IST

ಗೋಪೇಶ್ವರ (ಉತ್ತರಾಖಂಡ):ಚಳಿಗಾಲ ಆರಂಭ ಮತ್ತು ಹಿಮ ಆವೃತವಾಗುವ ಹಿನ್ನೆಲೆಯಲ್ಲಿ ಉತ್ತರಾಖಂಡದ ಬದರಿನಾಥ ಧಾಮ ದೇವಸ್ಥಾನದ ಬಾಗಿಲನ್ನು ನವೆಂಬರ್ 17 ರಂದು ರಾತ್ರಿ 9.07 ಕ್ಕೆ ಮುಚ್ಚಲಾಗುವುದು ಎಂದು ದೇವಸ್ಥಾನ ಸಮಿತಿ ಶನಿವಾರ ತಿಳಿಸಿದೆ.

ಹಿಂದೂ ಕ್ಯಾಲೆಂಡರ್ ಮತ್ತು ಆಕಾಶಕಾಯಗಳ ಸ್ಥಾನಮಾನದ ಪರಿಶೀಲನೆಯ ನಂತರ ವಿಜಯದಶಮಿ ಸಂದರ್ಭದಲ್ಲಿ ಬದರಿನಾಥನ ಯಾತ್ರೆಯ ಮುಕ್ತಾಯ ದಿನಾಂಕ ಮತ್ತು ಸಮಯವನ್ನು ನಿರ್ಧರಿಸಲಾಗಿದೆ ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಹೇಳಿದ್ದಾರೆ.

ಚಾರ್​ಧಾಮಗಳಲ್ಲಿ ಒಂದಾದ ಬದರಿನಾಥಕ್ಕೆ ಈ ವರ್ಷ 11ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ. ಅದೇ ರೀತಿ ಕೇದಾರನಾಥಕ್ಕೆ 13.5 ಲಕ್ಷಕ್ಕೂ ಹೆಚ್ಚು ಭಕ್ತರು ಪಾದಯಾತ್ರೆ ಮಾಡಿದ್ದಾರೆ. ಈ ಹಿಂದೆ ಘೋಷಿಸಿದಂತೆ, ನವೆಂಬರ್ 3 ರಂದು ಕೇದಾರನಾಥ ಮತ್ತು ನವೆಂಬರ್ 2 ರಂದು ಯಮುನೋತ್ರಿ ಮತ್ತು ಗಂಗೋತ್ರಿಯನ್ನು ಮುಚ್ಚಲಾಗುತ್ತಿದೆ.

ಅದೇ ರೀತಿ, ಅಕ್ಟೋಬರ್ 17 ರಂದು ರುದ್ರನಾಥ, ನವೆಂಬರ್ 4 ರಂದು ತುಂಗನಾಥ ಮತ್ತು ನವೆಂಬರ್ 20 ರಂದು ಮಧ್ಯಮಹೇಶ್ವರ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು. ಪ್ರತಿ ವರ್ಷ ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರನ್ನು ಸೆಳೆಯುವ ಉತ್ತರಾಖಂಡದ ದೇವಾಲಯಗಳು ಹಿಮದಿಂದ ಆವೃತವಾಗಿರುವುದರಿಂದ ಚಳಿಗಾಲದಲ್ಲಿ ಮುಚ್ಚಲ್ಪಡುತ್ತವೆ.

ಇದನ್ನೂ ಓದಿ:ಚಾರ್​ಧಾಮ್​ ಯಾತ್ರೆ: 13 ದಿನದಲ್ಲಿ 42 ಯಾತ್ರಾರ್ಥಿಗಳ ಸಾವು - Chardham Yatra 2024 Pilgrimage

ABOUT THE AUTHOR

...view details