ಕರ್ನಾಟಕ

karnataka

ETV Bharat / bharat

ದೆಹಲಿ ಚಲೋ: ಶಂಭು ಗಡಿಯಲ್ಲಿ ರೈತರನ್ನು ತಡೆದ ಪೊಲೀಸರು - DELHI CHALO

ಹರಿಯಾಣಕ್ಕೆ ಪ್ರವೇಶ ಪಡೆಯಲು ರೈತರ ಬಳಿ ಯಾವುದೇ ಅನುಮತಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

police-stopped-the-protesting-farmers-at-shambhu-border
ಶಂಭು ಗಡಿ ಬಳಿ ಪೊಲೀಸ್​ ಭದ್ರತೆ (ANI)

By ETV Bharat Karnataka Team

Published : Dec 6, 2024, 5:54 PM IST

ನವದೆಹಲಿ: ರಾಷ್ಟ್ರ ರಾಜಧಾನಿಯತ್ತ ದೆಹಲಿ ಚಲೋ ಕಾಲ್ನಡಿಗೆ ಮೆರವಣಿಗೆ ನಡೆಸುತ್ತಿರುವ ರೈತರನ್ನು ಶಂಭು ಗಡಿ ಬಳಿ ಇಂದು ಪೊಲೀಸರು ತಡೆದಿದ್ದು, ಗಡಿ ದಾಟಲು ಅನುಮತಿ ಇಲ್ಲ ಎಂದು ತಿಳಿಸಿದ್ದಾರೆ.

ಈ ವೇಳೆ ಬ್ಯಾರಿಕೇಡ್​ ದಾಟಿ ಬಂದ ರೈತರು ದೆಹಲಿಯತ್ತ ತೆರಳಲು ಮುಂದಾದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಬಳಸಿದರು. ಈ ವೇಳೆ ಅನೇಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.

ಅಂಬಾಲದ ಜಿಲ್ಲಾಡಳಿತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿ ಸೆಕ್ಷನ್​ 163 ಜಾರಿ ಮಾಡಿದೆ. ಈ ವ್ಯಾಪ್ತಿಯಲ್ಲಿ ನಾಲ್ಕೈದು ಜನರಿಗಿಂತ ಹೆಚ್ಚು ಮಂದಿ ಗುಂಪುಗೂಡುವುದನ್ನು ನಿರ್ಬಂಧಿಸಿದೆ. ರೈತರು ಬ್ಯಾರಿಕೇಡ್​ ದಾಟಿ ಮುಂದೆ ಹೋಗದಂತೆ ಹರಿಯಾಣ ಪೊಲೀಸರು ಪದೇ ಪದೇ ಸೂಚನೆ ನೀಡುತ್ತಿದ್ದಾರೆ. ಕೆಲವು ರೈತರು, ರೈತ ಸಂಘಟನೆ ಬಾವುಟ ಹಿಡಿದುಕೊಂಡು ಬ್ಯಾರಿಕೇಡ್​ ತಳ್ಳಿ ಮುನ್ನುಗ್ಗುವ ಪ್ರಯತ್ನ ನಡೆಸಿದ್ದಾರೆ.

ಸ್ಥಳದಲ್ಲಿದ್ದ ಉಪ ಪೊಲೀಸ್ ಆಯುಕ್ತರು, ಗಡಿಯಲ್ಲಿ ಯಾವುದೇ ಕಾಲ್ನಡಿಗೆ, ವಾಹನ ಅಥವಾ ಇತರೆ ಮಾದರಿಯ ಮೆರವಣಿಗೆಗೆ ಅವಕಾಶವಿಲ್ಲ. ನೀವು ಗಡಿ ದಾಟಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಶಂಭು ಗಡಿ ಬಳಿ ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದೆ.

ದೆಹಲಿ ಪೊಲೀಸ್ ಅಧಿಕಾರಿ ಮಾತನಾಡಿ, ಪಂಜಾಬ್​ ರೈತರು ದೆಹಲಿ ಚಲೋಗೆ ಯಾವುದೇ ಅನುಮತಿ ಪಡೆದಿಲ್ಲ. ಅಂಬಾಲದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹರಿಯಾಣಗೆ ಪ್ರವೇಶ ಪಡೆಯುವ ಯಾವುದೇ ಅನುಮತಿ ಪತ್ರ ಅವರ ಬಳಿ ಇಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ರೈತ ನಾಯಕ ಸರ್ವನ್​ ಸಿಂಗ್​ ಪಂದೇರ್​, ರೈತರಿಗೆ ದೆಹಲಿಯಲ್ಲಿ ಶಾಂತಿಯುತ ಮಾತುಕತೆಗೆ ಅವಕಾಶ ನೀಡಬೇಕು. ನಾವು ನಮ್ಮ ಬೇಡಿಕೆಗಳ ಕುರಿತು ಮಾತನಾಡುತ್ತೇವೆ. ಚರ್ಚೆಗೆ ರೈತರು ಸಿದ್ಧ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಸ್ವೀಕರಿಸಬೇಕು ಎಂದರು.

ಅಂಬಾಲದಲ್ಲಿ ಇಂಟರ್​ನೆಟ್​ ಸೇವೆ ಸ್ಥಗಿತ ಮಾಡಲಾಗಿದ್ದು ಬ್ಯಾಂಕಿಂಗ್​, ಮೊಬೈಲ್​ ರಿಚಾರ್ಜ್​ ಸೇವೆ ಮಾತ್ರ ಲಭ್ಯವಿದೆ.

ಇದನ್ನೂ ಓದಿ: ದೆಹಲಿ ಚಲೋ ಪ್ರತಿಭಟನೆ: ಶಂಭು ಗಡಿ ಬಳಿ ಬಿಗಿ ಪೊಲೀಸ್​ ಭದ್ರತೆ

ABOUT THE AUTHOR

...view details