ಕರ್ನಾಟಕ

karnataka

ETV Bharat / bharat

ಭದ್ರತಾಪಡೆಗಳು ನಕ್ಸಲರ ನಡುವೆ ಗುಂಡಿನ ಚಕಮಕಿ: ಮೂವರು ಮಾವೋವಾದಿಗಳ ಎನ್​ಕೌಂಟರ್​ - ಛತ್ತೀಸ್‌ಗಢದ ಬಿಜಾಪುರ ಜಿಲ್ಲೆ

ಛತ್ತೀಸ್​ಗಢದ ಬಿಜಾಪುರದಲ್ಲಿ ನಕ್ಸಲ್​ ವಿರೋಧಿ ಕಾರ್ಯಪಡೆ ಕೋಬ್ರಾ ತಂಡದ ಎನ್​​ಕೌಂಟರ್​ನಲ್ಲಿ ಮೂವರು ನಕ್ಸಲರನ್ನು ಎನ್​ಕೌಂಟರ್​ ಮಾಡಲಾಗಿದೆ.

police-naxalite-encounter-in-bijapur-basaguda
police-naxalite-encounter-in-bijapur-basaguda

By ETV Bharat Karnataka Team

Published : Jan 20, 2024, 7:40 PM IST

ಬಿಜಾಪುರ:ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆದಿದೆ. ಬಸಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಬಲಮೇಂದ್ರ ಬಳಿಯ ಬೆಳಮಗುಟ್ಟದ ಬೆಟ್ಟದಲ್ಲಿ ಯೋಧರು ಮತ್ತು ನಕ್ಸಲೀಯರ ನಡುವಣ ಕಾಳಗದಲ್ಲಿ ಮೂವರು ನಕ್ಸಲೀಯರು ಹತರಾಗಿದ್ದಾರೆ. ಭದ್ರತಾ ಪಡೆಗಳ ಎನ್​ಕೌಂಟರ್​ಗೆ ಬಲಿಯಾದವರಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ನಕ್ಸಲ್​ ಇದ್ದಾನೆ ಎಂದು ತಿಳಿದು ಬಂದಿದೆ. ಉಳಿದ ನಕ್ಸಲೀಯರಿಗಾಗಿ ಗುಂಡಿನ ದಾಳಿ ನಡೆದ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಎನ್‌ಕೌಂಟರ್‌ನಲ್ಲಿ 3 ನಕ್ಸಲೀಯರು ಬಲಿ: ಬಸಗೂಡ ಪೊಲೀಸ್ ಠಾಣೆಯ ಅರಣ್ಯದಲ್ಲಿ ಅನುದಾನಿತ ಪ್ರದೇಶ ಸಮಿತಿ ಡಿವಿಸಿಎಂ ವಿನೋದ್ ಕರ್ಮಾ, ಆವಪಲ್ಲಿ ಎಲ್.ಒ.ಎಸ್.ರಾಜು ಪುಣೆಂ, ಎ.ಎಂ.ವಿಶ್ವನಾಥ್, ಗುಡ್ಡು ತೇಲಂ ಸೇರಿ 20 ರಿಂದ 25 ಶಸ್ತ್ರಸಜ್ಜಿತ ನಕ್ಸಲೀಯರು ಈ ಪ್ರದೇಶದಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧಾರದ ಮೇಲೆ, DRG ಬಿಜಾಪುರ ಮತ್ತು ಕೋಬ್ರಾ 210 ನ ಜಂಟಿ ತಂಡವು ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿತ್ತು. ಶೋಧ ಕಾರ್ಯಾಚರಣೆ ವೇಳೆ ಬೆಲ್ಲಂಗುಟ್ಟದ ಬೆಟ್ಟದಲ್ಲಿ ಬೆಳಗ್ಗೆ 07.30ಕ್ಕೆ ಪೊಲೀಸರು ಮತ್ತು ನಕ್ಸಲೀಯರ ನಡುವೆ ಗುಂಡಿನ ಚಕಮಕಿ ಆರಂಭವಾಗಿತ್ತು. ಈ ಸಂದರ್ಭದಲ್ಲಿ ನಕ್ಸಲರು ಗುಂಡಿನ ದಾಳಿ ಆರಂಭಿಸಿದ್ದರಿಂದ ಇದಕ್ಕೆ ಪ್ರತಿಯಾಗಿ ದಾಳಿ ಮಾಡಿದ ಕೋಬ್ರಾ ಜಂಟಿ ಪಡೆ, ಮೂವರು ನಕ್ಸಲೀಯರನ್ನು ಎನ್​ಕೌಂಟರ್​ ಮಾಡಿದ್ದಾರೆ. ಇದರಲ್ಲಿ ಇಬ್ಬರು ಮಹಿಳೆಯರು ಇದ್ದಾರೆ ಎಂದು ಜಂಟಿ ಕಾರ್ಯಪಡೆಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಶಸ್ತ್ರಾಸ್ತ್ರ ಸೇರಿ ಸ್ಫೋಟಕಗಳ ವಶ: ಘಟನಾ ಸ್ಥಳದಿಂದ ನಿಷೇಧಿತ ಮಾವೋವಾದಿ ಸಂಘಟನೆಯ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಪ್ರಚಾರ ಸಾಮಗ್ರಿಗಳನ್ನು ನಕ್ಸಲ್​ ವಿರೋಧಿ ಜಂಟಿ ಕಾರ್ಯಪಡೆ ಸೈನಿಕರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾವೋವಾದಿಗಳ ಸಮವಸ್ತ್ರಗಳು, ಸ್ಟೂಜ್‌ಗಳು, ಔಷಧಗಳು ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ಸಹ ಇದೇ ವೇಳೆ ಕೋಬ್ರಾ ಕಾರ್ಯಪಡೆ ವಶಪಡಿಸಿಕೊಂಡಿದೆ.

ನಕ್ಸಲೀಯರ ವಿರುದ್ಧ ಆಪರೇಷನ್ ಸೂರ್ಯ ಶಕ್ತಿ: ಜನವರಿ 12 ರಿಂದ 16 ರವರೆಗೆ ಕಂಕೇರ್ ನಲ್ಲಿ ನಕ್ಸಲೀಯರ ವಿರುದ್ಧ ಸೈನಿಕರು ಆಪರೇಷನ್ ಸೂರ್ಯ ಶಕ್ತಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ಕಾರ್ಯಾಚರಣೆ ಅಡಿ ಎಸ್‌ಟಿಎಫ್, ಡಿಆರ್‌ಜಿ, ನಾರಾಯಣಪುರ ಡಿಆರ್‌ಜಿ ಮತ್ತು ಬಿಎಸ್‌ಎಫ್ ಕಂಕೇರ್‌ನಲ್ಲಿ ನಕ್ಸಲೀಯರ ಗುಪ್ತಚರ ನೆಲೆಗಳನ್ನು ನಾಶಪಡಿಸಿತ್ತು.

ಈ ಅವಧಿಯಲ್ಲಿ ಸೈನಿಕರು ಮತ್ತು ನಕ್ಸಲೀಯರ ನಡುವೆ ಹಲವೆಡೆ ಎನ್‌ಕೌಂಟರ್‌ಗಳೂ ನಡೆದಿದ್ದವು. ನಾಲ್ವರು ನಕ್ಸಲೀಯರನ್ನು ಈ ಸಂದರ್ಭದಲ್ಲಿ ಬಂಧಿಸಲಾಗಿತ್ತು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಇದೇ ವೇಳೆ ವಶಪಡಿಸಿಕೊಳ್ಳಲಾಗಿತ್ತು. ಈ ಕಾರ್ಯಾಚರಣೆ ಸಂದರ್ಭದಲ್ಲಿ ನಕ್ಸಲೀಯರ ಬ್ಯಾರೆಲ್ ಗ್ರೆನೇಡ್ ಲಾಂಚರ್ (ಬಿಜಿಎಲ್) ತಯಾರಿಸುವ ಕಾರ್ಖಾನೆಯನ್ನು ಸಹ ನಾಶ ಮಾಡಲಾಗಿತ್ತು.

ABOUT THE AUTHOR

...view details